ಹೆಸ್ಕಾಂ ನಿಂದ 2 ತಿಂಗಳ ಬಿಲ್ ಒಟ್ಟಿಗೆ
Team Udayavani, May 7, 2020, 5:24 PM IST
ಹಾವೇರಿ: ಹೆಸ್ಕಾಂ ಈ ಬಾರಿ ಏಪ್ರಿಲ್ ಮತ್ತು ಮೇ ಎರಡು ತಿಂಗಳಿನ ಬಿಲ್ ಒಟ್ಟಿಗೆ ಸೇರಿಸಿ ಕೊಡುತ್ತಿದ್ದು, ಏಪ್ರಿಲ್ ತಿಂಗಳ ಸರಾಸರಿ ಬಿಲ್‌ನ್ನು ಪಾವತಿಸಿದ್ದಲ್ಲಿ ಮೇ ತಿಂಗಳಿನ ಬಿಲ್ಲಿನಲ್ಲಿ ಆ ಮೊತ್ತವನ್ನು ಕಡಿತಗೊಳಿಸಿ ಬಾಕಿ ಇಲ್ಲವೆಂದು ನಮೂದಿಸಲಾಗುವುದು ಎಂದು ಜಿಲ್ಲಾ ವಿದ್ಯುತ್ ಸರಬರಾಜು ಕಂಪನಿಯ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ ತಿಂಗಳಿನಲ್ಲಿ ಮಾಪಕ ಓದುಗರು ನೇರವಾಗಿ ಗ್ರಾಹಕರ ಮಾಪಕಗಳನ್ನು ಓದಿ ರೀಡಿಂಗ್ ಬಿಲ್ ನೀಡುತ್ತಿದ್ದಾರೆ. ಮೇ ತಿಂಗಳಿನ ಬಿಲ್ ಒಟ್ಟು ಎರಡು ತಿಂಗಳ ಬಳಕೆಯ ಬಿಲ್ ಆಗಿದ್ದು, ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ಲನ್ನು ನೀಡಲಾಗುತ್ತಿದೆ. ಒಂದು ವೇಳೆ ಏಪ್ರಿಲ್‌ನಲ್ಲಿ ಸರಾಸರಿ ಅಂದಾಜಿನಲ್ಲಿ ಯಾರಾದರೂ ಬಿಲ್ ಪಾವತಿಸಿದ್ದಲ್ಲಿ, ಅದನ್ನು ಕಡಿತ ಮಾಡಿ ಬಿಲ್ ತುಂಬಿಸಿಕೊಳ್ಳಲಾಗುವುದು. ಗ್ರಾಹಕರು ಬಿಲ್ ಮೊತ್ತ ಹೆಚ್ಚಾಗಿದ್ದರಿಂದ ಆತಂಕಪಡುವ ಅವಶ್ಯಕತೆ ಇಲ್ಲ. ಬಿಲ್ಲಿನ ಬಗ್ಗೆ ಅನುಮಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ತಮ್ಮ ಸಮೀಪದ ಉಪವಿಭಾಗ ಶಾಖಾ ಕಚೇರಿಗಳ ನಗದು ಕೌಂಟರ್‌ಗೆ ಭೇಟಿ ನೀಡಿ ಬಿಲ್ಲಿನ ಬಗ್ಗೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ಆನ್‌ಲೈನ್ ಪಾವತಿಗೆ ಸಲಹೆ: ಗ್ರಾಹಕರು ಮೊಬೈಲ್ ಸಂಖ್ಯೆಯನ್ನು ನಿಮ್ಮ ಸ್ಥಾವರದ ಸಂಖ್ಯೆಯ ಜೊತೆ ಜೋಡಣೆ ಮಾಡಿಕೊಳ್ಳಲು ನಗರ ಪ್ರದೇಶದ ಗ್ರಾಹಕರು (ಆರ್ ಎಪಿಡಿಆರ್‌ಪಿ) ಅಕೌಂಟ್ ಐ.ಡಿ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರು ಕನೆಕ್ಷನ್ ಐಡಿಗೆ ತಮ್ಮ ಮೊಬೈಲ್ ಸಂಖ್ಯೆ ಇಲ್ಲವೇ ವಾಟ್ಸ್ ಆ್ಯಪ್ ಸಂಖ್ಯೆ ಜೊತೆ ಜೋಡಣೆ, ತಿದ್ದುಪಡಿ, ನವೀಕರಣ ಮಾಡಿಕೊಳ್ಳಲು ತಮ್ಮ ಸಮೀಪದ ಹೆಸ್ಕಾಂ ಉಪ ವಿಭಾಗ, ಶಾಖಾ ಕಚೇರಿಗೆ ಭೇಟಿ ನೀಡಿ ಅಥವಾ 1912 ಸಹಾಯವಾಣಿಗೆ ಕರೆ ಮಾಡಿ ತಮ್ಮ ಪೋನ್ ನಂ., ಇ.ಮೇಲ್ ಐ.ಡಿ ನೋಂದಾಯಿಸಿಕೊಳ್ಳುವುದರಿಂದ ಗ್ರಾಹಕರು ತಮ್ಮ ಬಿಲ್ಲಿನ ಮೊತ್ತವನ್ನು ವಿದ್ಯುತ್ ಅಡೆತಡೆಯ ಮಾಹಿತಿಯನ್ನು ತಮ್ಮ ವಾಟ್ಸ್ ಆ್ಯಪ್ ಸಂಖ್ಯೆಗೆ ಎಸ್‌ಎಂಎಸ್ ಮುಖಾಂತರ ಪಡೆಯಬಹುದು.
ಗ್ರಾಹಕರು ಜಾಲತಾಣ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳ ಸೌಲಭ್ಯಗಳನ್ನು ಪಡೆದುಕೊಂಡು ಬಿಲ್‌ನ ಮೊತ್ತವನ್ನು ಪಾವತಿಸಬಹುದಾಗಿದೆ ಹಾಗೂ ಹೆಸ್ಕಾಂ ನಗದು ಪಾವತಿ ಕೌಂಟರ್‌ಗಳು ಈಗಾಗಲೇ ಇದ್ದ ವ್ಯವಸ್ಥೆಯಂತೆ ತೆರೆದಿದ್ದು, ಗ್ರಾಹಕರು ಆನ್‌ಲೈನ್ ಮೂಲಕ ಭರಣಾ ಮಾಡಲು ಸಾಧ್ಯವಾಗದೆ ಇದ್ದಲ್ಲಿ ನಗದು ಕೌಂಟರ್ ನಲ್ಲಿಯೂ ಪಾವತಿಸಬಹುದು ಎಂದು ಅಭಿಯಂತರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.