ರಾಜ್ಯದಲ್ಲಿ ಪುಟ್ಟಬಾಳೆಗೀಗ ಬಂಪರ್‌ ಬೆಲೆ


Team Udayavani, Aug 24, 2017, 4:09 PM IST

hasana.jpg

ಹಾಸನ: ರಾಜ್ಯದಲ್ಲಿ ರಸಬಾಳೆ ತಳಿ ಕಣ್ಮರೆಯಾಗುತ್ತಿದೆ. ಈಗ ಪುಟ್ಟಬಾಳೆ ತಳಿಯೂ ಅದೇ ಹಾದಿಯಲ್ಲಿದ್ದು, ವರ್ಷದಿಂದ ವರ್ಷಕ್ಕೆ ಬಾಳೆ ಕಡಿಮೆಯಾಗುತ್ತಾ ಬರುತ್ತಿದ್ದು, ಪೂರೈಕೆಗಿಂತ
ಬೇಡಿಕೆ ಹೆಚ್ಚಿರುವುದರಿಂದ ಪುಟ್ಟಬಾಳೆ ಹಣ್ಣುಗಳಿಗೆ ಈಗ ಬಂಪರ್‌ ಬೆಲೆ ಬಂದಿದೆ. ಪೂಜೆಗೆ ಮತ್ತು ತಿನ್ನಲು ಬಳಸುವ ಪುಟ್ಟಬಾಳೆ ಹಣ್ಣಿನ ದರ ಈಗ ಕೆ.ಜಿ.ಗೆ 120 ರಿಂದ 130 ರೂ ಇದೆ. ವರ್ತಕರು ಬಾಳೆ ತೋಟಗಳಲ್ಲಿ ಬೆಳೆಗಾರರಿಗೆ ಕೆ.ಜಿ.ಗೆ 90 ರೂ.ನಿಂದ 95 ರೂ.ದರ ನೀಡಿ ಖರೀದಿಸಿದರೆ, ವ್ಯಾಪಾರಿಗಳು ಬಾಳೆ ಮಂಡಿಗಳಲ್ಲಿ ಕೆ.ಜಿ.ಗೆ 105 ರೂ. ದರದಲ್ಲಿ ಖರೀದಿಸಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ 120 ರೂ.ನಿಂದ 130 ರೂ .ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪುಟ್ಟಬಾಳೆ ಕಳೆದ ವಾರ ಕೆ.ಜಿ.ಗೆ 100 ರೂ.ಗೆ ಮಾರಾಟವಾಗುತ್ತಿದ್ದರೆ, ಈ ವಾರ ಗೌರಿ – ಗಣೇಶ ಹಬ್ಬದ ಹಿನ್ನೆಲೆ ಕೆ.ಜಿಗೆ 20 ರಿಂದ 30 ರೂ ಹೆಚ್ಚಳವಾಗಿದೆ. ದಿಢೀರನೆ ಬೆಲೆ ಏರಿಕೆ: ಕಳೆದ ವರ್ಷ ಪುಟ್ಟಬಾಳೆ ಕೆಜಿಗೆ 70 ರೂ. ಇತ್ತು, ಆನಂತರ 30 – 40 ರೂ.ಗೆ ಇಳಿದಿತ್ತು. ಆದರೆ ಈಗ ಒಂದೆರೆಡು ತಿಂಗಳಿನಿಂದೀಚೆಗೆ ದಿಢೀರನೆ ಏರಿಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪುಟ್ಟಬಾಳೆ ಬೆಳೆ ಶೇ.50 ಕ್ಕಿಂತ ಕಡಿಮೆಯಾಗಿದೆ.
ರಾಜ್ಯದಲ್ಲಿ ನೀರಾವರಿ ಪ್ರದೇಶಗಳಿರುವ ಜಿಲ್ಲೆಗಳಲ್ಲಿ ಪುಟ್ಟಬಾಳೆ ಬೆಳೆಯಲಾಗುತ್ತಿತ್ತು. ಮುಖ್ಯವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿಗಳಿಗೆ ಹೆಚ್ಚಾಗಿ ಬೆಳೆಯಲಾಗುತ್ತಿತ್ತು.  ರೋಗ ಬಾಧೆ: ನಾಟಿ ಮಾಡಿದ ನಂತರ 13 ರಿಂದ 15 ತಿಂಗಳಲ್ಲಿ ಕಟಾವಿಗೆ ಬರುವ ಪುಟ್ಟಬಾಳೆ ಮೂರು ವರ್ಷದವರೆಗೂ ಫ‌ಸಲು ಕೊಡುತ್ತದೆ. ಅಂದರೆ ಒಂದು ಬಾರಿ ಬಾಳೆ ಗೊನೆ ಕಡಿದರೆ, ಆದರ ಬುಡದಲ್ಲಿ ಹುಟ್ಟುವ ಕಂದುಗಳ ಮೂಲಕ 2-3 ಬೆಳೆಗಳನ್ನು ಪಡೆಯಬಹುದು. ಇತ್ತೀಚಿನ ವರ್ಷಗಳಲ್ಲಿ ಸತತ ಬರಗಾಲದಿಂದ ನೀರಿನ ಕೊರತೆ ಹಾಗೂ ರೋಗ ಬಾಧೆಯಿಂದಾಗಿ ಪುಟ್ಟಬಾಳೆ ಕಡಿಮೆಯಾಗುತ್ತಾ ಬಂದಿದೆ. