ಕಾಡಾನೆ: ಶಾಶ್ವತ ಪರಿಹಾರಕ್ಕೆ ಕೇಂದ್ರ ಶ್ರಮಿಸುತ್ತಿದೆ


Team Udayavani, Dec 11, 2022, 5:04 PM IST

ಕಾಡಾನೆ: ಶಾಶ್ವತ ಪರಿಹಾರಕ್ಕೆ ಕೇಂದ್ರ ಶ್ರಮಿಸುತ್ತಿದೆ

ಸಕಲೇಶಪುರ: ಮಲೆನಾಡು ಭಾಗದಲ್ಲಿ ಕಾಡುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಶನಿವಾರ ಪಟ್ಟಣದ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಡಾನೆ ಸಮಸ್ಯೆ ನಿವಾರಣೆ ಸಭೆಯಲ್ಲಿ ಮಾತನಾ ಡಿದರು. ಮುಖ್ಯಮಂತ್ರಿಗಳು ಸಕಲೇಶಪುರ ತಾಲೂಕಿನ ಆಳಿಯನಾಗಿರುವ ಕಾರಣ ಸಮಸ್ಯೆ ಬಗ್ಗೆ ಅವರಿಗೂ ಸಾಕಷ್ಟು ಅರಿವಿದೆ. ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಜೀವ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಇನ್ನೂ 10 ಕಾಡಾನೆಗಳಿಗೆ ರೇಡಿಯೋ ಕಾಲರ್‌ ಆಳವಡಿಸಲು ಸೂಚನೆ ನೀಡಲಾಗಿದೆ.

ಸೋಲಾರ್‌ ಬೇಲಿ ಆಳವಡಿಸಲು ಸರ್ಕಾರ ಅನುದಾನ ಮೀಸಲಿಟ್ಟಿದೆ. ಆದರೆ, ಅರಣ್ಯ ದೂರದಲ್ಲಿರುವುದರಿಂದ ಕಾರ್ಯಸಾಧ್ಯವಾ ಗುತ್ತಿಲ್ಲ. ಸೋಲಾರ್‌ ಬೇಲಿ ಆಳವಡಿಕೆಗಾಗಿ ಈಗಾಗಲೇ ಶೇ.50ರಷ್ಟು ರಿಯಾಯ್ತಿ ನೀಡಲಾಗುತ್ತಿದೆ.

ಟಾಸ್ಕ್ ಪೋರ್ಸ್ ರಚನೆ: ಮುಂದಿನ ದಿನಗಳಲ್ಲಿ ಇದನ್ನು ಶೇ.75ಕ್ಕೆ ಏರಿಸುವ ಚಿಂತನೆ ಇದೆ. ರೈಲ್ವೆ ಕಂಬಿ ತಡೆ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಮತ್ತಷ್ಟು ವಿಸ್ತೀರ್ಣದ ತಡೆಬೇಲಿ ನಿರ್ಮಾಣ ಮಾಡಲಾಗುವುದು. ಕೇಂದ್ರ ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಇಲ್ಲಿರುವ ಕಾಡಾನೆಗಳ ನ್ನು ಬೇರೆ ಜಿಲ್ಲೆಗಳಿಗೆ ಬಿಡುವ ಬಗ್ಗೆಯೂ ಚರ್ಚೆ ನಡೆದಿದೆ. ಅಲ್ಲದೆ ಸದ್ಯ ಕಾಡಾನೆ ಟಾಸ್ಕ್ ಪೋರ್ಸ್‌ ತಂಡವನ್ನು ಸಹ ರಚಿಸಲಾಗಿದೆ ಎಂದರು.

