ನಾಗವಾರ ಬಳಿ ಆನೆ ಶಿಬಿರ ನಿರ್ಮಾಣ
Team Udayavani, Dec 23, 2017, 3:24 PM IST
ಹಾಸನ: ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ತಡೆಯಲು ಆನೆ ಕಾರಿಡಾರ್ ಮತ್ತು ಆನೆಧಾಮ ನಿರ್ಮಿಸಬೇಕೆಂಬ ಬೇಡಿಕೆಗಳ ಪೈಕಿ ಆನೆಧಾಮ ನಿರ್ಮಾಣದ ಬೇಡಿಕೆ ಈಡೇರುವ ಸಮಯ ಸನ್ನಿಹಿತವಾಗಿದೆ.
ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶ ಆಲೂರು ತಾಲೂಕು ನಾಗವಾರ ಬಳಿ ಆನೆ ನಿರ್ಮಾಣ ಆರಂಭವಾಗಿದ್ದು, 1.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಆನೆಧಾಮದ ಕಾಮಗಾರಿ ಮಾರ್ಚ್ ಅಂತ್ಯದ ವೇಳೆಗೆ ಮುಗಿಯುವ ಸಾಧ್ಯತೆ ಇದೆ.
ಆನೆಧಾಮ ನಿರ್ಮಾಣಕ್ಕೆ ಹಣ ಬಿಡುಗಡೆ: ಪ್ರಮುಖವಾಗಿ ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಕಾಡಾನೆಗಳ ಉಪಟಳ ಸಾಮಾನ್ಯವಾಗಿದೆ. ಪ್ರತಿ ವರ್ಷವೂ ಹಲವು ಜೀವಹಾನಿ, ಲಕ್ಷಾಂತರ ರೂ. ಮೌಲ್ಯದ ಬೆಳೆಹಾನಿಯಿಂದ ಮಲೆನಾಡು ಪ್ರದೇಶದ ಜನರು ರೋಸಿಹೋಗಿದ್ದಾರೆ.
ಅನಾಹುತ ಸಂಭವಿಸಿದಾಗಲೆಲ್ಲಾ ಆನೆ ಕಾರಿಡಾರ್ ಹಾಗೂ ಆನೆಧಾಮ ಸ್ಥಾಪನೆ ಮಾಡಿ ಕಾಡಾನೆಗಳ ಉಪಟಳ ತಪ್ಪಿಸಬೇಕೆಂಬ ಬೇಡಿಕೆಗೆ ಅರಣ್ಯ ಇಲಾಖೆ ಸ್ಪಂದಿಸಿದೆ. ಆನೆ ಕಾರಿಡಾರ್ ಸ್ಥಾಪನೆ ಬಹುಕೋಟಿ ರೂ. ವೆಚ್ಚದ ಯೋಜನೆ. ಅದು ಸದ್ಯಕ್ಕೆ ಜಾರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಆನೆಧಾಮ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು, ಕಾಮಗಾರಿಯೂ ಆರಂಭವಾಗಿದೆ. ಹಾಗಾಗಿ ಮಲೆನಾಡು ಪ್ರದೇಶದ ಜನರ ಒಂದು ಬೇಡಿಕೆ ಈಡೇರುತ್ತಿದೆ.
