ವಾಟೆಹೊಳೆ ನದಿ ಇದ್ರೂ ನೀರಿಗೆ ಹಾಹಾಕಾರ
Team Udayavani, Apr 16, 2021, 3:25 PM IST
ಆಲೂರು: ಆಲೂರು ತಾಲೂಕು ಅರೇ ಮಲೆನಾಡುಪ್ರದೇಶದಿಂದ ಕೂಡಿದ್ದು ತಾಲೂಕಿನ ನಾಲ್ಕು ಹೋಬಳಿತಾಲೂಕಿನಲ್ಲಿ 15 ಗ್ರಾಪಂ ಹಾಗೂ ಒಂದು ಪಟ್ಟಣಪಂಚಾಯಿತಿಗಳನ್ನು ಹೊಂದಿದೆ.ಕುಂದೂರು ಹಾಗೂ ಕೆ.ಹೊಸಕೋಟೆ, ಹೋಬಳಿಗಳು ಮಲೆನಾಡು ಭಾಗಗಳಲ್ಲಿ ಸೇರಿಕೊಂಡಿದ್ದು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಕೆಲವು ಕಡೆಗಳಲ್ಲಿಅಂತರ್ಜಲಮಟ್ಟ ತಳದಲ್ಲಿ ಇರುವುದರಿಂದ ರೈತರುತಮ್ಮ ತಮ್ಮ ಗದ್ದೆ, ತೋಟಗಳಲ್ಲಿ ಜರಿಯಾ ನೀರನ್ನೇಆಶ್ರಯಿಸಬೇಕಾದ ಅನಿವಾರ್ಯ ಉಂಟಾಗಿದೆ.
ಈಭಾಗಗಳಲ್ಲಿ ನಿತ್ಯ ಕಾಡಾನೆಗಳ ಉಪಟಳ ಹೆಚ್ಚಿರುವುದರಿಂದ ಮನೆಯಿಂದ ಹೊರ ಹೋಗಿ ನೀರುತರುವೇದೆ ದೊಡ್ಡ ಸಮಸ್ಯೆಯಾಗಿ ಕುಡಿವ ನೀರಿಗೆಹಾಹಾಕಾರ ಉಂಟಾಗಿದೆ.ನದಿ ಇದ್ದರೂ ತಾಲೂಕಿಗಿಲ್ಲ ನೀರು: ಆಲೂರಿನಜೀವನದಿ ವಾಟೆಹೊಳೆ ನದಿ, ಪಾಳ್ಯ ಹಾಗೂ ಆಲೂರುಕಸಬಾ ಹೋಬಳಿಯ ಕೆಲವು ಗ್ರಾಮಗಳಲ್ಲಿ ಹಾದುಹೋಗಿದ್ದರೂ ಸಹ ನದಿ ಪಾತ್ರದಲ್ಲಿರುವ ಗ್ರಾಮಹಾಗೂ ದನ-ಕರುಗಳಿಗೆ ಕುಡಿಯುವ ನೀರು ಹಾಗೂ ಸಣ್ಣಪುಟ್ಟ ಬೆಳೆ ಬೆಳೆಯುವುದು ಹೊರತುಪಡಿಸಿ ತಾಲೂಕಿಗೆ ಪೂರ್ಣ ಪ್ರಮಾಣದಲ್ಲಿ ಕುಡಿಯುವನೀರು ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲದಿರುವುದು ದುರದೃಷ್ಟಕರ.
ಇನ್ನೂ ಯಗಚಿ ನದಿ ಆಲೂರು ತಾಲೂಕಿನಹುಣಸವಳ್ಳಿ ಗ್ರಾಮದಲ್ಲಿ ಹಾದು ಹೋಗಿರುವುದರಿಂದಪಟ್ಟಣ ಪಂಚಾಯಿತಿಯಿಂದ ನದಿಗೆ ಅಡ್ಡಲಾಗಿ ಒಡ್ಡನ್ನುನಿರ್ಮಿಸಿ ಅದೇ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಮಾತ್ರಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿದೆ.
