ಪುರಸಭೆ ಅಡಳಿತ ಮಂಡಳಿ ರಚನೆ ಯಾವಾಗ?
ಚುನಾವಣೆ ನಡೆದು 4 ತಿಂಗಳಾದರೂ ರಚನೆಯಾಗದ ಮಂಡಳಿ; ಅಭಿವೃದ್ಧಿ ಕಾರ್ಯಗಳಿಗೆ ತೊಡಕು
Team Udayavani, Sep 12, 2021, 4:20 PM IST
ಬೇಲೂರು: ಬೇಲೂರು ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿದ್ದರು ಆಡಳಿತ ನೆಡೆಸಲು ಅವಕಾಶ ಸಿಗದೆ ಪಟ್ಟಣ ಸಮಗ್ರ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ.
ಇಲ್ಲಿನ ಪುರಸಭೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಚುನಾವಣೆ ನಡೆದಿದೆ. ಅದಕ್ಕೂ ಮೊದಲು ಹಿಂದಿನ ಅವಧಿ ಮುಗಿದು ಸುಮಾರು2 ವರ್ಷಗಳು ಕಳೆದರೂ ಪುರಸಭೆ ಚುನಾವಣೆ ನೆಡೆದಿರಲಿಲ್ಲ.ಕಳೆದ ಎರಡುವರೆ ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಆಡಳಿತಾಧಿಕಾರಿ ನೇಮಕದಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದರೂ ಇದುವರೆವಿಗೂ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸದೆ ವಾರ್ಡ್ ಅಭಿವೃದ್ಧಿಯಾಗದೆ ಹಿಂದೆ ಬಿದ್ದಿವೆ. ಯಗಚಿ ಜಲಾಶಯ ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಪುರಸಭೆ ಪಟ್ಟಣದ 23 ವಾರ್ಡ್‌ಗಳಲ್ಲಿ ನದಿ
ಮೂಲದಿಂದ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಸುಮಾರು 16 ಕೋಟಿ ವೆಚ್ಚದಲ್ಲಿ 24×7 ನೀರು ಕೊಡುವ ಯೋಜನೆ
ರೂಪಿಸಲಾಗಿದೆ. ಆದರೂ ಜನಪ್ರತಿನಿಧಿಗಳ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಳೆದ 10 ವರ್ಷಗಳಿಂದ ಈ ಯೋಜನೆ ಕಾರ್ಯರೂಪಕ್ಕೆ ಬಾರದೆ ನನೆಗುದಿಗೆ ಬಿದ್ದಿದೆ.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತೆ, ವಿದ್ಯುತ್ ಇಲ್ಲದೆ ಜನರುಪರಿತಪಿಸುವಂತಾಗಿದೆ. ಪಟ್ಟಣದ ಹೊಸನಗರ, ಚನ್ನಕೇಶವನಗರ ಹನು ಮಂತನಗರ ಹಾಗು ಇನ್ನಿತರೆ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಜನರು ನಿತ್ಯ ತೊಂದರೆ ಅನು ಭವಿಸುವಂತಾಗಿದೆ. ಹಾಗೂ ಕಳೆದ 20 ವರ್ಷಗಳ ಹಿಂದೆ ಪಟ್ಟಣದಲ್ಲಿ ವಾಸವಿದ್ದವರಿಗೆ ನಿವೇಶನ ಮತ್ತು ಮನೆ ಹಂಚಲಾಗಿತ್ತು. ಆದರೆ, ಅಲ್ಲಿಂದ ಇಲ್ಲಿಯವರೆವಿಗೂ ಒಂದು ನಿವೇಶನವನ್ನೂ ಹಂಚಲು ಸಾಧ್ಯವಾಗಿಲ್ಲ. ವಿಶ್ವವಿಖ್ಯಾತ ಚನ್ನಕೇಶವ ದೇವಾಲಯ ಇರುವಪಟ್ಟಣದಲ್ಲಿ ಮುಖ್ಯ ರಸ್ತೆ ಅಗಲೀಕರಣಗೊಳ್ಳದೆ ದಿನ ನಿತ್ಯ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಸಮಸ್ಯೆ ಸುಳಿಯಲ್ಲಿರುವ ಬೇಲೂರು ಪುರಸಭೆಗೆಸ್ಥಳೀಯವಾಗಿ ಚರ್ಚೆಸಿ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆ ಚುನಾಯಿತ ಪ್ರತಿನಿಧಿಗಳೇ ಇಲ್ಲವಾಗಿದ್ದಾರೆ. ಈ ಬಗ್ಗೆ ಪುರಸಭೆ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಜಿ.ಶಾಂತಕುಮಾರ್ ಉದಯವಾಣಿಯೊಂದಿಗೆ ಮಾತನಾಡಿ ಪ್ರಸ್ತುತ ಸಾಂಕ್ರಮಿಕ ರೋಗ ಹಾಗು
ಕರೋನಾಬೀತಿಯಲ್ಲಿರುವ ಸಂದರ್ಭದಲ್ಲಿ ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಅವಶ್ಯಕವಾಗಿ ಬೇಕಾಗಿದೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆ ಆಡಳಿತ ಮಂಡಳಿ ಬಹುಮುಖ್ಯ ಎಂದರು.
