ಗೂಡ್ಸ್‌ ವಾಹನದಲ್ಲಿ ಕುರಿಗಳಂತೆ ಜನರ ಸಾಗಣೆ

ಅಪಘಾತ ಸಂಭವಿಸಿದರೆ ನೂರಾರು ಮಂದಿ ಪ್ರಾಣಕ್ಕೆ ಕುತ್ತು • ಪೊಲೀಸ್‌, ಸಾರಿಗೆ ಇಲಾಖೆಯಿಂದ ಜಾಗೃತಿ ಅಗತ್ಯ

Team Udayavani, Jul 26, 2019, 11:29 AM IST

hasan-tdy-002

ಚನ್ನರಾಯಪಟ್ಟಣ ತಾಲೂಕಿನಲ್ಲಿ ಸರಕು ಸಾಗಾಣಿಕೆ ವಾಹನದಲ್ಲಿ ಕುರಿಗಳಂತೆ ಸಾರ್ವಜನಿಕರನ್ನು ತುಂಬಿಕೊಂಡು ಹೋಗಲಾಗುತ್ತಿದೆ.

ಚನ್ನರಾಯಪಟ್ಟಣ: ಸರಕು ಸಾಗಾಣಿಕೆ ವಾಹನದಲ್ಲಿ ಕುರಿಗಳಂತೆ ಜನರನ್ನು ತುಂಬಿಕೊಂಡು ಒಂದು ಕಡೆ ಯಿಂದ ಮತ್ತೂಂದು ಕಡೆಗೆ ಹೋಗುವುದು ತಾಲೂಕಿನಲ್ಲಿ ಮಾಮೂಲಾಗಿದ್ದರೂ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಕೂಲಿ ಕೆಲಸ ಮಾಡುವ ಕಾರ್ಮಿಕರು ಇಲ್ಲವೇ ವಿವಾಹ ಮಹೋತ್ಸವ ಮತ್ತು ಬೀಗರ ಔತಣ ಕೂಟಕ್ಕೆ ಗ್ರಾಮೀಣ ಭಾಗದ ಜನರನ್ನು ನಿಗದಿತ ಸ್ಥಳಕ್ಕೆ ಕರೆತರಲು ಸರಕು ಸಾಗಾಣಿಕೆ ವಾಹನಗಳಾದ ಮಿನಿ ಲಾರಿ, ಟಾಟಾ ಏಸ್‌ ಇಲ್ಲವೇ ದೊಡ್ಡಲಾರಿಯನ್ನು ಹೆಚ್ಚು ಬಳಸುವ ಮೂಲಕ ವಾಹನ ಮಾಲೀಕರಾಗಲೀ ಇಲ್ಲವೇ ಚಾಲಕರಾಗಲಿ ಸಾರಿಗೆ ನಿಯಮಕ್ಕೆ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ. ಇದನ್ನು ಕಣ್ಣಾರೆ ಕಾಣುವ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಂಡಹಾಕಿ ಬಿಟ್ಟು ಕಳುಹಿಸುತ್ತಿದ್ದಾರೆ.

ಕಡಿವಾಣ ಹಾಕಿ: ಲೈಸೆನ್ಸ್‌ ಹೊಂದದ ಚಾಲಕರು ಹಳ್ಳಿಗಾಡಿನ ರೋಡ್‌ಗಳಲ್ಲಿ ಸ್ಟೇರಿಂಗ್‌ ಹಿಡಿಯುವುದು ಸಾಮಾನ್ಯವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮುಂದಾದರೂ ಕೆಲ ವಾಹನ ಚಾಲಕರು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ವಾಹನ ಓಡಿಸುತ್ತಿದ್ದಾರೆ. ಇನ್ನು ವಾರದ ಸಂತೆ ದಿವಸ ದಲ್ಲಿ ಗ್ರಾಮೀಣ ಭಾಗದಿಂದ ಆಗಮಿಸುವ ಸರಕು ಸಾಗಾಣಿಕೆ ವಾಹನಗಳಲ್ಲಿನ ಚಾಲಕರು ಅತಿ ವೇಗವಾಗಿ ವಾಹನ ಓಡಿಸುತ್ತಾರೆ ಇದಕ್ಕೆ ಕಡಿವಾಣ ಹಾಕಬೇಕಿದೆ.

ಗ್ರಾಮೀಣರೇ ಹೆಚ್ಚು: ಸಾರ್ವಜನಿಕರು ಒಂದು ಕಡೆ ಯಿಂದ ಮತ್ತೂಂದು ಕಡೆಗೆ ಸಂಚಾರ ಮಾಡಲೆಂದೇ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೂರಾರು ವಾಹನ ಗಳು ಗ್ರಾಮೀಣ ಭಾಗದಲ್ಲಿ ಸಂಚಾರ ಮಾಡುತ್ತಿವೆ. ಇದರೊಂದಿಗೆ ಖಾಸಗಿ ಟೆಂಪೋಗಳು, ಆಟೋಗಳು ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುವ ನಾನಾ ವಾಹನಗಳೂ ನಿತ್ಯವೂ ರಸೆಯಲ್ಲಿ ಸಂಚಾರ ಮಾಡು ತ್ತವೆ. ಆದರೂ ಗ್ರಾಮೀಣ ಭಾಗದ ಜನತೆ ಮಾತ್ರ ಸರಕು ಸಾಗಾಣಿಕೆ ವಾಹನವನ್ನು ಏರಿ ಸಂಚಾರ ಮಾಡುತ್ತಾರೆ.

