ಕಾಡಾನೆ ಕಾಟ: ಜನತೆಗೆ ಪ್ರಾಣ ಸಂಕಟ ‌


Team Udayavani, Jan 16, 2023, 4:18 PM IST

ಕಾಡಾನೆ ಕಾಟ: ಜನತೆಗೆ ಪ್ರಾಣ ಸಂಕಟ ‌

ಸಕಲೇಶಪುರ: ಹಗಲು ವೇಳೆ ಯಾರಿಗೂ ಕಾಣಿಸಿ ಕೊಳ್ಳದ ರಾತ್ರಿ ವೇಳೆ ಮಾತ್ರ ಮನೆಗಳ ಮೇಲೆ ದಾಳಿ ಮಾಡುವ ವಿಶಿಷ್ಟ ಕಾಡಾನೆಯನ್ನು (ಮಕ್ನಾ) ಕೂಡಲೆ ಸೆರೆ ಹಿಡಿಯಬೇಕೆಂದು ಬಾಳ್ಳುಪೇಟೆ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ತಾಲೂಕಿನ ಹಲವು ಭಾಗಗಳಲ್ಲಿ ಉಪಟಳ ನೀಡುತ್ತಿದ್ದ ಮಕ್ನಾ ಕಾಡಾನೆ ಯನ್ನು ಅಂತೂ ಇಂತೂ ಅರಣ್ಯ ಇಲಾಖೆ ಯವರು ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲಗ ಳಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕಳೆದ ವರ್ಷದ ಜೂನ್‌ 29 ಗ್ರಾಮದ ಕಾಫಿ ತೋಟ ಒಂದ ರಲ್ಲಿ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಸೆರೆ ಹಿಡಿಯುವ ವೇಳೆ ಮೂರ್ನಾಲ್ಕು ಸಾಕಾನೆಗಳ ಜೊತೆ ಈ ಮಕ್ನಾ ಕಾಡಾನೆ ವೀರಾವೇಶದಿಂದ ಕಾಳಗಕ್ಕೆ ಮುಂದಾಗಿತ್ತು. ಆದರೂ, ಬಲಿಷ್ಟವಾಗಿದ್ದ ಸಾಕಾನೆಗಳು ಈ ಕಾಡಾ ನೆಯ ಸೊಕ್ಕು ಅಡಗಿಸುವಲ್ಲಿ ಯಶಸ್ವಿಯಾಗಿದ್ದರಿಂದ ಅರಣ್ಯ ಇಲಾಖೆಯವರು ಈ ಕಾಡಾನೆಯನ್ನು ದೂರದ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ರೇಡಿಯೋ ಕಾಲರ್‌ ಅಳವಿಡಿಸಿ ಬಿಟ್ಟಿದ್ದರು. ಮೂರು ನಾಲ್ಕು ತಿಂಗಳ ಹಿಂದೆ ಬಿಟ್ಟು ಬಂದಿದ್ದ ಅರಣ್ಯ ಪ್ರದೇಶವನ್ನು ಒಗ್ಗದ ಈ ಆನೆ ಪುನ: ಮಲೆನಾಡು ಪ್ರದೇಶ ತಾನು ಈ ಹಿಂದೆ ಇದ್ದಂತಹ ಸಕಲೇಶಪುರ ಭಾಗಕ್ಕೆ ಹಿಂತಿರುಗಿದೆ. ಈ ಆನೆ ಸೆರೆ ಹಿಡಿಯುವ ವೇಳೆ ರೇಡಿಯೋ ಕಾಲರ್‌ ಅಳವಡಿಸಿದ್ದರಿಂದ ಈ ಕಾಡಾನೆ ಯ ಚಲನವಲನದ ಬಗ್ಗೆ ಅರಣ್ಯ ಇಲಾಖೆಗೆ ಸ್ಪಷ್ಟ ಮಾಹಿತಿ ಸಿಗಲು ಸಹಕಾರಿಯಾಗಿದೆ.

ಹಿಂತಿರುಗಿ ಬಂದ ಮಕ್ನಾ ಆನೆ ಪುನ: ಕೆಸಗುಲಿ ಗ್ರಾಮದಲ್ಲಿ ಈ ಹಿಂದೆ ದಾಂದಲೆ ಮಾಡಿದ್ದ ಮನೆಯ ಸಮೀಪವೇ ಬಂದು ಪುನ: ದಾಂದಲೆ ನಡೆಸಿರುವುದಲ್ಲದೆ, ಇತ್ತೀಚಿನ ದಿನಗಳಲ್ಲಿ ಈ ಮಕ್ನಾ ಆನೆಯು ರಾತ್ರಿ ವೇಳೆ ಮನೆಗಳ ಕಿಟಕಿ ಗಾಜುಗಳನ್ನು ಒಡೆದು ಹಾಕುವುದು, ಮನೆಯ ಮುಂಭಾಗದ ಶೀಟ್‌ಗಳನ್ನು ಮುರಿದು ಹಾಕುವುದು ಹೀಗೆ ಹತ್ತು ಹಲವು ರೀತಿ ಗಳಲ್ಲಿ ತನ್ನ ಪುಂಡಾಟವನ್ನ ನಡೆಸುತ್ತಲೇ ಬರುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಬಾಳ್ಳುಪೇಟೆ ಸಮೀ ಪದ ಮೆಣಸಮಕ್ಕಿ ಗ್ರಾಮದ ಪರಮೇಶ್‌ ಎಂಬುವರ ಮನೆಯ ಕಿಟಕಿ ಗಾಜುಗಳನ್ನು ಹಾಗೂ ಶೀಟ್‌ ಗಳನ್ನು ಮುರಿದು ಹಾಕಿದೆ. ಕಿಟಕಿಯ ಗಾಜುಗಳಲ್ಲಿ ಆನೆಯ ಪ್ರತಿಬಿಂಬ ಕಾಣು ವುದರಿಂದ ಇದನ್ನು ಇಷ್ಟಪಡದ ಮಕ್ನಾ ಕಿಟಕಿ ಗಾಜುಗಳನ್ನು ಒಡೆದು ಹಾಕುತ್ತದೆ. ಆದ್ದರಿಂದ ಪ್ರತಿಬಿಂಬ ತೋರುವ ಗಾಜುಗಳನ್ನು ಮುಚ್ಚುವುದು ಒಳ್ಳೆಯದು ಎಂದು ಕೆಲವು ಅರಣ್ಯ ಇಲಾಖೆ ಸಿಬ್ಬಂದಿ ಅಭಿಪ್ರಾಯ ಪಡುತ್ತಾರೆ.