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 75 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಪುಟ್ಟ ಬಾಳೆ ಈ ವರ್ಷ ಶೇ.50ಕ್ಕಿಂತಲೂ ಕಡಿಮೆಯಾಗಿದೆ. ಹಾಸನ ಜಿಲ್ಲೆಯಲ್ಲಿ 7 ರಿಂದ 8 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಪುಟ್ಟಬಾಳೆ ಈಗ 3 ಸಾವಿರ ಹೆಕ್ಟೇರನಲ್ಲೂ ಬೆಳೆಯುತ್ತಿಲ್ಲ ಎಂದು ಬೇಸರದ ಸಂಗತಿ. ಬಯಲುಸೀಮೆಯಲ್ಲಿ ರೈತರು ಪ್ರತ್ಯೇಕವಾಗಿ ಬಾಳೆ ಬೆಳೆಯುತ್ತಿದ್ದರೆ, ಮಲೆನಾಡು ಪ್ರದೇಶಗಳಲ್ಲಿ ಅಡಕೆ, ತೆಂಗಿನ ತೋಟಗಳಲ್ಲಿ ಉಪ ಬೆಳೆಯಾಗಿ ಪುಟ್ಟಬಾಳೆ ಬೆಳೆಯುತ್ತಿದ್ದರು. ಆದರೆ ಈಗ ಮಳೆಯ ಕೊರತೆಯಿಂದ ಅಲ್ಲೂ ಕೈಬಿಟ್ಟಿದ್ದಾರೆ.
ನೀರಾವರಿ ಪ್ರದೇಶಗಳಲ್ಲೂ ಬಹುತಿಂಗಳ ಬೆಳೆಯಾದ ಬಾಳೆಬೆಳೆಯುವ ಬದಲು ರೈತರು ಈಗ ಶುಂಠಿ, ಅರಿಶಿಣ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಬೆಳೆಗಳು 7 ರಿಂದ 10 ತಿಂಗಳ ಒಳಗೆ ಕಟಾವಿಗೆ ಬರುತ್ತವೆ. ಬಾಳೆ ಕಷ್ಟಪಡಬೇಕಾದ ಹಾಗೂ ಮಾರುಕಟ್ಟೆಗಾಗಿ ಪರದಾಡಬೇಕಾದ ಪರಿಸ್ಥಿತಿಯಿಲ್ಲ. ಇದೂ ಕೂಡ ಪುಟ್ಟಬಾಳೆ ಕಡಿಮೆಯಾಗಲು ಕಾರಣ. ಬಾಳೆ ಬೆಳೆಯುತ್ತಿರುವ ರೈತರೂ ಕೂಡ ಪುಟ್ಟ ಬಾಳೆಗೆ ಬದಲು ಪಚ್ಚಬಾಳೆ ಬೆಳೆಯಲು ಆಸಕ್ತಿ ತೋರುತ್ತಾರೆ. ಪಚ್ಚಬಾಳೆ ಕಡೆ ರೈತರ ಒಲವು: ಪುಟ್ಟಬಾಳೆಗಿಂತ ಉತ್ತಮ ಮಾರುಕಟ್ಟೆ ಹಾಗೂ ಗುಣಮಟ್ಟದಲ್ಲಿ ಏರುಪೇರಿದ್ದರೂ ಪಚ್ಚಬಾಳೆ ಚಿಪ್ಸ್‌ ತಯಾರಿಕೆಗಾಗಿ ಕೇರಳಕ್ಕೆ ರವಾನೆಯಾಗುವುದರಿಂದ ಮಾರುಕಟ್ಟೆಗಾಗಿ ಪರದಾಡುವಷ್ಟು ಸಂಕಷ್ಟವಿಲ್ಲ. ಇಳುವರಿಯೂ ಪುಟ್ಟಬಾಳೆಗಿಂತ ಪಚ್ಚಬಾಳೆ ಹೆಚ್ಚು, ಪುಟ್ಟಬಾಳೆ ಉತ್ತಮ ಬೆಳೆ ಬಂದರೆ ಎಕರೆಗೆ 15 ಟನ್‌ ಇಳುವರಿ ಬರುತ್ತದೆ. ಈಗ ಇಳುವರಿ 7 ರಿಂದ 8 ಟನ್‌ ಮಾತ್ರ. ಪುಟ್ಟಬಾಳೆಗಿಂತ ಪಚ್ಚಬಾಳೆ ದುಪ್ಪಟ್ಟು ಇಳುವರಿ ಬರುತ್ತದೆ. ಹಾಗಾಗಿ ಬೆಳೆಗಾರರು ಪುಟ್ಟಬಾಳೆಗಿಂತ ಪಚ್ಚಬಾಳೆ ಬೆಳೆಯಲು ಆಸಕ್ತಿ ತೋರುತ್ತಾದೆ.

ಟಾಪ್ ನ್ಯೂಸ್

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.