ಸೂರಿಗಾಗಿ ಸುಡಗಾಡ ಸಿದ್ಧರ ಪರದಾಟ
ಮೂರೂವರೆ ದಶಕದಿಂದ ದಯನೀಯ ಬದುಕು•ಮಳೆ ಬಂತೆಂದರೆ ಶಾಲೆ ಕಟ್ಟಡದಲ್ಲೇ ಆಶ್ರಯ
Team Udayavani, Aug 8, 2019, 12:07 PM IST
ಹಾವೇರಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಾಗೇಂದ್ರನಮಟ್ಟಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಸುಡಗಾಡ ಸಿದ್ಧರು.
ಎಚ್.ಕೆ. ನಟರಾಜ
ಹಾವೇರಿ: ಇವರು ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ಬೆಂದು ಬದುಕುತ್ತಾರೆ. ಮಳೆಗಾಲ ಬಂತೆಂದರೆ ಸಾಕು. ಇವರ ಬದುಕು ಅಕ್ಷರಶಃ ಮೂರಾಬಟ್ಟೆಯಾಗುತ್ತದೆ. ತಲೆ ಮೇಲೆ ಗಟ್ಟಿಯಾದ ಸೂರು ಇಲ್ಲದ ಇವರ ಬದುಕು, ಪ್ರತಿದಿನ ಸಂಜೆಯಾಗುತ್ತಲೇ ಕತ್ತಲಾಗುತ್ತದೆ!
ಇದು ಯಾವುದೋ ಕುಗ್ರಾಮದಲ್ಲಿರುವ ಜನರ ಪಡಿಪಾಟಲು ಅಲ್ಲ; ಹಾವೇರಿ ನಗರದಿಂದ ನಾಲ್ಕೈದು ಕಿಮೀ ದೂರದ ಶಾಂತಿನಗರದಲ್ಲಿರುವ ಸುಡಗಾಡ ಸಿದ್ಧ ಸಮುದಾಯದವರ ದಯನೀಯ ಸ್ಥಿತಿ. ಕಳೆದ 30-35 ವರ್ಷಗಳಿಂದ ಇಲ್ಲಿ ಚಿಕ್ಕ ಚಿಕ್ಕ ಗುಡಿಸಲು ಕಟ್ಟಿಕೊಂಡು ವಾಸವಾಗಿರುವ ಸುಡಗಾಡ ಸಿದ್ಧ ಸಮುದಾಯದ 25-30 ಕುಟುಂಬದವರ ಕೂಗು ಅಕ್ಷರಶಃ ಅರಣ್ಯರೋದನವಾಗಿದೆ. ಜೋರಾಗಿ ಮಳೆ ಬಂದಾಗಲೊಮ್ಮೆ ಪರಿಹಾರ ಕೇಂದ್ರದ ಆಶ್ರಯ ಪಡೆಯುವ ಈ ಸಮುದಾಯದವರು ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಮತ್ತೆ ಪರಿಹಾರ ಕೇಂದ್ರದ ಆಶ್ರಯದಲ್ಲಿದ್ದಾರೆ.
ಕೂಲಿ ಮಾಡಿ ಜೀವನ ನಡೆಸುತ್ತ ನಾಲ್ಕು ದಶಕಗಳ ಹಿಂದೆಯೇ ಜಿಲ್ಲೆಗೆ ಬಂದ ಸುಡಗಾಡ ಸಿದ್ಧಿ ಜನಾಂಗದ ಕುಟುಂಬಗಳು ಮೊದಲಿಗೆ ಅಶ್ವಿನಿನಗರ, ದಾನೇಶ್ವರಿ ನಗರದ ಹಾಗೂ ಮುರುಘರಾಜೇಂದ್ರ ಮಠದ ಆವರಣದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. 1999ರಲ್ಲಿ ಅಂದಿನ ಶಾಸಕರಾಗಿದ್ದ ಬಸವರಾಜ ಶಿವಣ್ಣನವರ ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ಈ ವರೆಗೆ ನಗರಸಭೆ ವತಿಯಿಂದ ಗಣಜೂರ ರಸ್ತೆಯ ಪಕ್ಕದಲ್ಲಿ ಖಾಲಿ ಜಾಗ ನೀಡಿದ್ದರು. ಆದರೆ, ಸ್ವಂತ ಮನೆ ನಿರ್ಮಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಇವರು ಶಾಸಕರ ಭರವಸೆಯನ್ನೇ ನಂಬಿಕೊಂಡು ಇಂದಿಗೂ ಗುಡಿಸಿಲಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಪಡಿತರಚೀಟಿ, ಮತದಾನ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಹೊಂದಿರುವ ಇವರು ಏನೂ ಇಲ್ಲದಂತೆ ಬದುಕು ನಡೆಸುವ ದುಸ್ಥಿತಿಯಲ್ಲಿದ್ದಾರೆ.
