ಕಾಡಾನೆ ಹಾವಳಿಗೆ ಶಾಶ್ವತ ಕ್ರಮ ಅಗತ್ಯ 


Team Udayavani, Feb 28, 2022, 2:36 PM IST

ಕಾಡಾನೆ ಹಾವಳಿಗೆ ಶಾಶ್ವತ ಕ್ರಮ ಅಗತ್ಯ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.4 ರಂದು ವಿಧಾನ ಸಭೆಯಲ್ಲಿ ಮಂಡಿಸಲಿರುವ 2022-23ನೇ ಸಾಲಿನ ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಜನರು ಬಹಳಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾಸನ ಜಿಲ್ಲೆಯಲ್ಲಿ ಬಯಲು ಸೀಮೆಯ ಜನರದ್ದು ನೀರಾವರಿ ಸೌಲಭ್ಯದ ಬೇಡಿಕೆಯಾದರೆ, ಮಲೆನಾಡಿನ ಜನರದ್ದು ಕಾಡಾನೆಗಳ ಹಾವಳಿ ಮತ್ತು ಅತಿವೃಷ್ಟಿ ಪರಿಹಾರದ್ದು ಪ್ರಮುಖ ಬೇಡಿಕೆಯಾಗಿದೆ.

ಹಾಸನ: ಮಲೆನಾಡಿನ ಜನರಿಗೆ ಕಳೆದೆರಡು ವರ್ಷಗಳಿಂದ ಅತಿವೃಷ್ಠಿಯಿಂದಾದ ಹಾನಿಗಿಂತ ಕಾಡಾನೆಗಳ ಹಾವಳಿಯಿಂದಾಗುತ್ತಿರುವ ಹಾನಿಯೇ ಹೆಚ್ಚು. ಸಕಲೇಶಪುರ, ಆಲೂರು ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದರೆ, ಬೇಲೂರು ಮತ್ತ ಅರಕಲಗೂಡು ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿದೆ ಈ ಬಾರಿಯ ಬಜೆಟ್‌ ನಲ್ಲಾದರೂ ಸರ್ಕಾರ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಯೋಜನೆ ಅಥವಾ ವಿಶೇಷ ನೆರವು ಘೋಷಣೆ ಮಾಡೀತೆ ಎಂಬ ನಿರೀಕ್ಷೆ ಗರಿಗೆದರಿದೆ.

ಕಾಡಾನೆಗಳ ಹಾವಳಿಯಿಂದ ಬೇಸತ್ತು ಹೋಗಿರುವ ಮಲೆನಾಡಿನ ಜನರು ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂಬ ದಶಕಗಳ ಬೇಡಿಕೆಗೆಯಾವ ಸರ್ಕಾರಗಳೂ ಸ್ಪಂದಿಸಿಲ್ಲ. ಅಲ್ಪ – ಸ್ವಲ್ಪ ನೆರವು ಒದಗಿಸಿ ಮಲೆನಾಡಿನ ಜನರ ಕಣ್ಣೊರೆಸುವ ಕೆಲಸವನ್ನು ಮಾಡಿಕೊಂಡೇ ಸರ್ಕಾರ ಬರುತ್ತಿದೆ. ಈ ಬಾರಿ ಬಜೆಟ್‌ನಲ್ಲಿ ಸ್ಪಂದನೆ ಸಿಗಲಿದೆ ಎಂದು ಮಲೆನಾಡ ಜನರು ಎದುರು ನೋಡುತ್ತಿದ್ದಾರೆ.

3 ದಶಕಗಳಿಂದೀಚೆಗೆ ಕಾಡಾನೆಗಳು ಜೀವ ಹಾನಿ, ಬೆಳೆ ಹಾನಿಯನ್ನುಮಾಡುತ್ತಿವೆ. ಕೊಡಗು ಜಿಲ್ಲೆ ಹಾಗೂಹೇಮಾವತಿ ಹಿನ್ನೀರಿನ ಭಾಗದಿಂದ ಆಲೂರುಮತ್ತು ಸಕಲೇಶಪುರ ತಾಲೂಕಿಗೆ ಕಾಡಾನೆಗಳುಬರುತ್ತಿದ್ದು, 40 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಮಲೆನಾಡು ಭಾಗದಲ್ಲಿ ಆಗಿಂದಾಗೆ ಕಾಣಿಸಿಕೊಳ್ಳುತ್ತಿದೆ.

ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರವೇ 1991ರಿಂದ ಈವರೆಗೆ ಕಾಡಾನೆಗಳ ದಾಳಿಗೆ72 ಜನರು ಬಲಿಯಾಗಿದ್ದಾರೆ. ಈಜೀವ ಹಾನಿಗೆ ಸುಮಾರು 16 ಕೋಟಿರೂ. ಪರಿಹಾರ ನೀಡಲಾಗಿದೆ.ಹಾಗೆಯೇ ಹಾನಿಯು ವರ್ಷದಿಂದವರ್ಷಕ್ಕೆ ಏರುತ್ತಲೇ ಬಂದಿದೆ. ಜತೆಗೆ ಜೀವ ಹಾನಿಯ ಪರಿಹಾರವನ್ನುಹೆಚ್ಚಳ ಮಾಡಿಕೊಂಡು ಬರಲಾಗುತ್ತಿದೆ.ಈಗ ಕಾಡಾನೆಗಳ ದಾಳಿಗೆ ತುತ್ತಾಗಿ ಜೀವಕಳೆದುಕೊಂಡವರ ಕುಟುಂಬಕ್ಕೆ 7 ಲಕ್ಷ ರೂ.ಪರಿಹಾರನೀಡಲಾಗುತ್ತಿದೆ. ವೈಜ್ಞಾನಿಕ ಪರಿಹಾರ ಮಾತ್ರ ಸಿಕ್ಕಿಲ್ಲ. ಜೀವ ಹಾನಿಗೆ ಪರಿಹಾರದ ಮೊತ್ತ 10 ಲಕ್ಷ ರೂ.ಗೆ ಹೆಚ್ಚಳವಾಗಬೇಕು. ಹಾಗೆಯೇ ಬೆಳೆ ಹಾನಿಗೆ

ವಿಶೇಷವಾಗಿ ಕಾಫಿ, ಏಲಕ್ಕಿ , ಬಾಳೆ, ಭತ್ತದ ಬೆಳೆ ಹಾನಿಗೆ ನ್ಯಾಯಯುತ ಪರಿಹಾರ ನೀಡಬೇಕು. ಏಕೆಂದರೆ ಒಂದು ಕಾಫಿ ಗಿಡ ನೆಟ್ಟು ಫ‌ಸಲು ಕೊಡಬೇಕಾದರೆ 5 ವರ್ಷಬೇಕು. ಕಾಡಾನೆಗಳ ದಾಳಿಗೆ ಕಾಫಿ ತೋಟ ನಾಶವಾದಾಗ ಅರಣ್ಯ ಇಲಾಖೆ ನೀಡುವ ಅತ್ಯಲ್ಪ ಪರಿಹಾರದಿಂದ ಕಾಫಿ ಗಿಡಗಳನ್ನು ಬೆಳೆಸಲಾಗುವುದಿಲ್ಲ ಎಂಬುದು ಬೆಳೆಗಾರರ ಅಳಲು. ಬಜೆಟ್‌ನಲ್ಲಿ ಪರಿಹಾರದ ಮೊತ್ತದ ಹೆಚ್ಚಳದ ಘೋಷಣೆಯಾಗಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಬಹುದೆಂಬನಿರೀಕ್ಷೆ ಬೆಳೆಗಾರರದ್ದು.

ಪರಿಹಾರದ ಮೊತ್ತಕ್ಕಿಂತ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಬೆಳೆಗಾರರ ಬಹುದೊಡ್ಡ ಬೇಡಿಕೆ. ರೈಲ್ವೆಕಂಬಿಗಳ ಬೇಲಿಯನ್ನು ನಿರ್ಮಿಸುವ ಮೂಲಕ ಕಾಡಾನೆಗಳು ಹಿಡುವಳಿ ಪ್ರದೇಶದತ್ತ ಬಾರದಂತೆ ತಡೆಯುವುದುಒಂದು ಕ್ರಮ. ಕಳೆದ ಎರಡು ವರ್ಷಗಳಿಂದ ರೈಲ್ವೆಕಂಬಿಗಳ ಬೇಲಿ ನಿರ್ಮಾಣ ನಡೆಯುತ್ತಾ ಬಂದಿದೆ. ಆದರೆ ಹಾಸನ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಬೇಲಿ ನಿರ್ಮಾಣವಾಗಿಲ್ಲ. ಅಂದರೆ ಶೇ. 11 ಮಾತ್ರ ಸಾಧನೆಯಾಗಿದೆ.

