ಮತದಾನ ಮುಗೀತು, ಇನ್ನು ಸೋಲು, ಗೆಲುವಿನ ಲೆಕ್ಕಾಚಾರ
Team Udayavani, Apr 21, 2019, 8:13 PM IST
ಸಕಲೇಶಪುರ: ತಾಲೂಕಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ನೇರಾ ಹಣಾಹಣಿ ನಡೆದಿದ್ದು ಯಾವ ಪಕ್ಷಕ್ಕೆ ಮುನ್ನಡೆ ಲಭಿಸಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಬದಲಾದ ರಾಜಕೀಯ ಚಿತ್ರಣ: ಕಟ್ಟಾಯ- ಆಲೂರು-ಸಕಲೇಶಪುರ ಕ್ಷೇತ್ರಗಳನ್ನು ಒಳಗೊಂಡ
ತಾಲೂಕು ರಾಜ್ಯದ ಅತಿ ದೊಡ್ಡ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಕ್ಷೇತ್ರಗಳಲ್ಲಿ ಒಂದಾಗಿದೆ.
ಕ್ಷೇತ್ರ ವಿಂಗಡಣೆಯಾಗುವ ಮೊದಲು ತಾಲೂಕು ಕೇವಲ ಆಲೂರು ಹಾಗೂ ಸಕಲೇಶಪುರವನ್ನು ಒಳಗೊಂಡಿದ್ದು ಕ್ಷೇತ್ರ ಮೀಸಲಾತಿಯಾದ ನಂತರ ಕಟ್ಟಾಯ ಹೋಬಳಿ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದರಿಂದ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಯಿತು.
ಕಟ್ಟಾಯ ಭಾಗ ಜೆಡಿಎಸ್‌ನ ಭದ್ರ ಕೋಟೆಯಾಗಿರುವುದರಿಂದ ಕಳೆದ 3 ವಿಧಾನಸಭಾ ಚುನಾವಣೆ ಯಲ್ಲೂ ಜೆಡಿಎಸ್ ಅಭ್ಯರ್ಥಿ ಸುಲಭವಾಗಿ
ಆಯ್ಕೆಯಾಗಿದ್ದಾರೆ. ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಸಕಲೇಶಪುರ ತಾಲೂಕಿನಲ್ಲಿ ಬಿಜೆಪಿಗೆ ಅಧಿಕಾರ ಸಿಗದಿದ್ದರೂ ಸಾಂಪ್ರಾದಾಯಿಕ ಮತ ಬ್ಯಾಂಕ್ ಉಳಿಸಿಕೊಂಡು ಬಂದಿದೆ.
ಕಡಿಮೆ ಅಂತರದಿಂದ ಬಿಜೆಪಿ ಸೋಲು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿ 62,262 ಮತಗಳನ್ನು ಪಡೆದಿದ್ದು ಇವರ ಎದುರಾಳಿ ಬಿಜೆಪಿ ಅಭ್ಯರ್ಥಿ
ನಾರ್ವೆ ಸೋಮಶೇಖರ್ 57,320 ಮತಗಳನ್ನು ಪಡೆದು ಕೆಲವೇ ಸಾವಿರ ಮತಗಳಿಂದ ಪರಾಜಿತಗೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಸಿದ್ದಯ್ಯ 37,002 ಮತಗಳನ್ನು ಪಡೆದು ತೃತೀಯಾ ಸ್ಥಾನಕ್ಕೆ ತೃಪ್ತಿ
ಪಟ್ಟಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಬಿದ್ದಿದ್ದ ಬಹುತೇಕ ಮತಗಳು ಜೆಡಿಎಸ್‌ಗೆ ಹಾಗೂ ಬಿಎಸ್‌ಪಿಗೆ ಹಂಚಿ ಹೋಗಿರುವ ಸಾಧ್ಯತೆಗಳಿದ್ದು ಬಿಜೆಪಿ ಸಹ ಕಾಂಗ್ರೆಸ್‌ನಲ್ಲಿದ್ದ ಮೇಲ್ವರ್ಗದವರ ಮತಗಳನ್ನು ಪಡೆದಿದೆ ಎಂದು ಹೇಳಲಾಗುತ್ತಿದೆ.
ಪಕ್ಷಗಳ ಬಲಾಬಲ: ಕಟ್ಟಾಯ ಭಾಗದಲ್ಲಿ ಜೆಡಿಎಸ್ ಬಲಿಷ್ಠ ವಾಗಿದ್ದು ಆಲೂರು ಭಾಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸಮಬಲವಿದ್ದು, ಸಕಲೇಶಪುರ ಭಾಗದಲ್ಲಿ ಬಿಜೆಪಿ ಅಲೆ ತುಸು ಹೆಚ್ಚಿದ್ದರಿಂದ ಯಾವ
ಪಕ್ಷ ಅಧಿಕ ಮುನ್ನಡೆ ಪಡೆಯುತ್ತದೆಂದು ಹೇಳಲು ಅಸಾಧ್ಯವಾಗಿದೆ.