ಬೀಗರ ಔತಣ ಕೂಟಕ್ಕೆ ಸಂಚಾರ: ಆಷಾಢ ತಿಂಗಳು ಹೊರತುಪಡಿಸಿ ವಿವಾಹ ಮಹೋತ್ಸವ ನಡೆಯುವ ಸಂದರ್ಭದಲ್ಲಿ ನಿತ್ಯವೂ ಸಾವಿರಾರು ಮಂದಿ ಸಾರ್ವಜನಿಕರು ಸರಕು ಸಾಗಾಣಿಕೆ ವಾಹನ ಮತ್ತು ಲಾರಿಗಳಲ್ಲಿ ಸಂಚಾರ ಮಾಡುತ್ತಾರೆ. ಮಾಂಸಾ ಹಾರಿಗಳು ದೇವಾಲಯಗಳು ಇರುವ ಸ್ಥಳದ‌ಲ್ಲಿ ಬೀಗರ ಔತಣ ಕೂಟ ಏರ್ಪಡಿಸುವುದರಿಂದ ಗ್ರಾಮೀಣ ಭಾಗದಿಂದ ಹೆಚ್ಚು ಜನರನ್ನು ಔತಣ ಕೂಟಕ್ಕೆ ಸೇರಿಸಲು ಸರಕು ಸಾಗಾಣಿಕೆ ವಾಹನ ವ್ಯವಸ್ಥೆ ಮಾಡುತ್ತಾರೆ. ಹಾಗಾಗಿ ಔತಣಕೂಟಕ್ಕೆ ತೆರ ಳುವ ಮಂದಿ ವಿಧಿ ಇಲ್ಲದೆ ಲಾರಿ ಹಾಗೂ ಸರಕು ಸಾಗಾಣಿಕೆ ವಾಹನದಲ್ಲಿ ಸಂಚಾರ ಮಾಡುತ್ತಾರೆ.

ಕೂಲಿ ಕಾರ್ಮಿಕರು: ರಾತ್ರಿಯಾಯಿತೆಂದರೆ ನಗರ ದಿಂದ ತಮ್ಮ ಗ್ರಾಮಕ್ಕೆ ತೆರಳುವ ಸರಕು ಸಾಗಾಣಿಕೆ ವಾಹನ ಚಾಲಕರು ತಮ್ಮ ಮಾರ್ಗದಲ್ಲಿನ ಗ್ರಾಮೀಣ ಭಾಗದ ಜನರನ್ನು ವಾಹನದಲ್ಲಿ ಹೊತ್ತು ಸಾಗುತ್ತಾರೆ. ಪಟ್ಟಣದಲ್ಲಿ ಕೂಲಿ ಕೆಲಸ ಮುಗಿಸಿ ಊರಿಗೆ ತೆರಳು ವವರು ಆದಷ್ಟು ಬೇಗ ಮನೆ ಸೇರಬೇಕೆಂಬ ತವಕದಲ್ಲಿ ಸಾರಿಗೆ ಬಸ್‌ ಕಾಯದೇ ತಮ್ಮ ಸಮಯಕ್ಕೆ ಯಾವುದು ಸಿಗುತ್ತದೆ ಅದರಲ್ಲಿ ಸಂಚಾರ ಮಾಡುತ್ತಾರೆ.

ಅರಿವು ಅಗತ್ಯ: ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣಿಕರು ಸಂಚಾರ ಅಪಾಯಕಾರಿ ಎಂದು ಪೊಲೀಸ್‌ ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳು ಜನರಲ್ಲಿ, ವಾಹನ ಚಾಲಕ ಹಾಗೂ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕಿದೆ. ವಾಹನ ತಪಾಸಣೆ ವೇಳೆ ಸಾರ್ವಜನಿಕರ ಸುರಕ್ಷತೆ ಕುರಿತು ತಿಳಿವಳಿಕೆ ನೀಡ ಬೇಕಿದೆ. ನಿಯಮ ಮೀರಿ ಪ್ರಾಯಾಣಿಕರನ್ನು ಹೊತ್ತೂ ಯ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆದೇಶಿಸುವ ಮೂಲಕ ಸರಕು ವಾಹನದಲ್ಲಿ ಸಾರ್ವಜನಿಕರು ಪ್ರಯಾಣ ಮಾಡುವುದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಾಗಿದೆ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

BYV-Hasan

Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್‌: ಬಿ.ವೈ.ವಿಜಯೇಂದ್ರ

1-wewqe

Hasan; ಹಾಸನಾಂಬೆಗೆ 4 ದಿನದಲ್ಲಿ 3 ಕೋಟಿ ರೂ. ಆದಾಯ

H. D. Kumaraswamy: ನಿಖಿಲ್‌ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ

H. D. Kumaraswamy: ನಿಖಿಲ್‌ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.