ಅರಣ್ಯ ಇಲಾಖೆಗೆ ಅನುಕೂಲ: ಆನೆಧಾಮ ನಿರ್ಮಾಣದಿಂದ ಕಾಡಾನೆಗಳ ದಾಳಿ ನಿಯಂತ್ರಣವೇನೂ ಆಗದು. ಶ್ರೀಲಂಕಾದಲ್ಲಿರುವಂತೆ ಬೃಹತ್ ಪ್ರಮಾಣದಲ್ಲಿ ಆನೆಧಾಮ ನಿರ್ಮಾಣ ಮಾಡಿದ್ದರೆ ಕಾಡಾನೆಗಳ ಉಪಟಳ ತಪ್ಪಿಸಬಹುದಿತ್ತು. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆನೆಧಾಮ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಅರಣ್ಯವಿಲ್ಲ. ಆದರೆ ಅರಣ್ಯ ಇಲಾಖೆಗೆ ಆನೆಧಾಮ ನಿರ್ಮಾಣದಿಂದ ಪ್ರಯೋಜನವಿದೆ. ಪುಂಡಾನೆಗಳನ್ನು ಹಿಡಿದು ಪಳಗಿಸಿ ಇಲಾಖೆಯ ಕೆಲಸಗಳಿಗೆ ಬಳಸಿಕೊಳ್ಳಲು ಆನೆಧಾಮದಿಂದ ಸಹಾಯವಾಗಲಿದೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ, ಸೋಮವಾರಪೇಟೆ ತಾಲೂಕು ತಿತಿಮತಿ, ಶಿವಮೊಗ್ಗ ತಾಲೂಕು ಸಕ್ರೆಬೈಲುನಲ್ಲಿರುವ ಆನೆ ಶಿಬಿರಗಳ ಮಾದರಿಯಲ್ಲಿ ಆಲೂರು ತಾಲೂಕಿನ ನಾಗವಾರದಲ್ಲಿ ಆನೆ ಶಿಬಿರ ನಿರ್ಮಾಣವಾಗುತ್ತಿದ್ದು, ಆ ಶಿಬಿರದಲ್ಲಿ ಪಳಗಿಸಿದ 4 ರಿಂದ 6 ಆನೆಗಳಿರುತ್ತವೆ.
ಗಿಡಗಂಟಿಗಳ ತೆರವು ಕಾರ್ಯ ಆರಂಭ: ಕಳೆದೊಂದು ವರ್ಷದಿಂದ ಆನೆ ಶಿಬಿರ ಅಥವಾ ಆನೆಧಾಮ ನಿರ್ಮಾಣಕ್ಕೆ ಜಾಗ ಹುಡುಕುತ್ತಿದ್ದ ಅರಣ್ಯಾಧಿಕಾರಿಗಳು ಆಲೂರು ತಾಲೂಕು ನಾಗವಾರ ಮೀಸಲು ಅರಣ್ಯದಲ್ಲಿ ಸರ್ವೇ ನಂ 36 ಮತ್ತು 37ರ ಸುಮಾರು 25 ಎಕರೆ ಜಾಗವನ್ನು ಅರಣ್ಯ ಇಲಾಖೆ ಹಾಸನ ವಿಭಾಗದ ಅಧಿಕಾರಿಗಳು ಆನೆ ಶಿಬಿರಕ್ಕೆ ಗುರ್ತಿಸಿ ಆಯ್ಕೆ ಮಾಡಿದ್ದರು, ಈ ಪ್ರದೇಶ ಪರಿವೀಕ್ಷಿಸಿದ ಸರ್ಕಾರದಿಂದಲೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಮ್ಮತಿಸಿದ್ದು ಈಗ ಸರ್ಕಾರದಿಂದ ಅನುಮತಿ ಪಡೆದುಕೊಂಡು ಹಣ ಬಿಡುಗಡೆ ಮಾಡಿದ್ದಾರೆ. ಆ ಪ್ರದೇಶಗಳಲ್ಲಿ ಗಿಡಗಂಟಿಗಳನ್ನು ತೆರವು ಮಾಡುವ ಕೆಲಸ ಈಗ ಆರಂಭವಾಗಿದೆ.
