ಕೊನೆಗಾಣದ ಕಾಡಾನೆ, ಮಾನವ ಸಂಘರ್ಷ ಸಮಸ್ಯೆ
Team Udayavani, May 29, 2022, 3:30 PM IST
ಸಕಲೇಶಪುರ: ಆಧುನಿಕ ಜೀವನದಲ್ಲಿ ಬಂಡವಾಳಷಾಹಿಗಳ ದುರಾಸೆಯಿಂದಾಗಿ ಕಾಡಾನೆ ಹಾಗೂ ಮಾನವನ ನಡುವಿನ ಸಂಘರ್ಷ ಹೆಚ್ಚಾಗಿ ಕಾಡಾನೆಗಳಿಗೂ ನೆಮ್ಮ ದಿಯಿಲ್ಲದಂತಾಗಿದೆ. ಇತ್ತ ರೈತರು ಹಾಗೂ ಜನಸಾಮಾನ್ಯರಿಗೂ ಸಹ ನೆಮ್ಮದಿಯಿಲ್ಲ ದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ದಶಕದಲ್ಲಿ ಮಲೆನಾಡಿನ ಪಶ್ಚಿಮಘಟ್ಟದ ತಪ್ಪಲುಗಳಲ್ಲಿ ಅವೈಜ್ಞಾ ನಿಕ ಅಭಿವೃದ್ಧಿ ಕಾರ್ಯಗಳಿಂದ ಕಾಡು ಪ್ರಾಣಿಗಳಿಗೆ ನೆಲೆ ಇಲ್ಲದಂತಾಗಿದ್ದು ಅದರಲ್ಲೂ ದಿನನಿತ್ಯ ನೂರಾರು ಕಿ.ಮಿ ಅಡ್ಡಾಡುವ ಕಾಡಾನೆಗಳ ಮೂಕರೋಧನೆ ಯಾರಿಗೂ ತಿಳಿಯದಾಗಿದೆ.
ಕಳೆದ ಒಂದು ದಶಕದಲ್ಲಿ ತಾಲೂಕಿನಲ್ಲಿ ಜಾರಿಗೊಳಿಸಲಾಗಿರುವ ಸರ್ಕಾರದ ಜಲವಿದ್ಯುತ್ ಯೋಜನೆಗಳು, ಎತ್ತಿನಹೊಳೆ ಯೋಜನೆಯಿಂದಾ ಗಿ ಅಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗಿದೆ. ಇದರಿಂದ ಕಾಡುಪ್ರಾಣಿಗಳ ನೆಲೆ ಕಡಿಮೆಯಾಗಿದ್ದುಅದರಲ್ಲೂ ಕಾಡಾನೆಗಳು ಆ ಹಾರಕ್ಕಾಗಿ ಹಾತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆಗಳಿಗೆ ನೆಲೆ ಇಲ್ಲದಂತಾಗಿದೆ: ಬೆಂಗಳೂರಿನ ಹಲವಾರು ಬಂಡವಾಳಷಾಹಿಗಳು ತಾಲೂಕಿಗೆ ಆಗಮಿಸಿ ಕಡಿದಾದ ಕಾಡುಗಳಲ್ಲಿ ಕೋಟ್ಯಂತರ ವೆಚ್ಚದಲ್ಲಿ ರೆಸಾರ್ಟ್, ಹೋಂಸ್ಟೇಗಳನ್ನು ಸ್ಥಳೀಯ ಪ್ರಭಾವಿಗಳ ನೆರವಿನಿಂದ ನಿರ್ಮಾಣ ಮಾಡುತ್ತಿದ್ದಾರೆ. ಇದು ಸಹ ಕಾಡಾನೆ ಸಮಸ್ಯೆ ಭುಗಿಲೇಳಲು ಪ್ರಮುಖ ಕಾರಣವಾಗಿದೆ. ಇದಲ್ಲದೆ ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಳೆಗೆ ಮಾರುಕಟ್ಟೆಯಲ್ಲಿಉತ್ತಮ ದರ ದೊರಕುತ್ತಿರುವ ಹಿನ್ನೆಲೆ ಅಪಾರ ಪ್ರಮಾ ಣದ ಅರಣ್ಯಪ್ರದೇಶ ಹಾಗೂ ಗೋಮಾಳಗಳನ್ನು ಒತ್ತುವರಿ ಮಾಡಿ, ಕಾಫಿ ತೋಟಗಳಾಗಿ ಮಾಡಿಕೊಂಡಿರುವುದು ಸಹ ಕಾಡಾನೆಗಳಿಗೆ ನೆಲೆ ಇಲ್ಲದಂತಾಗಿದೆ.
