ರೇವಣ್ಣನ ದುರಾಡಳಿತ ಕೊನೆಗಾಣಿಸುವುದೇ ಗುರಿ..!
Team Udayavani, Nov 22, 2021, 1:54 PM IST
ಹೊಳೆನರಸೀಪುರ: ಜಿಲ್ಲೆಯಲ್ಲಿನ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರ ದುರಾಡಳಿತವನ್ನು ಕೊನೆಗಾಣಿಸಲು ಕೇವಲ ಮತದಾರನಿಂದ ಮಾತ್ರ ಸಾಧ್ಯ. ಆದ್ದರಿಂದ ಡಿ.10 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಮತದಾರರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಎಂ.ಶಂಕರ್ ಅವರಿಗೆ ಮತ ನೀಡುವ ಮೂಲಕ ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಗೋಪಾಲಸ್ವಾಮಿ ನುಡಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಭಾರಿ ತಮಗೆ ನೀವುಗಳು ನೀಡಿದ ಆರ್ಶಿವಾದದ ಫಲದಿಂದ 6 ವರ್ಷಗಳ ಕಾಲ ತಮ್ಮ ಕೈಲಾದ ಸೇವೆ ಮಾಡಿದ್ದೇನೆ. ಆದರೆ ತಮಗೆ ಬಂದ ಅನುಧಾನ ಬಹಳ ಕಡಿಮೆ ಬಂದಿದ್ದು ಸರಿಯಾಗಿ ವಿತರಣೆ ಮಾಡಲು ಆಗಲಿಲ್ಲ ಎಂದು ವಿಶ್ಲೇಷಿಸಿದರು.
ರೇವಣ್ಣ ಆಡಳಿತದಲ್ಲಿ ನೋವು: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅ ಧಿಕಾರವಿದ್ದರೂ ಹಾಸನ ಜಿಲ್ಲೆಯಲ್ಲಿ ಶಾಸಕ ರೇವಣ್ಣ ಅವರ ಅಣತಿ ಪ್ರಕಾರ ಅಧಿಕಾರಿಗಳು ತಮ್ಮ ಆಡಳಿತ ನಡೆಸಿದ್ದರ ಫಲವಾಗಿ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ. ಈ ಸಭೆಯಲ್ಲಿ ಪಕ್ಷದ ಕಟ್ಟಾಳು ಹಾಗೂ ದಲಿತ ಮುಖಂಡ ಲಕ್ಷ್ಮಣ್ ಅವರ ಮನವಿಯನ್ನು ತಾವು ಪೂರೈಸಲು ಆಗಲಿಲ್ಲವಲ್ಲ ಎಂಬ ಕೊರಗೂ ಇದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜಿಲ್ಲೆಯ ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಉತ್ತಮ ಸೇವೆ ನೀಡುವ ಭರವಸೆ : ವಿಧಾನ ಪರಿಷತ್ ಅಭ್ಯರ್ಥಿ ಎಂ.ಶಂಕರ್ ಮಾತನಾಡಿ, ಕಳೆದ ವಿಧಾನ ಪರಿಷತ್ ಚುನಾ ವಣೆಯಲ್ಲಿ ತಾವುಗಳು ನೀಡಿದ ಅತ್ಯಧಿಕ ಮತಗಳಿಂದ ಗೋಪಾಲಸ್ವಾಮಿ ಅವರು ಆರು ವರ್ಷಗಳ ಕಾಲ ಜಿಲ್ಲೆಯನ್ನು ಪ್ರತಿನಿ ಸಿದ್ದರು. ಅದರಂತೆ ಈ ಭಾರಿ ತಾವು ಸ್ಪರ್ಧಿಸಿದ್ದು ತಮಗೆ ಮತ ನೀಡುವ ಮೂಲಕ ಬೆಂಬಲಿಸಬೇಕೆಂದರು.
ಇದನ್ನೂ ಓದಿ:- ಪಠಾಣ್ ಕೋಟ್ ಸೇನಾ ಕಂಟೋನ್ಮೆಂಟ್ ಬಳಿ ಗ್ರೆನೇಡ್ ಸ್ಫೋಟ: ಕಟ್ಟೆಚ್ಚರ
ಚುನಾವಣೆಯಲ್ಲಿ ಗ್ರಾಪಂ ಮತ್ತು ಪುರಸಭೆ ಸದಸ್ಯರಿಗೆ ಮಾತ್ರ ಮತದಾನ ಹಕ್ಕು ಇರುತ್ತದೆ. ಜಿಲ್ಲೆಯಲ್ಲಿ 3500 ಹೆಚ್ಚು ಮತಗಳಿದ್ದು, ಮತದಾರರನ್ನು ಮನವೊಲಿಸಿ ತಮಗೆ ಮತ ಚಲಾಯಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು. ದಿ. ಮಾಜಿ ಸಂಸದ ಜಿ.ಪುಟ್ಟಸ್ವಾಮಿ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಮಾತನಾಡಿ, ನಮ್ಮ ಅಭ್ಯರ್ಥಿ ಎಂ.ಶಂಕರ್ ಅವರ ಗೆಲುವಿಗೆ ನಾವು ನೀವುಗಳು ಕಂಕಣ ಬದ್ದರಾಗಿ ದುಡಿಯೋಣ ಎಂದರು.
ಜೆಡಿಎಸ್ ವಿರುದ್ಧ ನಿರಂತರ ಹೋರಾಟ: ಹೊಳೆನರಸೀಪುರ ಕ್ಷೇತ್ರದ ಮುಖಂಡ ಬಾಗೂರು ಮಂಜೇಗೌಡ ಮಾತನಾಡಿ, ಬರಲಿರುವ ಡಿ. 10 ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ಆಭ್ಯರ್ಥಿ ಎಂ.ಶಂಕರ್ ಅವರ ಗೆಲುವಿಗೆ ಮತ ಹಾಕಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಹಾಜರಿದ್ದ ಪಕ್ಷದ ಮುಖಂಡರ ವಿರುದ್ಧ ಕಾರ್ಯಕರ್ತರು ಗರಂ ಆಗಿ ತಮ್ಮನ್ನು ಪರಿಗಣಿಸಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಪಕ್ಷದ ಅಭ್ಯರ್ಥಿ ಗೆಲುವಿಗೆ ನಾವು ಬದ್ದ : ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಂಗಸ್ವಾಮಿ, ಮುಜಾಹಿದ್ ಪಾಷ, ಐ.ಕೆ.ರಾಮಚಂದ್ರ, ಕೃಷ್ಣಕುಮಾರ್, ಬೀಚೇನಹಳ್ಳಿ ಬಸವರಾಜು, ಬಾಗಿವಾಳು ಮಂಜು ಮಾತನಾಡಿ, ಪಕ್ಷ ಪ್ರಸ್ತುತ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದೆ. ಆದರೆ, ಅದಕ್ಕೆ ಬೇಕಾದ ಸಾರಥಿಯೊಬ್ಬರು ಬಂದಿದ್ದು ಅವರಿಗೆ ಬೆಂಬಲಿಸುವುದರಿಂದ ಮುಂದಿನ ದಿನಗಳು ಒಳ್ಳೆಯ ದಿನಗಳ ಬರಲಿದೆ ಎಂದು ಆಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.