30 ವರ್ಷದ ಬಳಿಕ ನಾಲೆಗೆ ಹರಿದ ನೀರು
ಕಾಚೇನಹಳ್ಳಿ ಏತ ನೀರಾವರಿ ಯೋಜನೆ 2ನೇ ಹಂತ ಪೂರ್ಣ, 300 ಮೀಟರ್‌ಕಾಮಗಾರಿಗೆ 10 ವರ್ಷ ಬೇಕಾಯ್ತು
Team Udayavani, Nov 21, 2020, 3:54 PM IST
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಏತನೀರಾವರಿ ಯೋಜನೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಮೂರು ದಶಕದ ಬಳಿಕ ನಾಲೆಗೆ ನೀರು ಹರಿದಿದೆ. ನಿರೀಕ್ಷೆಯಂತೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಯೋಜನೆಯ ಎರಡನೇ ಹಂತಕ್ಕೆ ನ.20 ರಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದ್ದು, ವಗರಹಳ್ಳಿ, ಮುದ್ದನಹಳ್ಳಿ, ಹಿರೇಹಳ್ಳಿ, , ಅವರೇ ಲಿಂಗನಕೊಪ್ಪಲು, ದೂತನೂರು ಕಾವಲು, ಅಣ್ಣೇನಹಳ್ಳಿ, ಮಾದಲಾಪುರ ಕೆರೆಗಳು ತುಂಬಲಿವೆ. ಹೇಮಾವತಿ ನದಿಯಿಂದ 23 ಕಿ.ಮೀ. ವರೆಗೆ ಇದೇ ಮೊದಲ ಬಾರಿಗೆ ನೀರು ಹರಿಯುತ್ತಿದ್ದು, ಅಂತರ್ಜಲ ವೃದ್ಧಿ ಆಗಲಿದೆ.
ಇದರಿಂದ ತೆಂಗು, ಇತರೆ ಬೆಳೆಗಾರರಿಗೆ ಸಾಕಷ್ಟು ಉಪಯೋಗವಾಗುತ್ತಿದೆ. 10 ವರ್ಷದ ನಂತರ ಬಂಡೆ ತೆರವು: ಕಾಚೇನಹಳ್ಳಿ ಏತನೀರಾವರಿ ಯೋಜನೆಯ ಎರಡನೇ ಹಂತದ ನಾಲೆ ಕಾಮಗಾರಿ ನಡೆಯುವಾಗ ದಂಡಗನಹಳ್ಳಿ ಬಳಿ 300 ಮೀಟರ್‌ವರೆಗೆ ಕಲ್ಲು ಬಂಡೆಗಳೇ ಇದ್ದವು. ಇದರಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿತ್ತು. ಇದನ್ನು ಕೆಲವು ರಾಜ ಕಾರಣಿಗಳು ಚುನಾವಣೆಯಲ್ಲಿ ದಾಳವಾಗಿಸಿಕೊಂಡಿದ್ದರು. 10 ವರ್ಷದಿಂದ ಕಾಮಗಾರಿ ಮಾಡಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದವು. ಈಗಕಾಮಗಾರಿ ಮುಕ್ತಾಯವಾಗಿದ್ದು, ನೀರು ಹರಿಯುತ್ತಿದೆ.
ಎಷ್ಟು ಪ್ರದೇಶಕ್ಕೆ ಅನುಕೂಲ: ಕಾಚೇನಹಳ್ಳಿ ಏತನೀರಾವರಿ ಯೋಜನೆ ಕೇವಲ ದಂಡಿಗನಹಳ್ಳಿ ಹೋಬಳಿಗೆ ಮಾತ್ರ ಅನುಕೂಲ ಆಗುತ್ತಿಲ್ಲ, ನಾಲ್ಕು ತಾಲೂಕಿನ ರೈತರು ಇದರ ಫಲ ಪಡೆಯಲಿದ್ದಾರೆ. ಈ ಯೋಜನೆಯಿಂದ ತಾಲೂಕಿನ 9,489 ಎಕರೆ ಪ್ರದೇಶಕ್ಕೆ ನೀರು ಸಿಗುತ್ತದೆ, ಹೊಳೆನರಸೀಪುರ ತಾಲೂಕಿನ 1,558 ಎಕರೆ, ಅರಸೀಕೆರೆ 1,420 ಎಕರೆ, ಹಾಸನ ತಾಲೂಕಿನ 133 ಎಕರೆ ನೀರಾವರಿ ಪ್ರದೇಶಕ್ಕೆ ಅನುಕೂಲವಾಗುತ್ತದೆ. 29 ವರ್ಷದ ಹಿಂದೆ ಶಂಕುಸ್ಥಾಪನೆ: 1991 ಡಿ.27 ರಂದು ಅಂದಿನ ಸರ್ಕಾರ 8.9 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಿ ಶಂಕು ಸ್ಥಾಪನೆ ಮಾಡಿತ್ತು. ಮೊದಲ ಹಂತವಾಗಿ 2015 ಏ.13 ರಂದು ಹೇಮಾವತಿ ನದಿಯಿಂದ ಅತ್ತಿಚೌಡೇನಹಳ್ಳಿವರೆಗೆ ನೀರು ಹರಿಸ ಲಾಗಿತ್ತು. ಇದಾದ ಬಳಿಕ ಎರಡನೇ ಹಂತದಲ್ಲಿ ಕಳೆದ ಮೂರು ವರ್ಷದಿಂದ ಕೆಲ ಗ್ರಾಮದ ಕೆರೆಗೆ ಮಾತ್ರ ನೀರು ಹರಿಯುತ್ತಿತ್ತು. ಈಗ ಎರಡನೇಹಂತಸಂಪೂರ್ಣವಾಗಿದ್ದು ಎಲ್ಲಾ ಕೆರೆಗಳಿಗೆ ನೀರು ಹರಿಯಲಿದೆ. ಮೂರ್‍ನಾಲ್ಕು ತಿಂಗಳಲ್ಲಿ ಹತ್ತಾರು ಗ್ರಾಮದಕೆರೆಗಳು ತುಂಬಲಿವೆ.