ಕಾಡಾನೆ ಸಾವು ತಡೆಗಟ್ಟುವಲ್ಲಿ ವಿಫಲ: ಕಾಡಾನೆಗಳುನೆಲೆಯಿಲ್ಲದೆ ಆಹಾರಕ್ಕಾಗಿ ನಾಡಿನತ್ತ ಬರುವ ಪರಿಸ್ಥಿತಿ ನಿರ್ಮಾಣವಾಗಿರುವುದಲ್ಲದೆ, ಆಹಾರ ಅರಸಿಹೊಲ-ಗದ್ದೆ ತೋಟಗಳಿಗೆ ಕಾಡಾನೆ ದಂಡು ನುಗ್ಗಿ ದಾಂದಲೆ ನಡೆಸಿರೋದು ಸಾಮಾನ್ಯವಾಗಿದೆ. ಇದರಿಂದ ರೈತರು, ಕೂಲಿ ಕಾರ್ಮಿಕರು ಆತಂಕದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಬೇಕಾಗಿದೆ. ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಇದರಿಂದ ಬೇಸತ್ತು ಕೆಲವರು ಕಾಡಾನೆಗಳನ್ನು ಗುಂಡು ಹೊಡೆದು ಸಾಯಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಕಿಡಿಗೇಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಎರಡು ದಿನಗಳ ಹಿಂದಷ್ಟೆ ಪಕ್ಕದ ಬೇಲೂರು ತಾಲೂಕಿನ ಮಲಸಾವರ ಸಮೀಪ ಅಮಾಯಕಕಾಡಾನೆಯೊಂದಕ್ಕೆ ಕಿಡಿಗೇಡಿ ಯೋರ್ವ ಗುಂಡು ಹೊಡೆದು ಹತ್ಯೆ ಮಾಡಿದ್ದ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಹೆಚ್ಚುವ ಸಾಧ್ಯತೆಯಿದೆ. ಈಗಾಗಲೆ ಸುಮಾರು 49 ಜನರು ಕಳೆದ ಒಂದು ದಶಕದಲ್ಲಿ,ಕಾಡಾನೆಗಳ ದಾಳಿಗೆ ಸಕಲೇಶಪುರ ಹಾಗೂ ಆಲೂರುತಾಲೂಕುಗಳಲ್ಲಿ ಬಲಿಯಾಗಿದ್ದು ಅನೇಕ ಮಂದಿ ಶಾಶ್ವತವಾಗಿ ದಿವ್ಯಾಂಗರಾಗಿದ್ದಾರೆ ಎಂದರು.
ಕಾಡಾನೆಗಳ ಸಾವಿನ ಪ್ರಮಾಣ ಹೆಚ್ಚಳ: ಇನ್ನೂ ಕಾಡಾನೆಗಳು ಸಹ ಗುಂಡೇಟಿನಿಂದ, ವಿದ್ಯುತ್ ಬೇಲಿಹಾರಲು ಹೋಗಿ, ರೈಲು ಡಿಕ್ಕಿ ಹೊಡೆದ ಪರಿಣಾಮ,ದಂತಗಳ ಕಳ್ಳರಿಂ ದ ಸೇರಿದಂತೆ ವಿವಿಧಕಾರಣಗಳಿಂದ ಹಲವಾರು ಕಾಡಾನೆಗಳುಮೃತಪಟ್ಟಿವೆ. ಮನುಷ್ಯನ ಆಧುನಿಕ ಅಭಿವೃದ್ಧಿದಾಹಕ್ಕೆ ಅಮಾಯಕ ಕಾ ಡಾನೆಗಳು ನೆಲೆ ಕಳೆದುಕೊಂಡು ಪರದಾಡುತ್ತಿವೆ. ಇತ್ತ ರೈತರು ಕೂಲಿಕಾರ್ಮಿಕರು ಸಹ ಕಾಡಾನೆಗಳ ಆತಂಕದಲ್ಲೇ ಜೀವನ ಸಾಗಿಸಬೇಕಾಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವ ತ ಪರಿಹಾರ ಹುಡುಕಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದ್ದರು ಸಹ ನಮ್ಮನ್ನು ಆಳುತ್ತಿರುವ ಸರ್ಕಾರಗಳಿಗೆ ಇಚ್ಛಾ ಶಕ್ತಿಯಿಲ್ಲದ ಕಾರಣ ಸಮಸ್ಯೆ ಬಗೆಹರಿಯದಂತಾಗಿದೆ.