ಇದನ್ನೂ ಓದಿ:ಮಹಾದಾಯಿ,ಮೇಕೆದಾಟು ಬಗ್ಗೆ ವಿಪಕ್ಷದಲ್ಲಿದ್ದಾಗ ಮಾತನಾಡಿದ ನಾಯಕರು ಈಗ ಮಾತಾಡುತ್ತಾರೋ.:ಡಿಕೆಶಿ
ಸರ್ಕಾರ ಉಪವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ. ಆದರೆ, ಆಡಳಿತಾಧಿಕಾರಿಗಳು ಸಕಲೇಶಪುರ, ಅರಕಲ
ಗೂಡು ಪಟ್ಟಣದಲ್ಲೂ ಕೆಲಸ ಮಾಡಬೇಕಾಗಿದ್ದು, ಬೇಲೂರು ಪುರಸಭೆಗೆ ವಾರದಲ್ಲಿಕೇವಲ ಒಂದು ದಿನ ಕೆಲಸ ಮಾಡಿದರೆ ಪುರಸಭೆ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಪುರಸಭೆಯಲ್ಲಿ ಜನಸಾಮನ್ಯರ ಕೆಲಸಗಳು ಸುಲಭದ ರೀತಿಯಲ್ಲಿ ನಡೆಯುತ್ತಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆ ಎದ್ದುಕಾಣುತ್ತಿವೆ. ಇವುಗಳನ್ನು ಬಗೆ ಹರಿಸಲು ಆಡಳಿತ ಮಂಡಳಿ ಅಗತ್ಯವಾಗಿರುವುರಿಂದ ಸರ್ಕಾರ ಹಾಗು ಜಿಲ್ಲಾಧಿಕಾರಿಗಳು ಕೂಡಲೆ ಗಮನಹರಿಸಿ ಬೇಲೂರು
ಪುರಸಭೆ ಸಮಗ್ರ ಅಭಿವೃದ್ದಿ ಗಮನದಲ್ಲಿಟ್ಟು ಅಡಳಿತ ಮಂಡಳಿಗೆ ಚುನಾವಣೆ ನಡೆಸಲು ಮುಂದಾಗ ಬೇಕು ಎಂದಿದ್ದಾರೆ.
ಆಡಳಿತ ಮಂಡಳಿ ರಚನೆಯಾಗಲಿ
ಪಟ್ಟಣದ23 ವಾರ್ಡಗಳಲ್ಲಿ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸಲು ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಅಗತ್ಯವಾಗಿದೆ. ಈಗಾಗಲೆ ಪುರಸಭೆ ಚುನವಣೆ ನಡೆದು ಸದಸ್ಯರೂ ಸಹ ಆಯ್ಕೆಯಾಗಿದ್ದಾರೆಕೋವಿಡ್ ನೆಪದಲ್ಲಿ ಅಡಳಿತ ಮಂಡಳಿ ರಚನೆಯಾಗದಿದ್ದರೆ ಹೇಗೆ ಜನಸಾಮಾನ್ಯರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಪಟ್ಟಣದ ಅಭಿವೃದ್ಧಿ ಬಗ್ಗೆಕೇಳಿದರೆ ಉಪ ವಿಭಾಗಧಿಕಾರಿಗಳನ್ನು
ತೋರಿಸುತ್ತಾರೆಕೂಡಲೆ ಸರ್ಕಾರ ಮನಗಂಡು ಬೇಲೂರು ಪುರಸಭೆಗೆ ಆಡಳಿತ ಮಂಡಳಿ ಚುನಾವಣೆ ನೆಡೆಸಬೇಕು ಎಂದು ಪುರಸಭೆ ಸದಸ್ಯ ಬಿ.ಎ. ಜಮಾಲುದ್ದೀನ್ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.