ಆಲೂರಿನಲ್ಲಿ ಧರೆಗಳಿದ ಯಮರಾಯ; ಜಾಗೃತಿ
ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಯಮ ಪಾಶ ಹಾಕಿ ರಸ್ತೆ ನಿಯಮ ಪಾಲಿಸಲು ವೇಷಧಾರಿಯಿಂದ ಸಲಹೆ
Team Udayavani, Feb 14, 2021, 8:08 PM IST
ಆಲೂರು: ಎಲ್ಲರೂ ಎಂದಿನಂತೆ ತಮ್ಮ ಕೆಲಸದ ಅವಸರದಲ್ಲಿ ಇದ್ದರು. ಹೀಗೆ ಗಡಿಬಿಡಿಯಿಂದ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪಟ್ಟಣದ ಪೊಲೀಸ್ ಠಾಣೆ, ಬಸ್ ನಿಲ್ದಾಣ ಎದುರು ಎಮ್ಮೆಯೊಂದಿಗೆ ನಿಂತಿದ್ದ ಯಮನ ವೇಷಧಾರಿಯನ್ನು ಕಂಡು ಅಚ್ಚರಿಗೊಂಡರು. ಯಮನೇ ಧರೆಗೆ ಇಳಿದುಬಂದಂತೆ ವೇಷ ಭೂಷಣದ ತೊಟ್ಟಿದ್ದ ವ್ಯಕ್ತಿಯನ್ನು ಕುತೂಹಲದಿಂದ ವೀಕ್ಷಿಸಿದರು.
ಹೌದು, ರಸ್ತೆ ಸುರಕ್ಷತಾ ಸಪ್ತಾಹದ ಅಂಗ ವಾಗಿ ಪಟ್ಟಣ ಠಾಣೆಯ ಪೊಲೀಸರು ಶನಿ ವಾರ ಹೆಲ್ಮೆಟ್ ಹಾಕದೇ ವಾಹನ ಚಲಾಯಿ ಸುವವರಿಗೆ ದಂಡ ಹಾಕುವುದನ್ನು ಬಿಟ್ಟು, ಯಮನ ವೇಷಧಾರಿ ಮೂಲಕ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಪಟ್ಟಣದ ಹೃದಯ ಭಾಗವಾದ ಪೊಲೀಸ್ ಠಾಣೆ, ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಯಮನ ವೇಷ ಹಾಕಿಸಿ ಬೈಕ್ ಚಾಲಕರಿಗೆ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಹಾಸನದ ವಿದ್ಯುತ್ ಗುತ್ತಿಗೆದಾರ ಶಿವಣ್ಣ ಯಮಧರ್ಮರಾಯನ ವೇಷ ಧರಿಸಿದ್ದು, ವಿಶೇಷವಾಗಿ ಗಮನ ಸೆಳೆದರು. ಹೆಲ್ಮೆಟ್ ಹಾಕದೇ ಇರುವ ಸವಾರರ ಕುತ್ತಿಗೆಗೆ ಹಗ್ಗ ಹಾಕಿ “ಹೆಲ್ಮೇಟ್ ಧರಿಸುವೆಯೋ ಇಲ್ಲವೇ ನಾನು ನಿನ್ನನ್ನು ಯಮ ಲೋಕಕ್ಕೆ ಕರೆ ದೊಯ್ಯಲೇ’ ಎಂದು ಏರುಧ್ವನಿಯಲ್ಲಿ ಸಂಭಾ ಷಣೆ ಮೂಲಕ ಜಾಗೃತಿ ಮೂಡಿಸಿದರು. ಮಾತು ಕೇಳದವರಿಗೆ ವಾರ್ನಿಂಗ್ ಕೊಡು ತ್ತಿದ್ದರು. ಆಲೂರು ಪೊಲೀಸರಿಂದ ನಡೆದ ಈ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮಾತನಾಡಿ, ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲನೆ ಮಾಡ ಬೇಕು. ಹೆಲ್ಮೆಟ್ ಇಲ್ಲದೆಯೇ, ಹಲವು ಸಾವು- ನೋವು ಸಂಭವಿಸಿವೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಹಲವು ಅಪಘಾತ ಗಳು ನಡೆದಿವೆ. ಆದ್ದರಿಂದ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಿಯಮ ಪಾಲನೆ ಮಾಡದಿದ್ದರೆ ಹೆಚ್ಚು ದಂಡ ಭರಿಸಬೇಕೆಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.