ಅವೈಜ್ಞಾನಿಕವಾಗಿ ರಸ್ತೆ , ಚರಂಡಿ ನಿರ್ಮಾಣ
Team Udayavani, Jan 25, 2022, 1:00 PM IST
ಹಾಸನ: ನಗರದ ಸಾಲಗಾಮೆ ರಸ್ತೆ, ಆಕಾಶವಾಣಿ ಸಮೀಪ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್ ಮುಖಂಡ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಆರೋಪಿಸಿದರು.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಸಾಲಗಾಮೆ ರಸ್ತೆಗೆಹೊಂದಿಕೊಂಡಂತಿರುವ ಬಾಗಡೇರ ಕೊಪ್ಪಲು ಗ್ರಾಮದ ಸರ್ವೆ ನಂ.176ರ ಭೂಮಿಯನ್ನು ಶಾಸಕಪ್ರೀತಂಗೌಡ ಅವರು ಕಬಳಿಸಲು ಪೂರಕವಾಗಿ ರಸ್ತೆವಿಸ್ತರಣೆ ಹಾಗೂ ಚರಂಡಿ ನಿರ್ಮಾಣ ನಡೆಯುತ್ತಿದೆ ಎಂದು ದೂರಿದರು.
ಜಾಗ ಕಬಳಿಸಲು ಯತ್ನ: ಈ ಹಿಂದೆ ಇದ್ದ ರಸ್ತೆ ನಕ್ಷೆಯನ್ನು ಬದಲಿಸಿ 50 ಅಡಿ ಇರಬೇಕಾದ ರಸ್ತೆಯನ್ನು 30 ಅಡಿಗೆ ಸೀಮಿತಗೊಳಿಸಿ ನಿರ್ಮಿಸಲಾಗಿದೆ. ಆಕಾಶವಾಣಿ ಕೇಂದ್ರದ ಮುಂಭಾಗದಿಂದ 50 ಅಡಿರಸ್ತೆಯಿದೆ. ಆದರೆ, ಸಿದ್ಧಿ ವಿನಾಯಕ ದೇವಸ್ಥಾನದಿಂದ ಕಾರ್ಪೋರೇಷನ್ ಬ್ಯಾಂಕ್‌ವರೆಗೆ ರಸ್ತೆಯನ್ನು 30 ಅಡಿಗೆ ಸೀಮಿತಗೊಳಿಸಲಾಗಿದೆ. ಹಾಗೆಯೇ ಚರಂಡಿಯನ್ನೂ 3 ಅಡಿಯಿಂದ ಒಂದು ಅಡಿಗೆ ವಿಸ್ತಾರಕ್ಕೆ ನಿರ್ಮಿಸಲಾಗಿದೆ. ಸಿದ್ಧಿ ವಿನಾಯಕ ದೇವಸ್ಥಾನದ ನಿವೇಶನದಲ್ಲಿ ಸಮುದಾಯ ಭವನಹಾಗೂ ಪಾರ್ಕ್ ನಿರ್ಮಾಣಕ್ಕೆ ಗುರ್ತಿಸಿರುವ ಜಾಗವನ್ನು ಶಾಸಕ ಪ್ರೀತಂಗೌಡ ಅವರು ಕಬಳಿಸಲು ಯತ್ನಿಸಿದ್ದರು. ಈ ಜಾಗವನ್ನು ಸಾರ್ವಜನಿಕ ಬಳಕೆಗೆ ಉಳಿಸಲು ತಮ್ಮ ತಂದೆ, ಮಾಜಿ ಶಾಸಕ ದಿ.ಎಚ್.ಎಸ್.
ಪ್ರಕಾಶ್ ಅವರು ನ್ಯಾಯಾಲಯದ ಮೆಟ್ಟಿಲು ಏರಿ ಜಾಗ ಕಬಳಿಸದಂತೆ ತಡೆಯಾಜ್ಞೆ ತಂದಿದ್ದರು. ಆನಂತರ ಶಾಸಕರು ತಮ್ಮ ಹಿಂಬಾಲಕರ ಹೆಸರಿಗೆದೇವಸ್ಥಾನದ ಆಸ್ತಿಯನ್ನು ಖಾತೆ ಮಾಡಿಸಿಕೊಂಡಿದ್ದು,ದೇವಾಲಯದ ಮುಂಭಾಗದಲ್ಲಿರುವ ವಿಶಾಲಮೈದಾನವನ್ನೂ ಕಬಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಯೋಜನೆಯಂತೆ ರಸ್ತೆ, ಚರಂಡಿ ನಿರ್ಮಿಸಿ: ಶಾಲಾ – ಕಾಲೇಜು ವಿದ್ಯಾರ್ಥಿಗಳು, ಬಾಗಡೇರು ಕೊಪ್ಪಲು,ದ್ಯಾವಪ್ಪನ ಕೊಪ್ಪಲು ನಿವಾಸಿಗಳು ಸಂಚರಿಸುವ ಈ ರಸ್ತೆಯನ್ನು ವಿಶಾಲವಾಗಿ ನಿರ್ಮಿಸಬೇಕಾಗಿತ್ತು.