ವಿದ್ಯುತ್ ಕಣ್ಣು ಮುಚ್ಚಾಲೆ: ತಾಲೂಕಿನ ಮಗ್ಗೆ ಗ್ರಾಮಹೊರತುಪಡಿಸಿ ಬೇರೆಲ್ಲೂ ವಿದ್ಯುತ್ ವಿತರಣಾಕೇಂದ್ರಗಳು ಇಲ್ಲದಿರುವುದರಿಂದ ವೋಲ್ಟೆàಜ್‌ವ್ಯತ್ಯಾಸದಿಂದ ವಿದ್ಯುತ್ ಪರಿವರ್ತಕಗಳು ಆಗಿಂದಾಗ್ಗೆಸುಟ್ಟು ಹೋಗುವುದರಿಂದ ವಿದ್ಯುತ್ ಅಭಾವ ಹೆಚ್ಚುತ್ತಿದ್ದು ಕುಡಿವ ನೀರಿಗೆ ಅಭಾವ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಈ ಹಿಂದೆ 150 ರಿಂದ 200 ಅಡಿಕೊಳವೆ ಬಾವಿ ಕೊರೆಸಿದರೇ ಸಾಕಷ್ಟು ನೀರುಬರುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ 800ರಿಂದ 900 ಅಡಿ ಕೊರೆದರೂ ಕೊಳವೆ ಬಾವಿಯಲ್ಲಿನೀರು ಬರುತ್ತಿಲ್ಲ ಎತ್ತಿನಹೊಳೆ ಕಾಮಗಾರಿ ಮುಗಿದನಂತರ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಜನಸಾಮಾನ್ಯರು.
ನೀರಿನ ಸಮಸ್ಯೆ ಇರುವ ತಾಲೂಕಿನ ಗ್ರಾಮಗಳು: ತಾಲೂಕಿನ ಬೈರಾಪುರ ಗ್ರಾಪಂನಕೆಂಚನಹಳ್ಳಿ, ಬಿಜ್ಜನಹಳ್ಳಿ, ಹೊತ್ನಹಳ್ಳಿಪುರ,ಹಾಂಜಿಹಳ್ಳಿ, ಪಾಳ್ಯ ಗ್ರಾಪಂನ ಹೊನ್ನವಳ್ಳಿ, ಎಂ.ಎಚ್.ಪುರ. ಮಡಬಲು ಗ್ರಾಪಂನ ಲಕ್ಷ್ಮೀಪುರ,ಮಡಬಲು, ತಿಪ್ಲಾಪುರ, ಕದಾಳು ಗ್ರಾಪಂನಹಂಪನಕುಪ್ಪೆ ದೊಡ್ಡ ಕಣಗಾಲ್ ಗ್ರಾಪಂನ ಮುದಿಗೆರೆ, ಹುಣಸವಳ್ಳಿ ಗ್ರಾಪಂನ ಹೊಳೆ ಬೆಳ್ಳೂರು,ಮಲ್ಲಾಪುರ ಗ್ರಾಪಂನ ಕಾಡೂÉರು, ಕಿತ್ತಗಳಲೆ,ಕುಂದೂರು ಗ್ರಾಪಂನ ಸಾಣೆನಹಳ್ಳಿ, ಹಂಚೂರುಗ್ರಾಪಂನ ಕಟ್ಟೆಗದ್ದೆ, ಕಗ್ಗರವಳ್ಳಿ, ಮೂಡ್ನಹಳ್ಳಿ, ಮಗ್ಗೆಗ್ರಾಪಂನ ಬಸವನಪುರ ಕೊಪ್ಪಲು, ಗಂಜಿಗೆರೆಗ್ರಾಪಂ ಕ್ಯಾತನಹಳ್ಳಿ, ಕಾರಗೋಡು ಗ್ರಾಪಂನಪುರಬೈರವನಹಳ್ಳಿ, ಮಗ್ಗೆ ಗ್ರಾಪಂನ ಬಸವನಪುರಕೊಪ್ಪಲು, ಕಣತೂರು ಗ್ರಾಪಂ ವಿರುಪಾಪುರ,ಸಿದ್ದಾಪುರ ಮರಸು ಕೊಪ್ಪಲು ಬಾವಿ ಕೊಪ್ಪಲುಕೊಡಗಿಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನಸಮಸ್ಯೆ ಎದುರಾಗಿದೆ.
ಟಿ.ಕೆ.ಕುಮಾರಸ್ವಾಮಿ ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.