15 ದಿನಕ್ಕೊಮ್ಮೆ ಕ‌ಬ್ಬಿನ ಬೆಳೆಗೆ ನೀರು


Team Udayavani, Feb 22, 2021, 3:15 PM IST

15 ದಿನಕ್ಕೊಮ್ಮೆ ಕ‌ಬ್ಬಿನ ಬೆಳೆಗೆ ನೀರು

ಚನ್ನರಾಯಪಟ್ಟಣ: ಶ್ರೀರಾಮ ದೇವರ ನಾಲೆ ವ್ಯಾಪ್ತಿಯಲ್ಲಿ ಕಬ್ಬು ಬೆಳೆದಿರುವ ಕೃಷಿಕರ ಅನುಕೂಲಕ್ಕಾಗಿ ಮುಂದಿನ ಮೂರು ತಿಂಗಳು 15 ದಿನಕ್ಕೆ ಒಮ್ಮೆ ನೀರು ಬಿಡಿಸಲಾಗುವುದು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಭರವಸೆ ನೀಡಿದರು.

ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ನಡೆದ “ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ’ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದ್ದು, ಅದಕ್ಕೆ ಕಬ್ಬಿನ ಅವಶ್ಯವಿದೆ. ಇಂತಹ ವೇಳೆಯಲ್ಲಿ ಬೆಳೆಗಾರರಿಗೆ ಅನುಕೂಲವಾಗಲೆಂದು ನೀರಾವರಿ ಇಲಾಖೆ ಅಧಿಕಾರಿ ಜೊತೆ ಮಾತನಾಡಿದ್ದು, ಪ್ರತಿ ಹದಿನೈದು ದಿನಕ್ಕೆ ಒಮ್ಮೆ ನೀರು ಹರಿಸಲು ಮುಂದಾಗುತ್ತೇನೆ ಎಂದು ತಿಳಿಸಿದರು.

ಅರ್ಜಿಗಳ ಇತ್ಯರ್ಥಕ್ಕೆ ಕ್ರಮ: ಕಳೆದ ನಾಲ್ಕು ವರ್ಷದಿಂದ ಆಶ್ರಯ ಮನೆಗಳಿಗೆ ಅನುದಾನ ನೀಡುತ್ತಿಲ್ಲ, ವಸತಿ ಸಚಿವ ಸೋಮಣ್ಣ ಆಶ್ರಯ ಮನೆ ಪಟ್ಟಿ ಮಾಡಿ ಕಳುಹಿಸುವಂತೆ ಹೇಳಿದ್ದರು. ಅದನ್ನು ಕಳುಹಿಸಲಾಗಿದೆ. ನೂತನವಾಗಿ ಆಶ್ರಯ ಮನೆ ನಿರ್ಮಾಣಕ್ಕೆ ಸರ್ಕಾರ ಅನುಮೊದನೆ ನೀಡಿಲ್ಲ, ಹಾಗಾಗಿ ಆಶ್ರಯ ಮನೆಗೆಸಂಬಂಧಿಸಿದ ಅರ್ಜಿಗಳಿಗೆ ಅದಷ್ಟು ಬೇಗ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದರು.

ವೈಮನಸ್ಸು ಇರಬಾರದು: ಎಂಎಲ್ಸಿ ಗೋಪಾಲಸ್ವಾಮಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಾವು(ಕಾಂಗ್ರೆಸ್‌ ಪಕ್ಷದವರು) ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಮಾಡಿದ್ದೇವೆ, ಇಂತಹ ಗ್ರಾಮದಲ್ಲಿ ಯಾರು ಜೆಡಿಎಸ್‌, ಬಿಜೆಪಿ ಹಾಗೂಕಾಂಗ್ರೆಸ್‌ ಎಂದು ವ್ಯಾಜ್ಯ ಮಾಡಿಕೊಂಡು ನೆಮ್ಮದಿ ಹಾಳುಮಾಡಿಕೊಳ್ಳುತ್ತೀರ, ರಾಜಕಾರಣಿಗಳು ಗ್ರಾಮಕ್ಕೆ ಒಂದುದಿನ ಬರುತ್ತಾರೆ, ನೀವು ನಿತ್ಯವೂ ಇಲ್ಲೆ ಇರುತ್ತೀರ,ನಿಮ್ಮಗಳ ನಡುವೆ ವೈಮನಸ್ಸು ಇರಬಾರದು ಎಂದು ಸಲಹೆ ನೀಡಿದರು.

67 ಅರ್ಜಿಗಳು ಬಂದಿವೆ: ತಹಶೀಲ್ದಾರ್‌ ಜೆ.ಬಿ.ಮಾರುತಿ ಮಾತನಾಡಿ, ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂಧಿಸಿದ 67 ಅರ್ಜಿಗಳು ಬಂದಿವೆ, ಅವುಗಳಲ್ಲಿ ಚರಂಡಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದ್ದಾರೆ. ಬೀದಿ ದೀಪ ನಿರ್ವಹಣೆ, ಗ್ರಾಮದ ತಿಪ್ಪೆಗುಂಡಿ ಸ್ಥಳಾಂತರ, ಅಂಚೆ ಕಚೇರಿ ಸಿಬ್ಬಂದಿ, ಗ್ರಾಮಕ್ಕೆ ಬರದೆ ಅವರಿರುವ ಜಾಗಕ್ಕೆ ಕರೆಯಿಸಿಕೊಳ್ಳುತ್ತಿರುವುದು, ಗ್ರಾಪಂಅಧಿಕಾರಿಗಳು ಸ್ಥಳಕ್ಕೆ ಬಾರದೆ ಗ್ರಾಮದ ಯೋಜನೆ ಬಗ್ಗೆ ಕ್ರಿಯಾ ಯೋಜನೆ ರೂಪಿಸುತ್ತಿರುವ ಬಗ್ಗೆ ದೂರು ಬಂದಿವೆ. ಅವುಗಳಲ್ಲಿ ಆದಷ್ಟು ಸ್ಥಳದಲ್ಲಿ ಬಗೆಹರಿಸಲಾಗಿದೆ ಎಂದು ಹೇಳಿದರು.

ಇಲಾಖಾವಾರು ಅರ್ಜಿ: ಗಂಗಾಕಲ್ಯಾಣ ಕೊಳವೆಬಾವಿ ಕೊರೆಯಿಸುವುದು, ಅರಣ್ಯ ಇಲಾಖೆಗೆ ಒಂದು ಅರ್ಜಿ, ಸೆಸ್ಕ್ನಿಂದ ಎರಡು ಅರ್ಜಿ, ಸರ್ವೆ ಇಲಾಖೆ ಆರು ಅರ್ಜಿ,ಕೃಷಿ ಇಲಾಖೆಯಿಂದ ಐದು ಅರ್ಜಿ, ಕಂದಾಯಇಲಾಖೆಗೆ ಆರು ಅರ್ಜಿ ಬಂದಿವೆ. ಕೃಷಿ ಇಲಾಖೆ ಐದು ಬಂದಿವೆ, ಕಂದಾಯ ಇಲಾಖೆ ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ. ಅರಣ್ಯ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದ ಅರ್ಜಿಗಳಿಗೆ ಸಮಯ ಪಡೆದಿದ್ದು, ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಹೇಳಿದರು.

ಜಿಪಂ ಸದಸ್ಯ ಪುಟ್ಟಸ್ವಾಮಿ, ನಲ್ಲೂರು ಗ್ರಾಪಂ ಅಧ್ಯಕ್ಷ ಗಿಡ್ಡಮ್ಮ, ಸದಸ್ಯ ಮಣಿಕಂಠ, ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.