ಕಾಡಾನೆ ಸ್ಥಳಾಂತರಿಸಿ: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್‌.ಟಿ ಮೋಹನ್‌ ಕುಮಾರ್‌ ಮಾತನಾಡಿ, 2014ರಲ್ಲಿ ಹೈಕೋರ್ಟ್‌ ನ್ಯಾ.ಎಂ.ಎಂ.ಅಪ್ಪಯ್ಯ ಅವರಿದ್ದ ನ್ಯಾಯಾಲಯ ತೀರ್ಪು ನೀಡಿದ್ದರು. ಈ ತೀರ್ಪಿನ ಆಧಾರದಲ್ಲಿ 22 ಕಾಡಾನೆಗಳನ್ನು ಹಿಡಿಯಲಾಯಿತು. ಆದರೆ, ನಂತರದ ದಿನಗಳಲ್ಲಿ ಕೋರ್ಟ್‌ ತೀರ್ಪು ಜಾರಿಯಾಗದ ಹಿನ್ನೆಲೆ ಮತ್ತೆ ಕಾಡಾನೆಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ, ಇಲ್ಲಿರುವ ಎಲ್ಲ ಕಾಡಾನೆಗಳನ್ನು ಸ್ಥಳಾಂತರಿಸುವ ಮೂಲಕ ಕಾಡಾನೆ ಮುಕ್ತ ತಾಲೂಕನ್ನಾಗಿ ಮಾಡಬೇಕು ಎಂದರು.

ಇಲಾಖೆ ಕ್ರಮಗಳ ಬಗ್ಗೆ ವಿವರಣೆ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್‌ ಮಾತನಾಡಿ, ಕಾಡಾನೆ ಸಮಸ್ಯೆ ನಿವಾರಣೆಗಾಗಿ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ, ಮಾಜಿ ಶಾಸಕರಾದ ಎಚ್‌.ಎಂ. ವಿಶ್ವನಾಥ್‌, ಬಿ.ಆರ್‌.ಗುರುದೇವ್‌, ಸರ್ಕಾರದ ಅಪಾರ ಕಾರ್ಯದರ್ಶಿ ಜಾ ವೀದ್‌ ಅಖ್ತರ್‌, ಕೇಂದ್ರ ವನ್ಯ ಜೀವಿ ವಿಭಾಗದ ಕುಮಾರ್‌ ಪುಷ್ಕರ್‌, ಸಿಸಿಎಫ್ ಸಿದ್ರಾಮಪ್ಪ, ಡೀಸಿ ಅರ್ಚನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಮುಂತಾದವರಿದ್ದರು. ‌

ಸರ್ಕಾರದ ನಡೆಗೆ ಶಾಸಕರ ಖಂಡನೆ: ಶಾಸಕ ಎಚ್‌.ಕೆ ಕುಮಾರಸ್ವಾಮಿ ಮಾತನಾಡಿ, ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅರಿವಿದೆ. ಟಾಸ್ಕ್  ಪೊರ್ಸ್‌ ರಚನೆಯಾಗಿದೆ. ಆದರೆ, ಯಾವುದೆ ನೌಕರರನ್ನು ನೇಮಿಸಿಲ್ಲ. ಇದರಿಂದಲು ಸಮಸ್ಯೆ ನಿವಾರಣೆ ಸಾಧ್ಯವಿಲ್ಲ. ಎತ್ತಿನಹೊಳೆ ನೀರು ತೆಗೆದುಕೊಂಡು ಹೋಗಲು ಸಾವಿರಾರು ಕೋಟಿ ವೆಚ್ಚ ಮಾಡುವ ಸರ್ಕಾರ, ಆನೆ ಕಾರಿಡಾರ್‌ಗಾಗಿ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರಿ ರುವ ರೈತರ ಜಮೀನು ಖರೀದಿಸಲು ಐದನೂರು ಕೋ ಟಿ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಕರವೇ-ಸಚಿವರ ನಡುವೆ ಜಟಾಪಟಿ:

ಸಕಲೇಶಪುರ: ಕರವೇ ಮುಖಂಡರ ಪರವಾಗಿ ಮಾತನಾಡಿದ ಯಡೇಹಳ್ಳಿ ಮಂಜುನಾಥ್‌, ಬರಿ ಸಭೆಗಳನ್ನು ನಡೆಸಿದರೆ ಯಾವುದೆ ಪ್ರಯೋಜನವಿಲ್ಲ. ಗ್ರಾಮೀಣ ಜನರು ಬದುಕು ಇನ್ನಿಲ್ಲದಂತೆ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಉಸ್ತುವರಿ ಸಚಿವ ಕೆ.ಗೋಪಾಲಯ್ಯ ಸಮಸ್ಯೆಗಳ ಬಗ್ಗೆ ನನಗೆಲ್ಲ ತಿಳಿದಿದೆ. ಗದ್ದಲ ಮಾಡದೇ ಒಬ್ಬೋಬ್ಬರೇ ಮಾತನಾಡಿ, ಇಲ್ಲಿಗೆ ನಾನು ಬಂದಿರುವುದು ಸಮಸ್ಯೆ ಪರಿಹಾರಕ್ಕೆ ಎಂದರು.