ಹಿಡಿದ ಆನೆ ಸ್ಥಳಾಂತರ ತಪ್ಪುತ್ತದೆ: ಆನೆ ಶಿಬಿರ ನಿರ್ಮಾಣದ ಬಗ್ಗೆ “ಉದಯವಾಣಿ’ಗೆ ಮಾಹಿತಿ ನೀಡಿದ ಹಾಸನ ವಿಭಾಗದ ಉಪ ಆರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಕೇಂದ್ರ ಮತ್ತು ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆದು ಎರಡು ವರ್ಷಗಳ ಹಿಂದೆ ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ 23 ಕಾಡಾನೆಗಳನ್ನ ಹಿಡಿದು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಎರಡು ಪುಂಡಾನೆಗಳನ್ನು ಹಿಡಿದು ಕಾಕನಕೋಟೆ, ಸಕ್ರೆಬೈಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನೂ 27 ಕಾಡಾನೆಗಳನ್ನು ಹಿಡಿಯಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ನಾಗವಾರ ಮೀಸಲು ಅರಣ್ಯದಲ್ಲಿಯೇ ಆನೆ ಶಿಬಿರ ಸ್ಥಾಪನೆಯಾದರೆ ಆಲೂರು – ಸಕಲೇಶಪುರ ಭಾಗದಲ್ಲಿ ಹಿಡಿದ ಪುಂಡಾನೆಗಳನ್ನು ಬೇರೆಡೆ ಸ್ಥಳಾಂತ ಮಾಡುವ ಶ್ರಮ ತಪ್ಪುತ್ತದೆ. ನಾಗವಾರ ಆನೆ ಶಿಬಿರದಲ್ಲಿಯೇ ಅವುಗಳನ್ನು ಪಳಗಿಸಿ ಇಲಾಖೆಯ ಕೆಲಸಕ್ಕೆ ಬಳಸಿಕೊಳ್ಳಬಹುದು. ಆನೆ ಶಿಬಿರ ಸ್ಥಾಪನೆಯಿಂದ ಕಾಡಾನೆಗಳ ಸಂಪೂರ್ಣ ಉಪಟಳ ತಪ್ಪದಿದ್ದರೂ ಆ ಭಾಗದ ಜನರಿಗೆ ಪುಂಡಾನೆಗಳ ಕಾಟದಿಂದ ಸ್ಪಲ್ಪವಾದರೂ ರಿಲೀಫ್ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.
ಹೆಚ್ಚೇನೂ ಉಪಯೋಗವಿಲ್ಲ: ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಸುಮಾರು 35 ಕಾಡಾನೆಗಳು ಬೀಡುಬಿಟ್ಟಿವೆ. ರೈತರು ಬೆಳೆದ ಲಕ್ಷಾಂತರ ರೂ. ಮೌಲ್ಯದ ಬೆಳೆಗಳನ್ನು ನಾಶಪಡಿಸಿವೆ. ಕಳೆದ ಒಂದು ತಿಂಗಳಲ್ಲಿ ಕಾಡಾನೆಗಳಿಗೆ ಇಬ್ಬರು ಬಲಿಯಾಗಿದ್ದಾರೆ.
ವನ್ಯಜೀವಿಗಳು ಸಹ ರಾಷ್ಟ್ರೀಯ ಸಂಪತ್ತು. ಮನುಷ್ಯನಿಗೆ ಎಷ್ಟು ಬದುಕಲು ಹಕ್ಕಿದೆಯೋ ಅಷ್ಟೇ ಹಕ್ಕು ಪ್ರಾಣಿಗಳೂ ಇದೆ. ನಾಗವಾರದಲ್ಲಿ ಆನೆಶಿಬಿರ ಸ್ಥಾಪಿಸಿದರೆ ಸೆರೆಹಿಡಿಯಲಾದ ಕಾಡಾನೆಗಳನ್ನು ನಾಗವಾರದಲ್ಲಿಯೇ ಪಳಗಿಸಬಹುದು.
ಪುಂಡಾನೆಗಳನ್ನು ಬೇರೆಕಡೆಯಿಂದ ಸಾಕಾನೆಗಳನ್ನು ತರುವ ಬದಲು ಇಲ್ಲಿಯೇ ಪಳಗಿದ ಆನೆಗಳ ಬಳಸಿಕೊಂಡು ಉಪಟಳ ನೀಡೋ ಕಾಡಾನೆಗಳ ಕಾಟ ಸ್ಪಲ್ಪ ಪ್ರಮಾಣದಲ್ಲಿ ತಪ್ಪಿಸಬಹುದು. ಹೆಚ್ಚಿನ ಉಪಯೋಗವೇನೂ ಆಗುವುದಿಲ್ಲ. ಕಾಡಾನೆಗಳ ದಾಳಿಯಿಂದ ಬೇಸತ್ತಿರುವ ಜನರಿಗೆ ಸ್ವಲ್ಪ ಸಮಾಧಾನವಾಗಹುದು ಎನ್ನುತ್ತಾರೆ ಪರಿಸರವಾದಿ ಎಚ್.ಎ.ಕಿಶೋರ್ ಕುಮಾರ್.
ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.