ದಲಿತ ಮತಗಳು ಬಿಎಸ್‌ಪಿಗೆ ಹೆಚ್ಚಾಗಿ ಬಿದ್ದಿರುವುದರಿಂದ ಜೆಡಿಎಸ್ ಭರ್ಜರಿ ಮುನ್ನಡೆ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ
ಅಭಿಪ್ರಾಯಗಳು ಕೇಳಿ ಬರುತ್ತಿದೆ. ಮತದಾನ ನಡೆಯುವ 2 ದಿನಗಳ ಹಿಂದಿನವರೆಗೂ ಬಿಜೆಪಿ ಮುನ್ನಡೆಪಡೆಯುವ ಎಲ್ಲಾ ಸಾಧ್ಯತೆಯಿದೆ. ಆದರೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ವ್ಯಾಪಕ ಸಂಪನ್ಮೂಲ ವ್ಯಯಿಸಿರು
ವುದರಿಂದ ಬಿಜೆಪಿಗೆ ಹಿನ್ನೆಡೆಯುಂಟಾಗುವ ಸಾಧ್ಯತೆಗಳಿದೆ ಎಂಬ ಅಭಿಪ್ರಾಯಗಳು ಸಹ ಕೇಳಿ ಬರುತ್ತಿದೆ.
ದಾಖಲೆಯ ಮತದಾನ: ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದೂ ಆಗದ ಮತದಾನ ಈ ಬಾರಿ ಶೇ.80.9 ಆಗಿದ್ದು, ಇದು ಯಾರಿಗೆ ವರದಾನವಾಗುತ್ತದೆಂದು
ಕಾದು ನೋಡಬೇಕಾಗಿದೆ.
ನೀತಿ ಸಂಹಿತೆ ಉಲ್ಲಂಘನೆ 310 ದೂರು ದಾಖಲು
ಹಾಸನ: ಚುನಾವಣಾ ಆಯೋಗವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಾರಿಗೆ ಜಾರಿ ಗೊಳಿಸಿದ ಸಿ-ವಿಜಿಲ್ ಆನ್ ಲೈನ್ ಅμÉಕೇಷನ್‌ನಲ್ಲಿ ಜಿಲ್ಲೆಯಲ್ಲಿ 310 ಪ್ರಕರಣಗಳು ದಾಖಲಾಗಿವೆ
ಎಂದು ಡೀಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ 310 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 52 ಪ್ರಕರಣಗಳಲ್ಲಿ ಮಾತ್ರ ವಾಸ್ತವ ಬೆಳಕಿಗೆ ಬಂದಿವೆ. ಪ್ರಕರಣಗಳ ಸತ್ಯಾ ಸತ್ಯತೆ ತಿಳಿಯಲು ಫ್ಲೈಯಿಂಗ್ ಸ್ಕ್ವಾಡ್ ನೇಮಿಸಲಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿ ಉಲ್ಲಂಘನೆಯಡಿ ಜಿಲ್ಲೆಯಲ್ಲಿ 24 ಪ್ರಕರಣಗಳು ದಾಖಲಾಗಿವೆ. ಅಲ್ಲದೆ,1.92 ಕೋಟಿ ರೂ. ಮೌಲ್ಯದ 43,886 ಲೀ.ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ದಾಖಲಾತಿ ಇಲ್ಲದೆ ಸಾಗಾಟಮಾಡುತ್ತಿದ್ದ 25,4800 ರೂ. ನಗದನ್ನು ಚೆಕ್ ಪೋಸ್ಟ್ ಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಹಣವನ್ನು
ಜಾನುವಾರು ಖರೀದಿಗೆ ತೆಗೆದುಕೊಂಡು ಹೋಗು ತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಒಂದು ವಾರದೊಳಗೆ ಜಿಲ್ಲಾ ಪಂಚಾಯಿತಿ ಕಾರ್ಯ
ನಿರ್ವಹಣಾ ಅಧಿಕಾರಿ ವಿಜಯ ಪ್ರಕಾಶ್ ಅವರ ನೇತೃತ್ವದಲ್ಲಿ ಸಭೆ ಕರೆದು ವಿಚಾರಣೆ ನಡೆಸಿ ಚುನಾವಣೆಗೆ ಬಳಕೆಯಾಗದ ಹಣವೆಂಬ ಮಾಹಿತಿ ಖಚಿತವಾದರೆ ಸಂಬಂಧಪಟ್ಟವರಿಗೆ ಹಣ
ಮರುಪಾವತಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.