ಮಾತು ಮುಂದುವರೆಸಿದ ಮಂಜುನಾಥ್‌, ಹೆಬ್ಬನಹಳ್ಳಿ ಮನು ಮೃತಪಟ್ಟ ವೇಳೆ ನೀಡಿದ ಎಲ್ಲ ಭರವಸೆಗಳು ಸುಳ್ಳಾಗಿವೆ. ಸರ್ಕಾರಿ ಉದ್ಯೋಗ, 15 ಲಕ್ಷ ಪರಿಹಾರ ನೀಡುವ ಭರವಸೆಗಳು ಈಡೇರಿಸಬೇಕು. ಕಾಡಾನೆ ಸಮಸ್ಯೆ ಪರಿಹಾರಕ್ಕೆ ಬಜೆಟ್‌ನಲ್ಲಿ ಅನುದಾನ ನೀಡದೆ ಚುನಾವಣೆ ಹಿನ್ನೆಲೆ ಸಭೆಗಳನ್ನು ನಡೆಸಿದರೆ ನಾವು ಕೇಳುವುದಿಲ್ಲ ಎಂದರು.

ಇದಕ್ಕೆ ಸಚಿ ವರು ಆಕ್ಷೇಪ ವ್ಯಕ್ತಪ ಡಿಸಿ, ಸಿಎಂ ಬರುತ್ತಿರುವುದು ಗಿಮಿಕ್‌ಗಾಗಿ ಅಲ್ಲ. ಸಂಪೂರ್ಣ ವಿಚಾರ ಅರಿವಿದ್ದರೆ ಮಾತನಾಡಿ, ಬಜೆಟ್‌ನಲ್ಲಿ ಅನುದಾನವಿದ್ದರೆ ಮಾತ್ರ ಕೆಲಸ ಮಾಡಬೇಕಿಲ್ಲ ಎಂದು ಸಿಡು ಕಿ ಸಮಸ್ಯೆ ನಿವಾರಣೆಗೆ ನಿಮ ಗೆಷ್ಟು ಕಾಳಜಿ ಇದೆಯೋ ಅಷ್ಟೇ ಕಾಳಜಿ ಜಿಲ್ಲಾ ಉಸ್ತುವರಿ ಸಚಿವನಾಗಿ ನನಗೂ ಇದೆ. ಸಮಸ್ಯೆ ಇದ್ದರೆ ಹೇಳಿ ಇದರಲ್ಲಿ ರಾಜಕೀಯ ಬೆರಸ ಬೇಡಿ ಎಂದರು.

ಇದಕ್ಕೆ ಕರವೇ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಮನವಿ ನೀಡಲಿದ್ದೇವೆ. ಸಿಎಂ ಜತೆ ಸಭೆ ನಡೆಸಲು ಅವಕಾಶ ನೀಡದಿದ್ದರೆ ಕಾರ್ಯಕ್ರಮದ ದಿನ ನಾವೇನು ಮಾಡ ಬೇಕು ಗೊತ್ತಿದೆ ಎಂದು ಯಡೇಹಳ್ಳಿ ಮಂಜುನಾಥ್‌ ಎಚ್ಚರಿಕೆ ನೀಡಿದರು.

ಇದೇ ವೇಳೆ ಬೆಳೆಗಾರ ಸಂಘಟನೆ ಹಾಗೂ ಕರವೇ ಮುಖಂಡರ ನಡುವೆ ಮಾತಿನ ಚಕಾಮುಖೀ ನಡೆಯಿತು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

BYV-Hasan

Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್‌: ಬಿ.ವೈ.ವಿಜಯೇಂದ್ರ

1-wewqe

Hasan; ಹಾಸನಾಂಬೆಗೆ 4 ದಿನದಲ್ಲಿ 3 ಕೋಟಿ ರೂ. ಆದಾಯ

H. D. Kumaraswamy: ನಿಖಿಲ್‌ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ

H. D. Kumaraswamy: ನಿಖಿಲ್‌ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.