ಭೂ ಸ್ವಾಧೀನದ ಹೆಸರಲ್ಲಿ ಕೋಟ್ಯಂತರ ರೂ.ಲೂಟಿ: ರೇವಣ್ಣ
Team Udayavani, Jan 18, 2017, 3:22 PM IST
ಹಾಸನ: ಜಿಲ್ಲೆಯಲ್ಲಿ ಭೂ ಸ್ವಾಧೀನದ ಹೆಸರಿನಲ್ಲಿ ಕೋಟ್ಯಂತರ ರೂ.ಲೂಟಿ ನಡೆಯುತ್ತಿದೆ. ಸರ್ಕಾರಿ ವಕೀಲರು ಯಾವ ಕೇಸನ್ನೂ ಗೆಲ್ಲುತ್ತಿಲ್ಲ. ಆರು ಕೋಟಿ ರೂ. ಪರಿಹಾರ ನೀಡಬೇಕೆಂಬ ತೀರ್ಪಿಗೆ ಮೇಲ್ಮನವಿ ಸಲ್ಲಿಸುವುದು ಬೇಡ ಎಂದು ಸರ್ಕಾರಿ ವಕೀಲರೇ ಅಭಿಪ್ರಾಯ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಎನ್.ಆರ್.ಸರ್ಕಲ್‌ನಿಂದ ಹೊಸ ಬಸ್ ನಿಲ್ದಾಣದ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿರುವ ಜಾಗಕ್ಕೆ
(ಸಂತಫಿಲೋಮಿನಾ ಶಾಲೆ ಜಾಗ) ಈ ಹಿಂದೆ 44 ಲಕ್ಷ ರೂ. ಪರಿಹಾರ ನೀಡಲಾಗಿದೆ. ರಸ್ತೆ ಮಧ್ಯದಿಂದ ಎರಡೂ ಕಡೆಗೆ ತಲಾ 44 ಅಡಿ ಬಿಟ್ಟು ಕಟ್ಟಡ ಕಟ್ಟಬೇಕು ಎಂಬ ಕಾನೂನಿದೆ. ಆ ಕಾನೂನು ಪ್ರಕಾರ ರಸ್ತೆಗೆ 22 ಅಡಿ ಬಿಟ್ಟು ಕೊಡಬೇಕು.
ಆದರೆ, ಅದೇ ಜಾಗಕ್ಕೆ ಪರಿಹಾರ ನೀಡಲಾಗಿದೆ. ಆದರೂ, ಆ ಪರಿಹಾರ ಸಾಲದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 6 ಕೋಟಿ ರೂ. ಪರಿಹಾರ ನೀಡಬೇಕೆಂದು ತೀರ್ಪು ಬಂದಿದೆ. ಹಾಸನದಲ್ಲಿ ಕೋಟ್ಯಂತರ ರೂ.ಪರಿಹಾರ ನೀಡುವುದಾದರೆ ಚನ್ನರಾಯಟ್ಟಪಣದಲ್ಲಿ ರಾಷ್ಟಿ$›àಯ ಹೆದ್ದಾರಿ ನಿರ್ಮಾಣಕ್ಕೆ ಮನೆ, ಭೂಮಿ ಕಳೆದುಕೊಂಡ ರೈತರಿಗೇಕೆ ಹೆಚ್ಚಿನ ಪರಿಹಾರ ನೀಡಲಿಲ್ಲ ಎಂದು ಪ್ರಶ್ನಿಸಿದರು.
ವಕೀಲರ ವಾದ: ಸರ್ಕಾರದ ವಿರುದ್ಧವಾಗಿ ಈ ರೀತಿಯ ತೀರ್ಪು ಹೊರ ಬರಬೇಕಾದರೆ ಸರ್ಕಾರಿ ವಕೀಲರು ಯಾವ ರೀತಿ ವಾದ ಮಾಡಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು. ಭೂ ಸ್ವಾಧೀನದಲ್ಲಿ ಅಧಿಕಾರಿಗಳು, ಸರ್ಕಾರಿ ವಕೀಲರು ಸೇರಿಕೊಂಡು ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ದಾಖಲೆಗಳನ್ನೇ ಕೊಡುವುದಿಲ್ಲ. ಸರ್ಕಾರಿ ವಕೀಲರು ಸಮರ್ಥವಾಗಿ ವಾದ ಮಂಡಿಸುವುದಿಲ್ಲ. ಹಾಗಾಗಿ ಮೇಲ್ಮನವಿ ಸಲ್ಲಿಸಿದವರ ಪರವಾಗಿ ತೀರ್ಪು ಬಂದು ಸರ್ಕಾರ ಕೋಟ್ಯಂತರ ರೂ. ಪರಿಹಾರ ನೀಡುವ ಪರಿಸ್ಥಿತಿ ಎದುರಾಗುತ್ತಿದೆ ಎಂದರು.
