ಟೊಮೆಟೋ ಬೆಲೆ ಕುಸಿತ: ಕಂಗಾಲಾದ ರೈತ
Team Udayavani, Mar 20, 2020, 2:58 PM IST
ಹಳೇಬೀಡು: ಹೋಬಳಿಯ ಸಿದ್ದಾಪುರ, ಕಟ್ಟೆ ಸೋಮನಹಳ್ಳಿ, ಮಲ್ಲಾಪುರ, ಹಗರೆ, ಬಸ್ತಿ ಹಳ್ಳಿ, ಚೀಲನಾಯ್ಕನಹಳ್ಳಿ, ಮಾಯ ಗೊಂಡನಹಳ್ಳಿ, ಹುಲಿಕೆರೆಯ ರೈತರು ತರಕಾರಿಯನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿ ರುವುದರಿಂದ ಹಾಕಿದ ಬಂಡವಾಳವೂ ಸಿಗದೇ ರೈತರು ಕಂಗಾಲಾಗಿದ್ದಾರೆ.
ಒಂದು ಎಕರೆ ಟೊಮೆಟೋ ಬೆಳೆಗೆ 50 ಸಾವಿರ ಖರ್ಚು: ರೈತ ಒಂದು ಎಎಕರೆ ಪ್ರದೇಶ ದಲ್ಲಿ ಟೊಮೆಟೋ ಬೆಳೆ ಬೆಳೆಯಲು ಹನಿ ನೀರಾವರಿ ಸುಮಾರು 25 ಸಾವಿರ ರೂ. ಖರ್ಚಾಗುತ್ತದೆ. ಸಸಿಗಳು, ಔಷಧಿ ಬೇಸಾಯ,ಕಳೆ ಆಳು ಕಾಳು ಸೇರಿದಂತೆ 25 ಸಾವಿರ ರೂ. ಸೇರದಂತೆ ಒಟ್ಟಾರೆ ಕನಿಷ್ಠ 50 ಸಾವಿರ ರೂ. ಖರ್ಚು ಬರುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿ ಟೊಮೆಟೋ ಬೆಳೆದ ಸೂಕ್ತ ಬೆಲೆ ಸಿಗದಿದ್ದಾಗ ತಲೆಯ ಮೇಲೆ ಕೈಹೊತ್ತು ಕೂರುವಂತಾಗುತ್ತದೆ.
ಕೋವಿಡ್ 19 ಎಫೆಕ್ಟ್ ನಿಂದ ಬೆಲೆ ಕುಸಿತ: ಬೇಸಿಗೆ ಸಂದರ್ಭದಲ್ಲಿ ಈ ಭಾಗದ ತರಕಾರಿ ಮಂಗಳೂರು, ಬೆಂಗಳೂರು, ಉಡುಪಿ, ಜಿಲ್ಲೆಗಳಲ್ಲದೇ ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಸರಬರಾಜಾಗುತ್ತಿತ್ತು. ಒಂದು ಟೊಮೆಟೋಗೆ 250 ರಿಂದ 350ರೂ. ಸಿಗುತ್ತಿತ್ತು. ಕೋವಿಡ್ 19 ಭೀತಿಯಿಂದಾಗಿ ತರಕಾರಿ ಸರಬರಾಜು ಸ್ಥಗಿತಗೊಂಡಿದ್ದು, ಒಂದು ಬಾಕ್ಸ್ ಟೊಮೆಟೋ ಬೆಲೆ 100 ರಿಂದ 125 ರೂ.ಗೆ ಇಳಿದಿದ್ದು, ರೈತರು ಚಿಂತೆಗೀಡಾಗಿದ್ದಾರೆ.
ಚಿನ್ನದ ಒಡವೆಗಳನ್ನು ಅಡವಿಟ್ಟು ಸಾಲ ತಂದು ತರಕಾರಿ ಬೆಳೆದಿದ್ದೇವೆ. ಈ ಬಾರಿ ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಹಾಕಿದ ಬಂಡ ವಾಳವೂ ಬರದೇ ತೀವ್ರ ನಷ್ಟ ಅನುಭವಿ ಸುವಂತಾಗಿದೆ. -ಚೇತನ್, ರೈತ ಹುಲಿಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.