ರೈತರಿಗೆ ಬೆಳೆ ನಷ್ಟ: ಕಾಡಾನೆ ದಾಳಿಯಿಂದಾಗಿ ರೈತರು ಅಪಾರ ಪ್ರಮಾಣದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಕಾಡಾನೆಗಳು ಗುಂಡೇಟಿಗೆ ಬಲಿಯಾಗುತ್ತಿವೆ. ತಾಲೂಕಿನಲ್ಲಿ ಸದ್ಯ ಇರುವ 70ಕ್ಕೂ ಹೆಚ್ಚು ಕಾಡಾನೆಗಳನ್ನು ರಾಜ್ಯದ ಪ್ರತಿ ಜಿಲ್ಲೆಗಳಿಗೆ ಎರಡ್ಮೂರು ಕಾಡಾನೆ ಗಳಂತೆ ಹಿಡಿದುಸಾಗಿಸುವ ಅವಕಾಶವಿದ್ದು ಈ ಕುರಿತು ಸರ್ಕಾರಗಂಭೀರವಾಗಿ ಯೋಚಿಸಬೇಕಾಗಿದೆ. ರಾಜಕಾರಣಿಗಳು ಹಣ ಮಾಡಲು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುಲು ಮುಂದಾಗುತ್ತಿಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ.
ಒಟ್ಟಾರೆ ಮನುಷ್ಯನ ದುರಾಸೆಯಿಂದಾಗಿತಾಲೂಕಿನಲ್ಲಿ ಮಾನವ ಹಾಗೂ ಕಾಡಾನೆ ಸಂಘರ್ಷ ಮಿತಿಮೀರಿದ್ದು ಮುಂದಿನ ದಿನಗಳಲ್ಲಿ ಕಾಡಾನೆಹಾಗೂ ಮನುಷ್ಯನ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕಾಡಾನೆಹಾಗೂ ಮಾನವ ಸಂಘರ್ಷ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಿಕೊಳ್ಳಬೇಕಾಗಿದೆ.
ಕಾಡಾನೆಗಳನ್ನು ಓಡಿಸಲು ಹತ್ಯೆ ಮಾಡುವುದುಸರಿಯಲ್ಲ.ಮೂಕಪ್ರಾಣಿಗಳಿಗೆ ಜೀವಿಸುವ ಹಕ್ಕಿದೆ.ಸರ್ಕಾರ ಕಾಡಾನೆಗಳಿಂದ ನಷ್ಟವುಂಟಾದರೈತರಿಗೆ 48ಗಂಟೆಯಲ್ಲಿ ಪರಿಹಾರನೀಡಿದರೆ ಯಾವ ರೈತರು ಕಾಡಾನೆಗಳನ್ನು ಸಾಯಿ ಸಲು ಮುಂದಾಗುವುದಿಲ್ಲ. – ಹುರುಡಿ ವಿಕ್ರಂ, ಪರಿಸರ ಪ್ರೇಮಿ
ಕಾಡಾನೆಗಳ ನೆಲೆಗಳು ನಾಶವಾಗಿದೆ. ಆದರಿಂದಕಾಡಾನೆ ಗಳು ನಾಡಿನತ್ತ ಬರುತ್ತಿವೆ.ಸರ್ಕಾರಗಳು ಕಾಡಾನೆಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕದಕಾರಣ ಮೂಕ ಪ್ರಾಣಿಗಳು ವಿನಃಕಾರಣಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ರೈತರು ಸಹ ಕಾಡಾನೆಗಳಿಂದತೊಂದರೆ ಅನುಭವಿಸಬೇಕಾಗಿದೆ. ಮಲೆನಾಡಿನಲ್ಲಿ ಅವೈಜ್ಞಾನಿಕ ಯೋಜನೆ ಜಾರಿಗೆ ತರಬಾರದು. -ಹುರುಡಿ ಪ್ರಶಾಂತ್ ಕುಮಾರ್, ಕಾಫಿ ಬೆಳೆಗಾರರು
– ಸುಧೀರ್ ಎಸ್.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.