ಆದರೆ, ಲೋಕೋಪಯೋಗಿ ಇಲಾಖೆಎಂಜಿನಿಯರುಗಳು ಶಾಸಕರ ಒತ್ತಡಕ್ಕೆ ಮಣಿದು ರಸ್ತೆಮತ್ತು ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣಮಾಡಿದ್ದಾರೆ. ಮೂಲ ಯೋಜನೆಯಂತೆ ರಸ್ತೆ ಮತ್ತುಚರಂಡಿಯನ್ನು ನಿರ್ಮಿಸಬೇಕು. ಇಲ್ಲದಿದ್ದರೆಲೋಕೋಪಯೋಗಿ ಇಲಾಖೆ ಎಂಜಿನಿಯವರುಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಎಂಜಿನಿಯರ್‌ಗಳು ಬಂದಿಲ್ಲ: ಸ್ಥಳೀಯ ಮುಖಂಡ ಮಂಜುನಾಥ್ ಮಾತನಾಡಿ, ಒಟ್ಟು 30 ಮೀಟರ್ ರಸ್ತೆಯಲ್ಲಿ ರಸ್ತೆ ವಿಭಜಕದ ನಂತರಒಂದೊಂದು ರಸ್ತೆಗೆ 15 ಮೀಟರ್ ಬರುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಯಿಂದಲೂ 15 ಮೀಟರ್‌ನಂತೆಯೇ ನಕ್ಷೆತಯಾರಿಸಲಾಗಿದೆ. ಕಾಮಗಾರಿ ಮಾಡುವಾಗಲೇ ನಾನು 15 ಮೀಟರ್ ರಸ್ತೆ ಮತ್ತು ಚರಂಡಿ ನಿರ್ಮಿಸಿಎಂದು ಹೇಳಿದ್ದರೂ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು 6 ಮೀಟರ್ ರಸ್ತೆ ನಿರ್ಮಿಸಿಎಂದು ಸೂಚಿಸಿದ್ದಾರೆ ಎಂದು ಗುತ್ತಿಗೆದಾರರು ಹೇಳಿದರು. ಎಂಜಿನಿಯರ್ ಸ್ಥಳಕ್ಕೆ ಕರೆಸುವಂತೆ ಹೇಳಿದರೂ ಎಂಜಿನಿಯರುಗಳು ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ಮಾತುಕತೆ ಬಂದಿಲ್ಲ: ರಸ್ತೆ ಮತ್ತು ಚರಂಡಿ ಅವೈಜ್ಞಾನಿಕ ನಿರ್ಮಾಣಕ್ಕೆ ಲೋಕೋಪಯೋಗಿ ಎಂಜಿಜಿನಿಯರ್‌ಗಳೇ ಹೊಣೆಗಾರರು, ಸಿದ್ದಿ ವಿನಾಯಕ ಗಣಪತಿ ದೇವಸ್ಥಾನದ ಜಾಗವು
ಹೈಕೋರ್ಟಿನಲ್ಲಿದ್ದು, ಮಕ್ಕಳ ಆಟದ ಮೈದಾನಕ್ಕೆ ಬಳಸಿಕೊಳ್ಳಲು ಆದೇಶವಾಗಿದೆ. ಈ ಬಗ್ಗೆ ರಾಜೀಮಾಡಿಕೊಳ್ಳೊಣ ಎಂದು ಶಾಸಕ ಪ್ರೀತಂಗೌಡ ಅವರುಕೂಡ ನನ್ನ ಬಳಿ ಹೇಳಿದ್ದರೂ, ಇದುವರೆಗೂ ಅವರುಯಾವ ಮಾತುಕತೆ ಬಂದಿಲ್ಲ ಎಂದು ದೂರಿದರು.ಈಗಲೂ ನನ್ನ ಬಳಿ ಇರುವ ದಾಖಲೆಗಳಿದ್ದು,ಲೋಕಾಯುಕ್ತಕ್ಕೆ ಹೋಗುತ್ತೇನೆ ಎಂದು ಹೇಳಿದರು.ಸ್ವರೂಪ್ ಅವರು ಸ್ಥಳ ಪರಿಶೀಲನೆ ನಡೆಸುವಸಂದರ್ಭದಲ್ಲಿ ಬಾಗೇಡರ ಕೊಪ್ಪಲು ಮತ್ತಿತರಬಡಾವಣೆಗಳ ನಾಗರೀಕರೂ ಹಾಜರಿದ್ದು,ಲೋಕೋಪಯೋಗಿ ಇಲಾಖೆಯುವರುಅವೈಜ್ಞಾನಿಕವಾಗಿ ರಸ್ತೆ ಹಾಗೂ ಚರಂಡಿ ನಿರ್ಮಿಸಿರುವುದನ್ನು ಖಂಡಿಸಿದರು.
ಸಿದ್ಧಿ ವಿನಾಯಕ ದೇವಸ್ಥಾನದನಿವೇಶನದಲ್ಲಿ ಸಮುದಾಯ ಭವನಹಾಗೂ ಪಾರ್ಕ್ ನಿರ್ಮಾಣಕ್ಕೆ ಗುರ್ತಿಸಿರುವ ಜಾಗವನ್ನು ಶಾಸಕರುಕಬಳಿಸಲು ಯತ್ನಿಸಿದ್ದರು. ಈ ಜಾಗವನ್ನುಸಾರ್ವಜನಿಕ ಬಳಕೆಗೆ ಉಳಿಸಲು ಮಾಜಿಶಾಸಕ ದಿ.ಎಚ್.ಎಸ್.ಪ್ರಕಾಶ್‌ನ್ಯಾಯಾಲಯದ ಮೆಟ್ಟಿಲು ಏರಿ ಜಾಗಕಬಳಿಸದಂತೆ ತಡೆಯಾಜ್ಞೆ ತಂದಿದ್ದರು. -ಎಚ್.ಪಿ.ಸ್ವರೂಪ್, ಜಿಪಂ ಮಾಜಿ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.