ರೆಡಿಯೋ ಕಾಲರ್ ಕಾರ್ಯಾಚರಣೆ ಯಶಸ್ವಿ
Team Udayavani, Jan 28, 2021, 6:22 PM IST
ಸಕಲೇಶಪುರ: ಒಂದು ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸುವ ಕೊನೆಯ ಹಂತದ ಕಾರ್ಯಾಚರಣೆ ಸಿಬ್ಬಂದಿ ಹಾಗೂ ಸಾಕಾನೆಗಳನ್ನು ಹೈರಾಣಾಗಿಸಿತು. ಇಂದು ರೆಡಿಯೋ ಕಾಲರ್ ಅಳವಡಿಸಲೇ ಬೇಕು ಎಂಬ ಸವಾಲಿನೊಂದಿಗೆ ಬೆಳಗ್ಗೆಯಿಂದಲೇ ವಿರಾಮವಿಲ್ಲದೆ, ಸತತವಾಗಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಂಜೆಯಾದ್ರೂ, ಕಾಡಾನೆ ಕಾಣ ಸಿಲಿಲ್ಲ.
ಒಂದೆಡೆ ಬಿಸಿಲಿನ ಝಳ, ಕಾಡಾನೆಗಳು ಎಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತವೋ ಎಂಬ ಆತಂಕದ ನಡುವೆಯೇ ಕಾರ್ಯಾಚರಣೆ ನಡೆಸಲಾಯಿತು. ಗುರುವಾರಕ್ಕೆ ಕಾರ್ಯಾಚರಣೆ ಮುಂದೂಡಿದಲ್ಲಿ ಸಾಕಾನೆಗಳಿಗೆ ವಿಶ್ರಾಂತಿ ಇಲ್ಲದಂತಾಗುವುದರಿಂದ ಸಂಜೆ ಮತ್ತಷ್ಟು ಕಠಿಣವಾಗಿ ಕಾರ್ಯಾಚರಣೆ ಮಾಡಲಾಯಿತು.
ಇದನ್ನೂ ಓದಿ:ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ
ಅಂತಿಮವಾಗಿ ಲಿಂಗಾಪುರ ಗ್ರಾಮದ ಮಲ್ಲೇಶ್ ಗೌಡರ ಕಾಫಿ ತೋಟದಲ್ಲಿ ಹೆಣ್ಣಾನೆಗೆ ಅರವಳಿಕೆ ಮದ್ದು ನೀಡುವಲ್ಲಿ ಶೂಟರ್ ವೆಂಕಟೇಶ್ ಯಶಸ್ವಿಯಾದರು. ನಂತರ ಕಾಡಾನೆಗೆ ಸಾಕಾನೆಗಳ ಸಹಾಯದಿಂದ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.