18 ವರ್ಷಗಳಿಂದ ಕತ್ತಲಲ್ಲೇ ಬದುಕು ಸಾಗಿಸುತ್ತಿದೆ ಕುಟುಂಬ
ಕತ್ತಲಾದರೆ,ಕಾಡು ಪ್ರಾಣಿಗಳ ಕಾಟ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ
Team Udayavani, Dec 22, 2020, 3:39 PM IST
ಹಳೇಬೀಡು: ಹೋಬಳಿಯ ಗಂಗೂರು ಗ್ರಾಮದ ಕಾಡಂಚಿನ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು 18 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಕಗ್ಗತ್ತಲಲ್ಲೇ ಕಾಲ ಕಳೆಯುತ್ತಿದೆ. ಗ್ರಾಮದ ವಿಶಾಲಾಕ್ಷಿ ಮತ್ತು ಪರ್ವತೇಗೌಡ ತಮ್ಮ ಇಬ್ಬರು ಮಕ್ಕಳೊಂದಿಗೆ ತಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಕರೆಂಟ್‌ಗಾಗಿ 18 ವರ್ಷದಿಂದ ಸತತ ಪ್ರಯತ್ನ ನಡೆಸುತ್ತಿದ್ದರೂ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಸಂಬಂಧ ಸೆಸ್ಕ್ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಗ್ರಾಮ ಪಂಚಾಯ್ತಿಯಿಂದ ಮುಂಜೂರಾಗಿದ್ದ ವಸತಿ ಯೋಜನೆಯ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಆರಂಭದಲ್ಲಿ ಪಕ್ಕದ ಜಮೀನಿನ ಮಾಲಿಕರ ಸಹಕಾರದಿಂದ ಕೊಳವೆ ಬಾವಿಯಿಂದ ನೀರು ಪಡೆಯುತ್ತಿದ್ದರು.ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡ ದಿನದಿಂದಲೂ ಸೆಸ್ಕ್, ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟಿದ್ದೇವು. ಸ್ಥಳೀಯ ಅಸಹಕಾರದಿಂದ ನಮಗೆ ಇಲ್ಲಿಯವರೆಗೂ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಮನೆಯೊಡತಿ ವಿಶಾಲಾಕ್ಷಿ.
ಕಾಡು ಪ್ರಾಣಿಗಳ ಭಯ: ಬೆಳಗ್ಗೆ ಹೊತ್ತು ಕಾಲ ಕಳೆಯಬಹುದು. ಸಂಜೆ ಆಗುತ್ತಿದ್ದಂತೆ ಕಾಡಂಚಿನಲ್ಲಿ ಮನೆ ಇರುವುದರಿಂದ ಪ್ರಾಣಿಗಳ ಭಯ ಶುರುವಾಗುತ್ತದೆ. ಇಂತಹ ಆಧುನಿಕ ಯುಗದಲ್ಲಿ ಕತ್ತಲಲ್ಲೇ ಜೀವನ ನಡೆಸುವುದು ನಿಜಕ್ಕೂ ದುಸ್ತರವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಮನೆಯ ಮಾಲಿಕಪರ್ವತೇಗೌಡ..ಗಂಗೂರು ಗ್ರಾಮದ ಜಮೀನುಗಳ ಮೂಲಕ ಹೈದಳ್ಳ ಕಾವಲು ಕಾಡಿನಲ್ಲಿ ಮುಖ್ಯಲೈನ್ ಹಾದು ಹೋಗಿದ್ದು, ತ್ರಿಫೇಸ್ ಸಂಪರ್ಕ ಕಲ್ಪಿಸಲು ಮಾತ್ರ ಸಾಧ್ಯವಾಗಿದೆ. ಮನೆಗೆ ಸಂಪರ್ಕ ಕಲ್ಪಿಸಲು ಬೇರೆಯದ್ದೇ ಲೈನ್ ಮಾರ್ಗದ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.
ಬೀಟ್ ಸಮಯದಲ್ಲಿ ಗಂಗೂರು ಗ್ರಾಮಕ್ಕೆ ಭೇಟಿ ನೀಡಿದಸಂದರ್ಭ ದಲ್ಲಿ ಗ್ರಾಮದಿಂದ 3 ಕಿ.ಮೀ. ದೂರದಕಾಡಂಚಿನಲ್ಲಿ ಸಣ್ಣದಾಗಿ ಬೆಳಕುಕಾಣಿಸಿಕೊಂಡಿತು. ಅಲ್ಲಿಗೆ ಭೇಟಿ ನೀಡಿದಾಗ ವಿದ್ಯುತ್ ಸಂಪರ್ಕ ವಿಲ್ಲದೇ ಸೀಮೆಎಣ್ಣೆ ಬುಡ್ಡಿ ಹಿಡಿದು ವಾಸಿಸುತ್ತಿರುವುದುಕಂಡುಬಂತು. ತಕ್ಷಣ ಕೆಇಬಿ ಗಮನಕ್ಕೂ ತಂದಿದ್ದೇನೆ. ಶೀಘ್ರ ಅವರ ಮನೆಗೆ ವಿದ್ಯುತ್‌ಕಲ್ಪಿಸಿಕೊಟ್ಟರೆ ಬಡವರ ಮನೆಗೆ ಬೆಳಕಾದಂತಾಗುತ್ತದೆ. –ಪ್ರಭಾಕರ್, ಹೆಡ್ ಕಾನ್ಸ್‌ಟೇಬಲ್, ಹಳೇಬೀಡು
ಪರ್ವತೇ ಗೌಡರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಜಂಕ್ಷನ್ ಪಾಯಿಂಟ್‌ನಿಂದ ಹತ್ತುಕಂಬ ಹಾಕಬೇಕಿದೆ. ಆ ಕಂಬಗಳನ್ನು ರೈತರ ಕೃಷಿ ಜಮೀನಿನ ಮಧ್ಯೆ ಹಾಕಬೇಕು, ಇದಕ್ಕೆ ಜಮೀನಿನವರ ಯಾವುದೇ ತಗಾದೇ ಇರಬಾರದು. ಸ್ಥಳೀಯರನ್ನು ಮನವೊಲಿಸಿ ಕಾರ್ಯ ಸಾಧಿಸಬೇಕಿದೆ. ಆದರೂ, ಅವರ ಮನೆಗೆ ಮಾದರಿ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಪಂ ಚುನಾವಣೆ ಮುಗಿದ ಮೇಲೆ ವಿದ್ಯುತ್ ಸಂಪರ್ಕ ಒದಗಿಸುತ್ತೇವೆ. –ಸಂತೋಷ್‌ಕುಮಾರ್, ಸಹಾಯಕ ಅಭಿಯಂತರ, ಸೆಸ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.