ಮಕ್ನಾ ಗಂಡು ಕಾಡಾನೆ: ಮಕ್ನಾ ಕಾಡಾನೆ ಗಂಡು ಕಾಡಾನೆಯಾಗಿದೆ. ಆದರೆ, ಗಂಡು ಕಾಡಾನೆಗೆ ಕೋರೆಗಳು ಇರುತ್ತವೆ. ಆದರೆ, ಮಕ್ನಾ ಕಾಡಾನೆಗೆ ಕೋರೆಗಳಿರುವುದಿಲ್ಲ. ಹೆಣ್ಣುಕಾಡಾನೆಗಳ ಗುಂಪಿನಲ್ಲಿ ಬೃಹತ್‌ ಗಂಡು ಕಾಡಾನೆ ಗಳಿಲ್ಲದ ವೇಳೆ ಮಾತ್ರ ಹೆಣ್ಣುಕಾಡಾನೆ ಗಳ ಗುಂಪಿನಲ್ಲಿ ಕಾಣಿಸಿಕೊಳ್ಳುವ ಮಕ್ನಾ ಆನೆ, ಗಂಡು ಕಾಡಾನೆಗಳು ಗುಂಪಿನಲ್ಲಿ ಇರುವ ವೇಳೆ ಇದು ಒಂಟಿ ಯಾಗಿ ಸಂಚರಿಸುತ್ತದೆ ಎಂಬುದು ಅರಣ್ಯಾಧಿಕಾರಿಗಳ ಅಭಿಪ್ರಾಯವಾಗಿದೆ. ಸಂತನೋತ್ಪತ್ತಿಗಾಗಿ ಹೆಣ್ಣು ಕಾಡಾನೆಗಳು ಮಕ್ನಾ ಕಾಡಾನೆ ಸ್ನೇಹವನ್ನು ಹೆಚ್ಚು ಇಷ್ಟಪಡುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಹೆಚ್ಚಿನ ಸಂಗಾತಿಗಳು ಸಿಗುವುದರಿಂದ ಮಕ್ನಾ ಕಾಡಾನೆ ಮಲೆಮಹ ದೇಶ್ವರ ಬೆಟ್ಟ ದಿಂದ ಹಿಂತಿರುಗಿದೆ ಎಂದು ಕೆಲವು ಅರಣ್ಯ ಇಲಾಖೆ ಸಿಬ್ಬಂದಿ ಅಭಿಪ್ರಾಯ ಪಡುತ್ತಾರೆ. ಒಟ್ಟಾರೆಯಾಗಿ ಕಳೆದ ಕೆಲವು ದಿನಗಳಿಂದ ಬಾಳ್ಳು ಪೇಟೆ ಸಮೀಪವೇ ವಾಸ್ತವ್ಯ ಹೂಡಿರುವ ಈ ಆನೆ ಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮತ್ತೆ ಮಲೆ ನಾಡು ಭಾಗಕ್ಕೆ ಬಾರದಂತೆ ತಡೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆಲವೊಂದು ಕಾಡಾನೆಗಳು ಕೆಲವು ಪ್ರದೇಶಗಳೊಂದಿಗೆ ಬಿಡಿಸಲಾಗದ ಸಂಬಂದವನ್ನು ಹೊಂದಿರುತ್ತದೆ. ಇದರಿಂದ ಮಕ್ನಾ ಕಾಡಾನೆ ದೂರದ ಗೋಪಾಲಸ್ವಾಮಿ ಬೆಟ್ಟದಿಂದ ಹಿಂತಿರುಗಿದೆ. ಈ ಕಾಡಾನೆ ಹಿಡಿಯಲು ಮತ್ತೂಮ್ಮೆ ಉನ್ನತ ಅರಣ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. – ಸುರೇಶ್‌ ಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿ

ಮಕ್ನಾ ಕಾಡಾನೆ ರಾತ್ರಿ ಹೊತ್ತಿನಲ್ಲಿ ಬಂದು ಮನೆಗಳ ಮೇಲೆ ದಾಳಿ ನಡೆಸುವುದರಿಂದ ಜನರಲ್ಲಿ ಭೀತಿ ಹುಟ್ಟಲು ಕಾರಣವಾಗಿದೆ. ಈ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. – ಪರಮೇಶ್‌, ಮೆಣಸುಮಕ್ಕಿ ಗ್ರಾಮಸ್ಥರು

– ಎಸ್‌.ಎಲ್‌.ಸುಧೀರ್‌

ಟಾಪ್ ನ್ಯೂಸ್

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.