ರೈತರಿಗೆ ಭೂ ಪರಿಹಾರ ಯಾವಾಗ?: ಯೋಜನೆ ಮುಕ್ತಾಯವಾಗಿ ಕೆರೆಗಳಿಗೆ ನೀರು ಹರಿಯುತ್ತಿದೆ, ಆದರೆ, ನಾಲೆ ಮಾಡಲು ತಮ್ಮಕೃಷಿ ಭೂಮಿ ಬಿಟ್ಟುಕೊಟ್ಟಿರುವ ರೈತರಿಗೆ ಭೂ ಪರಿಹಾರದ ಹಣ ನೀಡಬೇಕಾಗಿದೆ, ಅಂದಾಜು ಮೂರು ಕೋಟಿ ರೂ. ಪರಿಹಾರ ಹಣ ತೆಂಕನಹಳ್ಳಿ, ದೊತನೂರು ಕಾವಲು, ಮೂರಾರನಹಳ್ಳಿ, ದಂಡಿಗನಹಳ್ಳಿ, ತಿಮ್ಮಾಲಾಪುರ, ಅವರೇಲಿಂಗನಕೊಪ್ಪಲು ಗ್ರಾಮದ ರೈತರಿಗೆ ನೀಡಬೇಕಿದೆ. ಇದು ಯಾವಾಗ ಖಾತೆಗೆ ಜಮಾ ಆಗುತ್ತದೆ ಎಂಬುದನ್ನು ರೈತರು ಎದುರು ನೋಡುತ್ತಿದ್ದಾರೆ.
ಎಚ್ಡಿಕೆ ಸಿಎಂಆಗಿದ್ದಾಗ 3ನೇ ಹಂತಕ್ಕೆ ಹಣ :
ಚನ್ನರಾಯಪಟ್ಟಣ: ತಾಲೂಕಿನಕಾಚೇನಹಳ್ಳಿ ಏತನೀರಾವರಿ ಯೋಜನೆ ಮೂರನೇ ಹಂತಕ್ಕೆಕುಮಾರಸ್ವಾಮಿ ಸಿಎಂ ಆಗಿದ್ದಾಗ141ಕೋಟಿ ರೂ. ಹಣ ಮೀಸಲಿಟ್ಟಿದ್ದು, ಈಗಾಗಲೆ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಆದರೆ, ಕೆಲವರು3ನೇ ಹಂತದ ಯೋಜನೆಕಾಂಗ್ರೆಸ್ ಪಕ್ಷ ಮಾಡಿದ್ದು ಎಂದು ಹೇಳುತ್ತಿದ್ದಾರೆ. ದಾಖಲೆಗಳು ಇದ್ದರೆ ಬಹಿರಂಗ ಮಾಡಲಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದರು.
ತಾಲೂಕಿನ ದಂಡಿಗನಹಳ್ಳಿ ಬಳಿ ಕಾಚೇನಹಳ್ಳಿ ಏತನೀರಾವರಿ ಯೋಜನೆ ಎರಡನೇ ಹಂತಕ್ಕೆ ಪ್ರಾಯೋಗಿಕ ನೀರು ಹರಿಸಲು ಚಾಲನೆ ನೀಡಿ ಮಾತನಾಡಿದ ಅವರು, ನಾನು ಮಂತ್ರಿ ಆಗಿದ್ದಾಗ ದಂಡಿಗನಹಳ್ಳಿ ಹೋಬಳಿಗೆ 100ಕೋಟಿ ರೂ. ನಲ್ಲಿ ರಸ್ತೆಕಾಮಗಾರಿ ಮಾಡಿಸಿದ್ದೆ. ಅಲ್ಲದೆ, ನೀರಾವರಿ ಇಲಾಖೆಯಿಂದ150 ಕೋಟಿ ರೂ. ವೆಚ್ಚ ಮಾಡಿ ನಾಲೆಕಾಮಗಾರಿ, ಸಮುದಾಯ ಭವನ, ದೇವಾಲಯ ನಿರ್ಮಾಣ ಮಾಡಿದ್ದೇನೆ. ಒಂದು ತಾಲೂಕಿಗೆ ನೀಡುವಷ್ಟು ಹಣ ಹೋಬಳಿಗೆ ನೀಡಿ, ಜನರ ಋಣ ತೀರಿಸುತ್ತಿದ್ದೇನೆ ಎಂದು ಹೇಳಿದರು.