ಕಾಡಾನೆಗಳ ಹಾವಳಿ ತಡೆಯ ಮತ್ತೂಂದು ಶಾಶ್ವತಕ್ರಮ ಆನೆ ಕಾರಿಡಾರ್‌ ನಿರ್ಮಾಣ. ಸಕಲೇಶಪುರತಾಲೂಕಿನ ಹೆತ್ತೂರು ಹೋಬಳಿಯಲ್ಲಿ ಕಾಡಾನೆಗಳಹಾವಳಿ ತಡೆಯಲಾರದೆ ತಮ್ಮ ಹಿಡುವಳಿಭೂಮಿಯನ್ನೂ ಅರಣ್ಯ ಇಲಾಖೆಗೆ ಬಿಟ್ಟುಕೊಡಲುರೈತರು ಮುಂದೆ ಬಂದಿದ್ದಾರೆ. ನ್ಯಾಯಯುತಪರಿಹಾರ ನೀಡಿದರೆ ಅರಣ್ಯ ಇಲಾಖೆ ತಮ್ಮ ಭೂಮಿನೀಡಲು ಸಿದ್ಧರಿರುವ ರೈತರ ಬೇಡಿಕೆಯ ಬಗ್ಗೆ ಸರ್ಕಾರಸ್ಪಂದಿಸುತ್ತಿಲ್ಲ. ಈ ಬೇಡಿಕೆಗೆ ಸರ್ಕಾರ ಸ್ಪಂದಿಸಿದರೆಸಾವಿರಾರು ಎಕರೆ ಆನೆ ಕಾರಿಡಾರ್‌ ನಿರ್ಮಾಣವಾದರೆಕಾಡಾನೆಗಳು ಆಹಾರ , ನೀರು ಅರಸಿ ಹಿಡುವಳಿ ಪ್ರದೇಶದತ್ತ ಬರುವುದಿಲ್ಲ ಎಂಬುದು ರೈತರ ಸಲಹೆ .

ರಾಜ್ಯ ಸರ್ಕಾರದ ಪಾತ್ರ ದೊಡ್ಡದು :

ಕಾಡಾನೆಗಳ ಹಾವಳಿ ತಡೆಗೆ ಕೇಂದ್ರ ಸರ್ಕಾರದ ಕ್ಯಾಂಪ್ಕೊ ಯೋಜನೆಯಡಿ ಅನುದಾನ ಪಡೆಯುವ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ಸೆಳೆದಿದ್ದೇನೆ. ಆದರೆ ರಾಜ್ಯ ಸರ್ಕಾರವು ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಒತ್ತಡ ತರಬೇಕು. ಈಅನುದಾನ ಪಡೆಯುವುದಕ್ಕೆ ಸುದೀರ್ಘ‌ ಪ್ರಕ್ರಿಯೆನಡೆಯಬೇಕು. ಹಾಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿರೈಲ್ವೆ ಕಂಬಿಗಳ ಬೇಲಿ ನಿರ್ಮಾಣಕ್ಕೆ ಹೆಚ್ಚು ಅನುದಾನಘೋಷಣೆ ಮಾಡಬೇಕು. 2-3 ವರ್ಷದಲ್ಲಿ ಬೇಲಿನಿರ್ಮಾಣ ಪೂರ್ಣಗೊಳಿಸಿದರೆ ಕಾಡಾನೆಗಳ ಹಾವಳಿ ಯನ್ನು ತಕ್ಕ ಮಟ್ಟಿಗೆ ತಡೆಯಬಹುದಾಗಿದೆ ಎಂದು ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಹೇಳುತ್ತಾರೆ.

ಮುಖ್ಯಮಂತ್ರಿ ಗಮನ ಸೆಳೆದಿರುವೆ :

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ತಡೆಯ ಶಾಶ್ವತ ಕ್ರಮವಾಗಿ ಆನೆ ಕಾರಿಡಾರ್‌ ನಿರ್ಮಾಣ, ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ ,ಸೋಲಾರ್‌ ತೂಗು ಬೇಲಿ ನಿರ್ಮಾಣ ಆಗ ಬೇಕು . ಈ ನಿಟ್ಟಿನಲ್ಲಿ ಸರ್ಕಾರ ಸ್ಪಂದಿಸ ಬೇಕು ಎಂದು ಮುಖ್ಯಮಂತ್ರಿಯವರ ಗಮನವನ್ನು ನಿರಂತರವಾಗಿ ಸೆಳೆಯುತ್ತಾ ಬಂದಿದ್ದೆನೆ. ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಲಿಖೀತ ಮನವಿಯನ್ನೂ ಸಲ್ಲಿಸಿ ಕನಿಷ್ಠ 300 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡ ಬೇಕುಎಂದು ಮನವಿ ಮಾಡಿದ್ದೇನೆ. ಎಂದು ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಹೇಳಿದರು.

 

-ಎನ್‌ . ನಂಜುಂಡೇಗೌಡ

ಟಾಪ್ ನ್ಯೂಸ್

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.