ವರ್ಗಾವಣೆ ದಂಧೆ: ಒಕ್ಕಲಿಗ ಅಧಿಕಾರಿಗಳೇ ಗುರಿ
Team Udayavani, Sep 17, 2019, 4:12 PM IST
ಹಾಸನದಲ್ಲಿ ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಾಸನ ಜಿಪಂ ಉಪಾಧ್ಯಕ್ಷ ಎಚ್.ಪಿಸ್ವರೂಪ್ ಅವರೂ ಹಾಜರಿದದ್ದರು.
ಹಾಸನ: ಒಂದು ಸಮಾಜದ ಅಧಿಕಾರಿಗಳನ್ನೇ ಗುರಿಯಾಗಿಟ್ಟುಕೊಂಡು ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತಿದೆ. ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವುದನ್ನು ಬದಿಗೊತ್ತಿ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ದ್ವೇಷದ ರಾಜಕಾರಣ ಮಾಡುತ್ತಾ, ನಾನು ಹೇಳು ವುದೆಲ್ಲಾ ಸುಳ್ಳು. ಹೇಳುವುದೊಂದು ಮಾಡುವು ದೊಂದು ಎಂಬುದನ್ನು ತೋರಿಸುತ್ತಿದ್ದಾರೆ. ಸರ್ಕಾರ ಗುರಿಯಾಗಿಟ್ಟುಕೊಂಡಿರುವ ಸಮಾಜ ಯಾವುದು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿ ಒಕ್ಕಲಿಗರ ಅಧಿಕಾರಿಗಳನ್ನು ಸರ್ಕಾರ ಗುರಿಯಾಗಿರಿಸಿ ಕೊಂಡಿದೆ ಎಂದು ಪರೋಕ್ಷವಾಗಿ ಪ್ರಸ್ತಾಪಿಸಿದರು.
ವರ್ಗಾವಣೆ ದಂಧೆ: ಲೋಕೋಪಯೋಗಿ ಇಲಾ ಖೆಯ ಒಬ್ಬ ಮಹಿಳಾ ಎಂಜಿನಿಯರ್‌ನ್ನು ಬೆಂಗಳೂರಿ ನಿಂದ ಜಮಖಂಡಿಗೆ ವರ್ಗ ಮಾಡಲಾಗಿದೆ. ಮಹಿಳಾ ಎಂಜಿನಿಯರ್ ಇದ್ದ ಹುದ್ದೆಗೆ ವರ್ಗ ಮಾಡಲು ಭಾರೀ ವ್ಯಾಪಾರವೇ ನಡೆದಿದೆ ಎಂದು ದೂರಿದ ಅವರು, ಹಾಸನ ಜಿಲ್ಲೆಯಲ್ಲೂ ವರ್ಗಾವಣೆಯ ಭಾರೀ ದಂಧೆ ನಡೆಯುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಹುದ್ದೆಗೆ ವರ್ಗವಾಗಿ ಬರಬೇಕಾದರೆ ಇಂತಿಷ್ಟು ಎಂದು ನಿಗದಿಪಡಿಸಿದ್ದಾರಂತೆ. ನಾನೂ ಲೋಕೋಪಯೋಗಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನಾನು ಸಚಿವನಾದಾಗ ಹಾಸನದಲ್ಲಿ ಪರಿಶಿಷ್ಟ ಸಮಾಜ ದವರು ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಆಗಿದ್ದರು. ಅವರು ನಿವೃತ್ತಿಯಾಗು ವರೆಗೂ ಅವರೇ ಹುದ್ದೆಯಲ್ಲಿ ಮುಂದುವರಿದಿದ್ದರು ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಆದರೆ ಈಗಿರುವ ಬಿಜೆಪಿ ಸರ್ಕಾರ ಎಷ್ಟು ಪರ್ಸೆಂಟ್ ಸರ್ಕಾರ ಎಂಬುದನ್ನು ಈಗ ಮೋದಿಯವರೇ ಹೇಳಲಿ ಎಂದು ಒತ್ತಾಯಿಸಿದ ರೇವಣ್ಣ ಅವರು, ಮೋದಿಯವರು ಭಾಷಣ ಮಾಡಿ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಕೋಂಡಾಯಿತು. ಇನ್ನು ಮುಂದೆ 15 ಅನರ್ಹ ಶಾಸಕರ ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರಕ್ಕೆ ಪ್ರಧಾನಿಯವರು ಬರಬಹುದೇನೋ ಎಂದು ಕುಹಕವಾಡಿದರು.
