ಜನ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ
Team Udayavani, Feb 2, 2020, 2:06 PM IST
ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಕಣವಿ ಸಿದ್ಧಗೇರಿ ಗ್ರಾಮದ ಸಿದ್ಧಾರೂಢ ದೇವಸ್ಥಾನದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮದಲ್ಲಿ ಜನಪದ ಗೀತೆಗಳು ಬೀದಿ ನಾಟಕ ಪ್ರದರ್ಶನ ಮಾಡುವುದರ ಮೂಲಕ ಸರಕಾರದ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕನ್ನಡತಿ ಕಲಾ ತಂಡದ ಲಲಿತಾ ಪಾಟೀಲ ಅವರಿಂದ ನಾಟಕ ಪ್ರದರ್ಶನ, ದುರ್ಗಾದೇವಿ ಸಂಸ್ಕೃತ ಜನಪದ ಕಲಾ ತಂಡದ ರೇಣುಕಾ ಛಲವಾದಿ ತಂಡದವರು ಕೆಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಸಿಗುವಪ್ರಯೋಜನೆಗಳು, ಸಹಾಯಧನ ಹಾಗೂ ಗ್ರಾಮದಲ್ಲಿ ನೆರೆ ಸಂತ್ರಸ್ತರು, ನೇಕಾರರು, ಮೀನುಗಾರರಿಗೆ ಸಹಕಾರ, ಕುಟುಂಬದವರಿಗೆ ಸರಕಾರದಿಂದ ಸಿಗುವ ಸಹಾಯಧನ ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರೈತರಿಗೆಸಿಗುವ ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಯೋಜನೆಗಳ ಕುರಿತು ಜನಪದ ಜಾಗೃತಿ ಗೀತೆಗಳನ್ನು ಹೇಳುವುದರ ಮೂಲಕ ಮಹಿಳಾ ತಂಡದವರು ಅರಿವು ಮೂಡಿಸಿದರು.
ಗ್ರಾಪಂ ಸಿಬ್ಬಂದಿ ಜಗದೀಶ ಮಾತನಾಡಿ, ವಾರ್ತಾ ಇಲಾಖೆಯಿಂದ ಬಂದಿರುವ ಮಹಿಳಾ ತಂಡದವರು ಸರಕಾರದಿಂದ ಸಿಗುವ ಯೋಜನೆಗಳ ಕುರಿತು ಜನಪದ ಗೀತೆ ಹಾಗೂ ಬೀದಿ ನಾಟಕ ಪ್ರದರ್ಶನ ಮಾಡಿ ತೊರಿಸಿದ್ದಾರೆ ಇದರ ಉಪಯೋಗ ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಬಳಗಾವಿ, ಸದಸ್ಯ ರಾಮನಗೌಡ ಪಾಟೀಲ, ಸಿದ್ದಪ್ಪ ಕತ್ಛರವಿ, ಸರಸ್ವತಿ ಕರೆಣ್ಣನವರ, ಮೆಹಬೂಬ್‌ಸಾಬ್ ಜೋಕನಾಳ, ಹನುಮಂತ ನಾಯ್ಕ ಲಮಾಣಿ, ಸಿಬ್ಬಂದಿಗಳಾದ ಕರಡಣ್ಣನವರ, ಬೆಳ್ಳಿ ಎಂ.ಎಸ್, ಮಂಜು ಮಾಳಮ್ಮನವರ, ಮಂಜು ಕವಲೆತ್ತನವರ, ಗ್ರಾಮಸ್ಥರಾದ ಕಣಜೇರ, ಸಿದ್ದಪ್ಪ ಗುಬ್ಬಿ, ರಮೇಶ ಗುಬ್ಬಿ, ಹಾಲನಗೌಡ, ರಿಜುವಾನ್ ಸಾಬ್ ಜಾಲಗಾರ, ಉಜ್ಜಪ್ಪ ಗುಬ್ಬಿ, ಸಿದ್ದಲಿಂಗಪ್ಪ ಗುಬ್ಬಿ, ಗುಡ್ಡಪ್ಪ ಕಾಡೇರ, ಈರನಗೌಡರ ಗುಬ್ಬಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.