178.88 ಕೋಟಿ ಬೆಳೆವಿಮೆ ಮಂಜೂರು: ಉದಾಸಿ
Team Udayavani, Sep 22, 2020, 5:17 PM IST
ಹಾನಗಲ್ಲ: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ 1,13,857 ರೈತರು ನೋಂದಣಿ ಮಾಡಿಸಿದ್ದು, ಇದರಲ್ಲಿ 75,704 ರೈತರಿಗೆ 178.88 ಕೋಟಿ ರೂ. ಬೆಳೆವಿಮೆ ಮಂಜೂರಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಪ್ರಕಟಣೆ ನೀಡಿರುವ ಅವರು, 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬೆಳೆವಿಮಾ ವ್ಯಾಪ್ತಿಗೆ ಒಳಪಟ್ಟ ರೈತರಿಗೆ ಶೇ.25ರಂತೆ ಮಧ್ಯಂತರ ಪರಿಹಾರವಾಗಿ ನೀಡಿದ 48.74 ಕೋಟಿ ರೂ. ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ.
ಹಾನಗಲ್ಲ ತಾಲೂಕಿನ 16.609 ರೈತರಿಗೆ 15,11 ಕೋಟಿ ಮೊತ್ತ ಈಗಾಗಲೇ ಜಮಾ ಮಾಡಲಾಗಿದೆ.ಇನ್ನುಳಿದ ಶೇ.75 ಪರಿಹಾರ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ, ರಾಜ್ಯ ಸರ್ಕಾರ ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿ ಮಾತ್ರ ಪರಿಗಣಿಸಿ ಬೆಳೆವಿಮಾ ನಷ್ಟ ಪರಿಹಾರ ಲೆಕ್ಕ ಹಾಕಿ ಮಾಡಲಾಗಿದೆ. ಅದರಲ್ಲಿ ಈಗಾಗಲೇ ನೀಡಿರುವ ಶೇ.25 ಮಧ್ಯಂತರ ಮೊತ್ತ ಕಡಿತಗೊಳಿಸಿ ಹಾವೇರಿ ಜಿಲ್ಲೆಗೆ 130.14 ಕೋಟಿ ರೂ. ಹಣ ಮಂಜೂರಾಗಿದೆ. ಶೀಘ್ರ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಾನಗಲ್ಲ ತಾಲೂಕಿಗೆ ಗ್ರಾಪಂವಾರು ನೋಡುವುದಾದರೆ, 36 ಗ್ರಾಪಂಗಳು ಗೋವಿಜೋಳ (ಮಳೆಯಾಶ್ರಿತ) ಬೆಳೆಗೆ ಶೆ.25ಕ್ಕಿಂತ ಹೆಚ್ಚು ಬೆಳೆವಿಮಾ ಪರಿಹಾರ ಮಂಜೂರಾಗಿದೆ. ಕೇವಲ 5 ಗ್ರಾಪಂಗಳು ಶೇ.25ಕ್ಕಿಂತ ಕಡಿಮೆ ಬೆಳೆ ಪರಿಹಾರ ಹೊಂದಿವೆ. ಭತ್ತ (ನೀರಾವರಿ) ಬೆಳೆಗೆ 26 ಪಂಚಾಯತಿಗಳು ಶೇ.25ಕ್ಕಿಂತ ಹೆಚ್ಚು ಬೆಳೆ ಪರಿಹಾರ ಹೊಂದಿದ್ದರೆ, 7 ಗ್ರಾಪಂಗಳು ಶೇ.25ಕ್ಕಿಂತ ಕಡಿಮೆ ಬೆಳೆವಿಮೆ ಪರಿಹಾರ ಮಂಜೂರಾಗಿದೆ.
ಹಾನಗಲ್ಲ ಹೋಬಳಿಯಲ್ಲಿ ಗೋವಿನಜೋಳ (ನೀರಾವರಿ) ಶೇ.71, ಹತ್ತಿ (ಮಳೆಯಾಶ್ರಿತ) ಶೇ.24, ಸೋಯಾಬಿನ್ (ಮಳೆಯಾಶ್ರಿತ) ಶೇ.33, ಅಕ್ಕಿಆಲೂರು ಹೋಬಳಿಯಲ್ಲಿ ಗೋವಿನಜೋಳ (ನೀರಾವರಿ) ಶೇ.54, ಹತ್ತಿ (ಮಳೆಯಾಶ್ರಿತ) ಶೇ.17, ಸೋಯಾಬಿನ್ (ಮಳೆಯಾಶ್ರಿತ) ಶೇ.40, ಹತ್ತಿ (ನೀರಾವರಿ) ಶೇ.24, ಬೊಮ್ಮನಹಳ್ಳಿ ಹೋಬಳಿಯಲ್ಲಿ ಗೋವಿನಜೋಳ (ನೀರಾವರಿ) ಶೇ.73, ಸೋಯಾಬಿನ್ (ಮಳೆಯಾಶ್ರಿತ) ಶೇ.16, ಹತ್ತಿ (ನೀರಾವರಿ) ಶೇ.38, (ಮಳೆಯಾಶ್ರಿತ) ಶೇ.30, ಶೆಂಗಾ (ಮಳೆಯಾಶ್ರಿತ) ಶೇ.4 ಬೆಳೆವಿಮಾ ಪರಿಹಾರ ಮಂಜೂರಾಗಿದೆ.
ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ಸರ್ಕಾರ ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿ ಪರಿಗಣಿಸಿ ಬೆಳೆವಿಮಾ ನಷ್ಟ ಪರಿಹಾರ ಲೆಕ್ಕ ಹಾಕಿ ಶೇ.25ಕ್ಕಿಂತ ಕಡಿಮೆ ಬೆಳೆವಿಮಾ ಪರಿಹಾರ ಮಂಜೂರಾಗಿರುವ ಬೆಳೆಗಳಿಗೆ ಈಗಾಗಲೇ ಮಧ್ಯಂತರ ಪರಿಹಾರವಾಗಿ ನೀಡಿರುವ ಶೇ.25 ಬೆಳೆವಿಮೆ ಪರಿಹಾರ ಗಮನಿಸಿದರೆ ಶೇ.25ಕ್ಕಿಂತ ಕಡಿಮೆ ಬೆಳೆವಿಮಾ ಮಂಜೂರಾಗಿರುವ ರೈತರ ಖಾತೆಗಳಿಗೆ ಹೆಚ್ಚುವರಿ ಬೆಳೆವಿಮಾ ಪರಿಹಾರ ಮೊತ್ತ ಜಮಾ ಮಾಡಿದಂತಾಗಿದೆ.
ಹಾನಗಲ್ಲ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ (2020-21)ರ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ 27,481 ರೈತರು ವಿವಿಧ ಬೆಳೆಗಳಿಗೆ ಬೆಳೆವಿಮಾ ನೋಂದಣಿ ಮಾಡಿದ್ದಾರೆ ಎಂದು ಸಿ.ಎಂ. ಉದಾಸಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.