ಹಾವಿನಹಾವಳಿ: ಸುಡಗಾಡ ಸಿದ್ಧ ಜನಾಂಗದವರು ವಾಸಿಸುತ್ತಿರುವ ಈ ಸ್ಥಳದಲ್ಲಿ ಹಾವಿನ ಹುತ್ತಗಳೇ ಹೆಚ್ಚಾಗಿದ್ದು, ನಗರಸಭೆಯವರು ಆಶ್ರಯ ಯೋಜನೆ ಮನೆ ನಿರ್ಮಿಸುವ ಉದ್ದೇಶದಿಂದ ಅಲ್ಲಿದ್ದ ಹುತ್ತಗಳನ್ನು ತೆರವುಗೊಳಿದ್ದಾರೆ. ಆದರೆ, ಹಾವುಗಳು ಮಾತ್ರ ಅಲ್ಲಿಯೇ ವಾಸವಿದ್ದು ಈ ಹಾವುಗಳ ಭಯದಲ್ಲಿಯೇ ಇವರು ದಿನ ಕಳೆಯುತ್ತಿದ್ದಾರೆ. ಇವರ ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಹೀಗಾಗಿ ಈ ಸಮುದಾಯದ ಬದುಕು ಸಂಜೆಯಾಗುತ್ತಲೇ ಕತ್ತಲಾಗುತ್ತದೆ.
ಬೇಸಿಗೆಯಲ್ಲಿ ಹೇಗೋ ದಿನ ಕಳೆಯುವ ಇವರಿಗೆ ಮಳೆಗಾಲ ಬಂತೆಂದರೆ ದೊಡ್ಡ ಸಮಸ್ಯೆ ಶುರುವಾಗುತ್ತದೆ. ದೊಡ್ಡ ಮಳೆ, ಗಾಳಿ ಬಂತೆಂದರೆ ಇವರ ಗುಡಿಸಲು ಹಾರಿ ಹೋಗಿ, ಇವರು ಹತ್ತಿರದ ಸರ್ಕಾರಿ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕ ಆಶ್ರಯ ಪಡೆಯುತ್ತಾರೆ. ಮತ್ತೆ ಅಲ್ಲಿಯೇ ಹೋಗಿ ಗುಡಿಸಲು ಕಟ್ಟಿಕೊಂಡು ಜೀವನ ಮುಂದುವರಿಸುತ್ತಾರೆ.
ಸುಡಗಾಡ ಸಿದ್ಧರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಶಾಶ್ವತ ಪರಿಹಾರ ವದಗಿಸುವ ನಿಟ್ಟಿನಲ್ಲಿ ಯಾವ ಅಧಿಕಾರಿ, ಜನಪ್ರತಿನಿಧಿಯೂ ಸ್ಪಂದಿಸಿಲ್ಲ. ಮಳೆ, ಗಾಳಿ ಬಂದು ಬದುಕು ಅತಂತ್ರವಾದಾಗಲೊಮ್ಮೆ ಬಂದು ಮನೆಯ ಭರವಸೆ ಕೊಟ್ಟು ಹೋದವರು ಮತ್ತೆ ಬರುವುದು ಇವರ ಬದುಕು ಮೂರಾಬಟ್ಟೆಯಾದಾಗಲೇ.
ಹೊಲಗಳ ಮಧ್ಯೆ ಭಾಗದಲ್ಲಿರುವ ಈ ಸ್ಥಳದಲ್ಲಿ ಮಳೆ ಬಂದರೆ ನೀರು ಗುಡಿಸಲುಗಳಿಗೆ ನುಗ್ಗುತ್ತದೆ. ಮಲಗಲು ಜಾಗವಿಲ್ಲದೇ ರಾತ್ರಿವಿಡಿ ಜಾಗರಣೆ ಮಾಡುವ ದುಸ್ಥಿತಿ ಇವರದ್ದು. ಕೆಲವೊಂದು ಬಾರಿ ಮಳೆಗಾಳಿಗೆ ಗುಡಿಸಲುಗಳು ಹಾರಿ ಹೋಗಿ ಚಿಕ್ಕ ಮಕ್ಕಳು ಮಳೆಯಲ್ಲಿಯೇ ನೆನೆದು ಸಾವನ್ನಪಿದ ಘಟನೆಗಳೂ ಸಂಭವಿಸಿವೆ. ಹಾವು ಕಚ್ಚಿ ಸತ್ತ ಪ್ರಕರಣಗಳೂ ನಡೆದಿವೆ. ಏನೇ ಆದರೂ ಅಧಿಕಾರಿ, ಜನಪ್ರತಿನಿಧಿ ವರ್ಗ ಮಾತ್ರ ಇವರಿಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗದೆ ಇರುವುದು ಖೇದಕರ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ
By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.