ಕ್ಷೇತ್ರ ಅಭಿವೃದ್ಧಿಗೆ 26.50 ಕೋಟಿ ಮಂಜೂರು
Team Udayavani, Sep 15, 2019, 11:39 AM IST
ಹಿರೇಕೆರೂರ: ಹಿರೇಕೆರೂರ ವಿಧಾನ ಸಭಾ ಕ್ಷೇತ್ರದ ವಿವಿಧ ರಸ್ತೆಗಳ ಸುಧಾರಣೆಗಾಗಿ ಸರ್ಕಾರದಿಂದ 26.50 ಕೋಟಿ ರೂ. ಮಂಜೂರಾಗಿದೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ ತಿಳಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20 ಸಾಲಿನ 3054 ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮಂಜೂರಾದ 8.25 ಕೋಟಿ ರೂ.ಅನುದಾನದಲ್ಲಿ ತಾಲೂಕಿನ ಮೇದೂರು ಕಣವಿಶಿದ್ದಗೇರಿ ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ., ಚನ್ನಳ್ಳಿ ದೂದಿಹಳ್ಳಿ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ., ದೊಡ್ಡಗುಬ್ಬಿ ಯಡಗೋಡ ರಸ್ತೆ ಅಭಿವೃದ್ಧಿಗೆ 55 ಲಕ್ಷ ರೂ., ಬುಳ್ಳಾಪುರ ಕಿರಗೇರಿ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ., ಚಿಕ್ಕೇರೂರ ಯಲ್ಲಾಪುರ ರಸ್ತೆಯಿಂದ ಹಾರೋಮುಚಡಿ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ., ಕಡೂರು ಕಣವಿಶಿದ್ದಗೇರಿ ರಸ್ತೆ ಅಭಿವೃದ್ಧಿಗೆ 28 ಲಕ್ಷ ರೂ., ಕೂಲಿ ಕುಡಪಲಿ ಬಡಾಸಂಗಾಪುರ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ., ಹಿರೇಮತ್ತೂರ ಗಂಗಾಪುರ ರಸ್ತೆ ಅಭಿವೃದ್ಧಿಗೆ 66 ಲಕ್ಷ ರೂ., ಹಿರೇಕೆರೂರ- ಹಂಸಭಾವಿ ರಸ್ತೆಯಿಂದ ಆರೀಕಟ್ಟಿ ರಸ್ತೆ ಅಭಿವೃದ್ಧಿಗೆ 46 ಲಕ್ಷ ರೂ., ಹಳೇನಿಡನೇಗಿಲು-ಹೊಸನೀಡನೇಗಿಲು ರಸ್ತೆ ಅಭಿವೃದ್ಧಿಗೆ 26 ಲಕ್ಷ ರೂ., ಹಿರೇಕೆರೂರ-ಹಂಸಭಾವಿ ರಸ್ತೆಯಿಂದ ಬೆಟಕೇರೂರ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ., ಹಿರೇಕೆರೂರ-ಕೋಡ ರಸ್ತೆಯಿಂದ ನೂಲಗೇರಿ ರಸ್ತೆ ಅಭಿವೃದ್ಧಿಗೆ 1.09 ಕೋಟಿ ರೂ.
ತಾಲೂಕಿನ ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿಗೆ ಮಂಜೂರಾದ 16.25 ಕೋಟಿ ರೂ., ಅನುದಾನದಲ್ಲಿ ತಾಲೂಕಿನ ಮಾವಿನತೋಪ, ನೇಶ್ವಿ ಬತ್ತಿಕೊಪ್ಪ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ಅಣಜಿ ಕಮಲಾಪುರ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ., ವರಹ ನೀಡನೇಗಿಲು ತಿಪ್ಪಾಯಿಕೊಪ್ಪ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ., ಹಿರೇಕೆರೂರ ಕೋಡ ವಾಯಾ ಅಬಲೂರು ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ಹಿರೇಕೊಣತಿ ಮಡ್ಲೂರ ರಸ್ತೆ ಅಭಿವೃದ್ಧಿಗೆ 1.25 ಕೋಟಿ ರೂ., ಹೊಸಕಟ್ಟಿ ಹೊನ್ನಾಳಿ ರಸ್ತೆ ಅಭಿವೃದ್ಧಿಗೆ 3.5 ಕೋಟಿ ರೂ., ದೂದಿಹಳ್ಳಿ ರಟ್ಟೀಹಳ್ಳಿ ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ., ಮಂಜೂರಾಗಿದೆ. ಮತ್ತು ಹಿರೇಕೆರೂರ ಪಟ್ಟಣದ ತಿಪ್ಪನಶೆಟ್ಟಿ ಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಡಿಸಲು ನಗರಾಭಿವೃದ್ಧಿ ಇಲಾಖೆಯಿಂದ 2 ಕೋಟಿ ರೂ. ಸೇರಿದಂತೆ ಒಟ್ಟು 26.50 ಕೋಟಿ ರೂ.ಅನುದಾನ ಆರ್ಥಿಕ ಇಲಾಖೆಯಿಂದ ಮಂಜೂರಾತಿ ದೊರಕಿದೆ ಎಂದು ತಿಳಿಸಿದರು.
ಡಿ.ಸಿ.ಪಾಟೀಲ, ಆರ್.ಎನ್.ಗಂಗೋಳ, ಪ್ರಕಾಶಗೌಡ ಗೌಡರ್, ಅಲ್ತಾಫ್‌ಖಾನ್ ಪಠಾಣ್, ಪೀರ್‌ಅಹ್ಮದ್ ಬೇವಿನಹಳ್ಳಿ, ಅಶೋಕ ಜಾಡಬಂಡಿ, ಗುರುಶಾಂತ ಎತ್ತಿನಹಳ್ಳಿ, ಬಸವರಾಜ ಕಟ್ಟಮನಿ, ಬಸವರಾಜ ಭರಮಗೌಡ್ರ, ರಮೇಶ ಹಡಗದ, ಬಸವರಾಜ ಕಾಲ್ವೀಹಳ್ಳಿ, ಅಬ್ದುಲ್ಖಾದರ್ ಲೋಹಾರ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.