ಹೇಮೆ ಹಿನ್ನೀರಿನಲ್ಲಿ ಮುಳುಗಿದ ಚರ್ಚ್‌

Team Udayavani, Aug 1, 2018, 3:47 PM IST

has.jpg

ಹಾಸನ: ಭರ್ತಿಯಾದ ಹೇಮಾವತಿ ಜಲಾಶಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಈಗ ಜಲಾಶಯದ ಕ್ರಸ್ಟ್‌ಗೇಟ್‌ಗಳಲ್ಲಿ ನೀರಿನ ಹರಿವನ್ನು ಸ್ಥಗಿತಗೊಳಿಸಿದ ನಂತರ ಹೇಮಾವತಿ ಹಿನ್ನೀರಿನ ಪ್ರದೇಶಗಳು ಪ್ರವಾಸಿ ತಾಣ ಗಳಾಗಿವೆ. ಕೋನಾಪುರ ದ್ವೀಪ ಹಾಗೂ ಶೆಟ್ಟಿಹಳ್ಳಿಯ ಹಳೆಯ ಚರ್ಚ್‌ ಪ್ರವಾಸಿಗರನ್ನು ಸೆಳೆಯುತ್ತಿವೆ.

ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿರುವ ಪುರಾತನ ಚರ್ಚ್‌ ತೇಲುವ ಹಡಗಿನಂತೆ ಗೋಚರಿಸುತ್ತಿದೆ. ಈ ಹಿಂದೆ ಕೆಲವು ಚಲನಚಿತ್ರಗಳ ಚಿತ್ರೀಕರಣದ ತಾಣ ವಾಗಿದ್ದ ಚರ್ಚ್‌ ಈಗ ಪ್ರವಾಸಿಗರ ತಾಣವಾಗಿದೆ. ಜಲಾಶಯದ ನೀರು ಇಳಿದ ಬೇಸಿಗೆಯ ಸಂದರ್ಭದಲ್ಲಿ ಯುವಜನರ ಮೋಜಿನ ತಾಣವಾಗುವ ಶೆಟ್ಟಿಹಳ್ಳಿ ಹಳೆಯ ಚರ್ಚ್‌ ಪರಿಸರ ಮಳೆಗಾಲದಲ್ಲಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.

1860 ರಲ್ಲಿ ಪ್ರಂಚ್‌ ಪಾದ್ರಿಗಳಾದ ಅಬ್ಬೆ – ದಬ್ಬೆ ಎಂಬುವರ ನೇತೃತ್ವದಲ್ಲಿ ನಿರ್ಮಾಣವಾಗಿದ್ದ ಚರ್ಚ್‌ ಹೇಮಾವತಿ ಜಲಾಶಯದ ನಿರ್ಮಾಣವಾಗಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ನಿಲುಗಡೆ ಮಾಡಿದ ನಂತರ ಮುಳುಗಡೆ ಪ್ರದೇಶವಾಯಿತು.

ಜಲಾಶಯವು ಭರ್ತಿಯಾದ ಸಂದರ್ಭದಲ್ಲಿ ಬಹುಪಾಲು ಮುಳುಗುವ ಚರ್ಚ್‌ ಮುಳುಗುವ ಹಡಗಿನಂತೆ ಗೋಚರಿಸುತ್ತದೆ. ಹಾಗಾಗಿ ಮಂಗಳೂರು -ಬೆಂಗಳೂರು ನಡುವೆ ಸಂಚ ರಿಸುವ ಪ್ರವಾಸಿಗರು ಸಮಯ ಸಿಕ್ಕರೆ ಶೆಟ್ಟಿಹಳ್ಳಿ ಚರ್ಚ್‌ ವೀಕ್ಷಿಸಿ ಫೋಟೋ ಕ್ಲಿಕ್ಕಿಸಿ ಕೊಂಡು ಹೋಗುತ್ತಾರೆ.

ಹಾಸನದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಶೆಟ್ಟಿಹಳ್ಳಿ ಪ್ರಮುಖ ಗ್ರಾಮ. ಹಾಸನದಿಂದ ಶಂಕರನಹಳ್ಳಿ – ಕಲ್ಲಹಳ್ಳಿ ಮಾರ್ಗವಾಗಿ ಶೆಟ್ಟಿಹಳ್ಳಿ ತಲಪ ಬಹುದು. ಹಾಸನ – ಅರಕಲಗೂಡು ರಸ್ತೆಯಲ್ಲಿ ಕಟ್ಟಾಯ ಗ್ರಾಮ ಕಡೆಯಿಂದಲೂ ಶೆಟ್ಟಿಹಳ್ಳಿಗೆ ಹೋಗಬಹುದು.

ಹೇಮಾವತಿ ಜಲಾಶಯದಲ್ಲಿ ಕಳೆದ 36 ವರ್ಷಗಳಿಂದ ನೀರು ನಿಲ್ಲಿಸಲಾಗುತ್ತಿದೆ. ಅಷ್ಟು ವರ್ಷಗಳಿಂದಲೂ ಶೆಟ್ಟಿಹಳ್ಳಿಯ
ಚರ್ಚ್‌ ಕೆಲವು ವರ್ಷಗಳ ಮಳೆಗಾಲದಲ್ಲಿ ಭಾಗಶಃ, ಜಲಾಶಯ ಭರ್ತಿಯಾದ ವರ್ಷ ದಲ್ಲಿ ಬಹುಪಾಲು ಮುಳುಗುತ್ತದೆ.

ಆದರೂ ಚರ್ಚ್‌ನ ಗೋಡೆಗಳು, ಕಮಾನುಗಳು ಮಾತ್ರ ಕುಸಿದು ಬಿದ್ದಿಲ್ಲ. ಇದು ಅಂದಿನ ಗುಣ ಮಟ್ಟದ ಕಾಮಗಾರಿಗೆ
ಸಾಕ್ಷಿಯಾದಂತಿದೆ. ಬೇಸಿಗೆ ಕಾಲದಲ್ಲಿ ನೀರು ಇಳಿದ ನಂತರ ಚರ್ಚ್‌ ಸುತ್ತಾಡಿ ಬರಬಹುದು. ಈಗ ನೀರು ತುಂಬಿರುವುದರಿಂದ ದೂರದಿಂದಲೇ ಚರ್ಚ್‌ನ ತುದಿಯ ಗೋಡೆಗಳು ಜಲ ರಾಶಿಯ ನಡುವೆ ಮಳುಗುತ್ತಿರುವ ಹಡಗಿನಂತಹ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.  

ಟಾಪ್ ನ್ಯೂಸ್

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

7-sirsi

Monkey disease: ಶೀಘ್ರ ಶಿರಸಿಗೆ‌ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.