ಮಾಹಿತಿ ನೀಡಿ: ಸರ್ಕಾರಿ ವಕೀಲರು ಸರ್ಕಾರದ ಕೇಸ್‌ಗಳನ್ನು ಗೆದ್ದಿದ್ದಾರೆ ಎಂಬುದನ್ನು ಕಾನೂನು ಸಚಿವರು ಮಾಹಿತಿ ನೀಡಿದರೆ ಅವರಿಗೆ ಕೈ ಮುಗಿದು ನಮಸ್ಕಾರ ಮಾಡುತ್ತೇನೆ ಎಂದರು. ಈ ಪ್ರಕರಣದಲ್ಲಿ ಪರಿಹಾರ ನೀಡಿ ಕೋಟ್ಯಂತರ ರೂ. ಲೂಟಿ ಹೊಡೆಯಲು ಬಿಡಲ್ಲ. ಅರ್ಜಿ ಬರೆಯುವುದು ನನಗೆ ಗೊತ್ತಿಲ್ಲವೇ ? ಉಪ ವಿಭಾಗಾಧಿಕಾರಿಯವರು ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ನಾನು ಏನು ಮಾಡಬೇಕೋ ಮಾಡ್ತೇನೆ. ಇಂತಹ ಅಕ್ರಮ ನಡೆಸುವ ಕೆಲವು ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜವಾಬ್ದಾರಿಯೇ ಇಲ್ಲ: ಸರ್ಕಾರದ ಪರ ತೀರ್ಪು ಬಂದರೂ ಜಿಲ್ಲಾಧಿಕಾರಿಯವರು ಈ ಬಗ್ಗೆ ಪರಿಶೀಲನೆ ನಡೆಸುವ ಕನಿಷ್ಠ ಜವಾಬ್ದಾರಿಯನ್ನೂ ನಿರ್ವಹಿಸುತ್ತಿಲ್ಲ.
ಜಿಲ್ಲಾಧಿಕಾರಿಯವರು ಸರ್ಕಾರಿ ಕೆಲಸ ಮಾಡುವುದಕ್ಕಿಂತ ಕೆಮ್ಮಣ್ಣುಗುಂಡಿ ಮತ್ತಿತರ ಪ್ರವಾಸಿ ತಾಣಗಳಲ್ಲಿ ಸುತ್ತಾಡುವುದೇ ಜಾಸ್ತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಎಚ್.ಎಸ್. ಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡೀಸಿ ವಿರುದ್ಧ ರೇವಣ್ಣ ವಾಗ್ಧಾಳಿ
ಹಾಸನ: “ಜಿಲ್ಲಾಧಿಕಾರಿ ವಿ.ಚೈತ್ರಾ ಆ ಮಹತ್ವದ ಹುದ್ದೆಗೆ ಅನ್‌ಫಿಟ್. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಪರಿಹರಿಸಲು ಸಾಧ್ಯವಿಲ್ಲದಿದ್ದರೆ ಜಿಲ್ಲಾಧಿಕಾರಿ ಇನ್ನಾವ ಸೇವೆ ಮಾಡ್ತಾರೆ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ವಾಗ್ಧಾಳಿ ನಡೆಸಿದರು. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾಧಿಕಾರಿಗಳು
ಹಾಸನದಲ್ಲಿ ಸೇವೆ ಮುಗಿಸಿ ನೆಮ್ಮದಿಯಾಗಿ ಉತ್ತರ ಪ್ರದೇಶಕ್ಕೆ ಹೋಗೋ ಹಾಗೆ ಕಾಣಲ್ಲ. ರಾಜಕಾರಣಿಗಳ ಮಾತು ಕೇಳಿ ಯಾವುದಾದರೂ ವಿವಾದದಲ್ಲಿ ಸಿಕ್ಕಾಕೊಂಡು ಸಮಸ್ಯೆ ಎದರಿಸಬೇಗುತ್ತದೆ ಎಂದರು.
ಅರಸೀಕೆರೆ ಎಪಿಎಂಸಿ ಚುನಾಯಿತ ಆಡಳಿತ ಮಂಡಳಿ ಅಧಿಕಾರವಧಿ ಮುಗಿದಿದ್ದರೂ ಚುನಾವಣೆ ನಡೆಸಲು ಸರ್ಕಾರಕ್ಕೆ ಶಿಫಾರಸು ಮಾಡಲಿಲ್ಲ. ಜಿಲ್ಲೆಯ ನಾಲ್ಕು ಎಪಿಎಂಸಿ ಗಳಿಗೆ ನಡೆದ ಚುನಾವಣೆ ಸಂದರ್ಭದಲ್ಲಿಯೇ ಅರಸೀಕೆರೆ ಎಪಿಎಂಸಿಗೂ ಚುನಾವಣೆ ನಡೆಸಲು ಏನು ಅಡ್ಡಿಯಾಗಿತ್ತು ? ಚುನಾವಣೆ ನಡೆಸುವಂತೆ ಏಕೆ ಸರ್ಕಾರಕ್ಕೆ ಜಿಲ್ಲಾಧಿಕಾರಿಯವರು ಶಿಫಾರಸು ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಆಸಕ್ತಿಯೇ ಇಲ್ಲ: ಕೇಂದ್ರ ಸರ್ಕಾರದಿಂದ ಮಂಜೂರಾದ ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ. ಜಿಲ್ಲಾಧಿಕಾರಿಯವರು ಹಾಗೂ ಜಿಪಂ ಸಿಇಒ ಕೇಂದ್ರ ಸರ್ಕಾರದ ಯೋಜನೆಗಳ ನಿರ್ಲಕ್ಷ್ಯದಿಂದ ಎಚ್.ಡಿ.ದೇವೇಗೌಡರಿಂದ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆಸುವೆ. ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ನೋಡೆಲ್ ಅಧಿಕಾರಿ ನೇಮಿಸುವಂತೆಯೂ ಒತ್ತಾಯಿಸುವೆ ಎಂದರು.
ಮನ್ನಣೆಯೇ ಇಲ್ಲ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವಿರುವ ಹಳ್ಳಿಗಳ ಪಟ್ಟಿ ಮಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬರದ ಪತ್ರಕ್ಕೂ ಜಿಲ್ಲಾಧಿಕಾರಿಯವರು ಮನ್ನಣೆ ನೀಡುವುದಿಲ್ಲ ಎಂದಾದರೆ ನಾವು ಸುಮ್ಮನಿರಲು ಸಾಧ್ಯವೇ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.