ಬಿಜೆಪಿಯ ಶಾಸಕರು, ಸಚಿವರು ವರ್ಗಾವಣೆ ದಂಧೆ ನಡೆಸಿ ಲೂಟಿಯನ್ನಾದರೂ ಮಾಡಿಕೊಳ್ಳಲಿ, ಮತ್ತಿನ್ನೇನಾದರೂ ಮಾಡಿಕೊಳ್ಳಲಿ ಮೊದಲು ಪ್ರವಾಹ ಸಂತ್ರಸ್ತರಿಗೆ ನೆರವಾಗಲಿ. ಬಹುಶಃ ವರ್ಗಾವಣೆಯಲ್ಲಿ ಸಂಪಾದಿಸಿದ ಹಣದಿಂದಲೇ 12 ಜಿಲ್ಲೆಗಳ ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಬಹುದೇನೋ ಎಂದು ವ್ಯಂಗ್ಯವಾಡಿದರು.
590 ಕೋಟಿ ರೂ. ನಷ್ಟ: ಅತಿವೃಷ್ಟಿಯಿಂದ ಹಾಸನ ಜಿಲ್ಲೆಯಲ್ಲಿ 590 ಕೋಟಿ ರೂ. ನಷ್ಟವಾಗಿದೆ. ಆದರೆ ಇದುವರೆಗೂ ಒಂದು ಬಿಡಿಗಾಸೂ ಪರಿಹಾರ ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿಯವರನ್ನು ಕೇಳಿ ದರೆ ಅವರು ಅಸಹಾಯಕತೆ ಪ್ರದರ್ಶಿಸುತ್ತಾರೆ. ಸರ್ಕಾರ ಸತ್ತು ಹೋಗಿದೆಯೇನೋ ಎಂಬ ಅನುಮಾನ ಕಾಡುತ್ತಿದೆ ಎಂದೂ ಹೇಳಿದರು.
ತಾತ್ಕಾಲಿಕ ಪರಿಹಾರವಾಗಿ 10 ಸಾವಿರೂ ರೂ. ಮನೆ ಕಳೆದುಕೊಂಡವರು ಹೊಸ ಮನೆ ಅಡಿಪಾಯ ಹಾಕಲು ಒಂದು ಲಕ್ಷ ರೂ. ಕೊಡುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಯಾವ್ಯಾವ ಫಲಾನುಭವಿ ನೆರವು ಪಡೆದಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದ ಅವರು, ಬಹುಶಃ ಯಡಿಯೂರಪ್ಪರ ಸರ್ಕಾರ ದಿವಾಳಿಯಾಗಿ ಪಾಪರ್ ಚೀಟಿ ಪಡೆದುಕೊಳ್ಳು ಕಾಯುತ್ತಿರಬಹುದು ಎಂದು ಲೇವಡಿ ಮಾಡಿದರು.
ಹಾಸನ ಜಿಲ್ಲೆಯ ಬಗ್ಗೆ ತಾತ್ಸಾರ: ಹಾಸನ ಜಿಲ್ಲೆ ಯೆಂದರೆ ಈ ಸರ್ಕಾರಕ್ಕೆ ಅದೇಕೋ ತಾತ್ಸಾರ. ಬಿಡು ಗಡೆ ಮಾಡಿದ್ದ ಹಣವನ್ನೂ ಸರ್ಕಾರ ವಾಪಸ್ ಪಡೆದು ಕೊಂಡಿದೆ. ಜಿಪಂನಿಂದ 70 ಲಕ್ಷ ರೂ. ಲೋಕೋಪಯೋಗಿ ಇಲಾಖೆಯಿಂದ 60 ಲಕ್ಷ ರೂ. ವಾಪಸ್ ಪಡೆದಿದೆ ಏಕೆ ಹಾಸನ ಜಿಲ್ಲೆಯ ಬಗ್ಗೆ ಬಿಜೆಪಿ ಸರ್ಕಾರ ದ್ವೇಷ ಸಾಧಿಸುತ್ತಿದೋ ಗೊತ್ತಿಲ್ಲ ಎಂದರು.
ಸಾಲ ಮನ್ನಾ ಹಣ ಬಿಡುಗಡೆ ಮಾಡಿ: ಜಿಲ್ಲೆಯ ಸುಮಾರು 36 ಸಾವಿರ ರೈತರ ಸಾಲ ಮನ್ನಾಗೆ ಜಿಲ್ಲಾ ಸಹಕಾರ ಬ್ಯಾಂಕಿಗೆ ಇನ್ನೂ 115 ಕೋಟಿ ರೂ. ಬಿಡುಗಡೆಯಾಗಬೇಕಾಗಿದೆ. ಸಾಲ ಮನ್ನಾ ಫಲಾನು ಭವಿಗಳ ಎಲ್ಲ ದಾಖಲೆಗಳು ಸಮರ್ಪಕವಾಗಿದೆ ಎಂದು ಅಧಿಕಾರಿಗಳು ಪಟ್ಟಿ ಸಲ್ಲಿಸಿದರೂ ಆ ಮೊತ್ತ ವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ರೈತರ ಸಾಲ ಮನ್ನಾ ಹಣಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದೂ ಎಚ್ಚರಿಸಿದರು. ಹಾಸನ ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.