ಮೂರೂವರೆ ವರ್ಷ ವ್ಯಾಪಾರ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂರೂವರೆ ವರ್ಷ ಜಿಲ್ಲಾ ಮಂತ್ರಿಯಾಗಿದ್ದ ಎ.ಮಂಜು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸದೆ, ವ್ಯಾಪಾರ ಮಾಡಿಕೊಂಡು ತಮ್ಮ ಜೋಬು ತುಂಬಿಸಿಕೊಂಡರು, ಅವರ ಅವಧಿಯಲ್ಲಿ ಯಾಕೆಕಾಚೇನಹಳ್ಳಿ ಏತನೀರಾವರಿ ಯೋಜನೆ ಪೂರ್ಣ ಮಾಡಲು ಸಾಧ್ಯವಾಗಲಿಲ್ಲ, ಐದು ವರ್ಷ ಬಿಜೆಪಿ ಸರ್ಕಾರದ ನಂತರ ಐದು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ಮಾಡಿದೆ. ಆ ವೇಳೆಯಲ್ಲಿ ಈ ಯೋಜನೆ ಪೂರ್ಣ ಮಾಡಿಲ್ಲ, ಇದಕ್ಕೆ ಸೂಕ್ತಕಾರಣ ತಿಳಿಸಬೇಕು ಎಂದು ಹೇಳಿದರು.
ಶಾಸಕ ಬಾಲಕೃಷ್ಣಗೇ ಟಿಕೆಟ್: ರೇವಣ್ಣ :
ಮಾಜಿ ಶಾಸಕ ಪುಟ್ಟೇಗೌಡ ಇತ್ತೀಚೆಗೆಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸಲಾಗದೆ, ಶಾಸಕ ಬಾಲಕೃಷ್ಣ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ, ಇನ್ನು ಸೂರಜ್‌ಕ್ಷೇತ್ರಕ್ಕೆ ಆಗಮಿಸಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ತನ್ನ ಕುಟುಂಬದಲ್ಲಿಕಲಹ ಉಂಟು ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದರು.
ಶ್ರವಣಬೆಳಗೊಳ ವಿಧಾನಸಭಾಕ್ಷೇತ್ರಕ್ಕೆ ದೇವೇಗೌಡ ಕುಟುಂಬದವರು ಪಾದಾರ್ಪಣೆ ಮಾಡುವುದಿಲ್ಲ, ಮುಂದಿನ ಬಾರಿ ಹಾಲಿ ಶಾಸಕ ಬಾಲಕೃಷ್ಣರಿಗೆ ಪಕ್ಷದ ಟಿಕೆಟ್ ನೀಡಲಾಗುವುದು, ನನಗಿಂತ ಉತ್ತಮಕೆಲಸ ಮಾಡುತ್ತಿದ್ದಾರೆ. ತಾಲೂಕಿನಕೆರೆಗಳನ್ನು ಸಂಪೂರ್ಣ ತುಂಬಿಸಿ,ಕೃಷಿಗೆ ಅನುಕೂಲ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿ ಬಗ್ಗೆ ಇಲ್ಲ ಸಲ್ಲದ ಮಾತನಾಡುವುದು ತರವಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೇಳಿದರು.
ನನ್ನ ಮರತೆ ಜನ: ದಂಡಿಗನಹಳ್ಳಿ ಹೋಬಳಿ ಜನತೆ ಎಚ್.ಡಿ.ರೇವಣ್ಣನ ಮರೆತು ಡಾ.ಸೂರಜ್ ಜಪ ಮಾಡುತ್ತಿದ್ದಾರೆ, ಇದನ್ನು ಸಹಿಸಲಾಗದೇಕೆಲವರು ತಾತ ಹಾಗೂ ಅಪ್ಪನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ, ಬಿಜೆಪಿಯಲ್ಲಿ ಅಪ್ಪನ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಲೇವಡಿ ಮಾಡಿದರು.
ಕಳೆದ 30 ವರ್ಷದಿಂದ ನಮ್ಮೂರಕೆರೆಗೆ ನೀರು ಬರುತ್ತದೆ ಎಂದು ಚಾತಕ ಪಕ್ಷಿಯಂತೆಕಾಯುತ್ತಿದ್ದೆವು, ಈಗ ನೀರು ಹರಿಯುವ ಲಕ್ಷಣ ಕಾಣುತ್ತಿದೆ. ದಂಡಿಗನಹಳ್ಳಿ ಹೋಬಳಿ ಜನರಿಗೆ ಸಂತಸವಾಗಿದೆ. – ನಾಗರಾಜು, ರೈತ ಸಂಘದ ಮುಖಂಡ
–ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.