ರೈತರಿಗೆ ಕೃಷಿ ವಿಜ್ಞಾನಿಗಳ ಪಾಠ
Team Udayavani, Jul 12, 2020, 12:46 PM IST
ರಾಣಿಬೆನ್ನೂರ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಅಶೋಕ ಪಿ. ಅವರ ನೇತೃತ್ವದ ವಿಜ್ಞಾನಿಗಳ ತಂಡ ಸವಣೂರ ತಾಲೂಕಿನ ಬರದೂರ ಗ್ರಾಮದ ಪ್ರಗತಿಪರ ರೈತ ಭರಮಪ್ಪ ಮಳಳ್ಳಿ, ಅಂದಾನಗೌಡ ಪಾಟೀಲ ಅವರ ಕ್ಷೇತ್ರಗಳಿಗೆ ಭೇಟಿ ನೀಡಿತು.
ಈ ಸಮಯದಲ್ಲಿ ಹೆಸರು ಬೆಳೆಯಲ್ಲಿ ಹೊಸ ತಳಿಯ ಕುರಿತು ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಯಿತು. ಹೊಸ ತಳಿಯು ಪ್ರತಿ ಎಕರೆಗೆ 6-7 ಕ್ವಿಂಟಲ್ ಇಳುವರಿಯಿದ್ದು ಸ್ಥಳೀಯ ತಳಿಗಳಿಂತ ಹೆಚ್ಚಿನ ಇಳುವರಿಯೊಂದಿಗೆ ಬೆಳೆಯಬಹುದು ಎಂದು ತಿಳಿಸಿದರು.
ಬಿತ್ತನೆ ಅಂತರವನ್ನು ಸಾಲಿನಿಂದ ಸಾಲಿಗೆ 30 ಸೆಮೀ ಹಾಗೂ ಬೀಜದಿಂದ ಬೀಜಕ್ಕೆ 7.5 -10 ಸೆಮೀ ಅಂತರ ಇರುವಂತೆ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು. ಸಮಗ್ರ ಬೆಳೆ ಪದ್ಧತಿಗಳಾದ ಜೈವಿಕ ಗೊಬ್ಬರವಾದ ರೈಜೋಬಿಯಂದಿಂದ ಬೀಜೋಪಚಾರ ಮಾಡುವುದರ ಜೊತೆಗೆ ಬಿತ್ತಿದ 25 ದಿನಗಳ ನಂತರ 2 ಸಲ ಎಡೆಕುಂಟೆ ಹಾಯಿಸುವುದು. ನಂತರ ಹೂವಾಡುವ ಮತ್ತು ಕಾಳು ಕಟ್ಟುವ ಸಮಯದಲ್ಲಿ ಶೇ.1ರ 19:19:19 (10ಗ್ರಾಂ/ ಲೀಟರ್ ನೀರಿಗೆ) ಅಥವಾ ಶೇ. 2ರ ಡಿ.ಎ.ಪಿ. (20 ಗ್ರಾಂ ಡಿ.ಎ.ಎಪಿ. ಪ್ರತಿ ಲೀಟರ್ ನೀರಿಗೆ) ಸಿಂಪರಣೆ ಮಾಡಬೇಕು. ಇದರಿಂದ ಕಾಯಿಗಳ ಸಂಖ್ಯೆ ಹೆಚ್ಚಾಗಲಿದ್ದು, ಕಾಳುಗಳ ಗಾತ್ರ ಸಹ ದೊಡ್ಡದಾಗುವುದರಿಂದ ರೈತರಿಗೆ ಲಾಭದಾಯಕ ಎಂದು ವಿವರಿಸಿದರು.
ಹೆಸರು ಬೆಳೆ ಬಿತ್ತಿದ 20-25 ದಿನಗಳ ನಂತರ ಎಲೆ ಕತ್ತರಿಸುವ ಕೀಟ, ಕಾಂಡ ಕೊರಕ ನೊಣ ಮತ್ತು ರಸ ಹೀರುವ ಕೀಟಗಳ ಬಾಧೆ ಕಂಡು ಬರುತ್ತದೆ. ಎಲೆ ಕತ್ತರಿಸುವ ಮತ್ತು ಕಾಂಡ ಕೊರಕ ನೊಣಗಳ ಬಾಧೆ ಕಂಡು ಬಂದಾಗ ಅವುಗಳ ಹತೋಟಿಗಾಗಿ 0.2 ಗ್ರಾಂ ಡೈಯಾಮೆಥಾಕ್ಸಾಮ್ ಅಥವಾ 1 ಮಿಲೀ ಮೊನೊಕ್ರೋಟೋಫಾಸ್ 30 ಇ.ಸಿ. ಪ್ರತಿ ಲೀಟರ್ ಬೆರೆಸಿ ಸಿಂಪರಣೆ ಮಾಡಬೇಕು ಎಂದರು. ವಿಜ್ಞಾನಿಗಳಾದ ಡಾ| ರಾಜಕುಮಾರ ಜಿ.ಆರ್., ಡಾ| ಶಿವಮೂರ್ತಿ ಅವರು ರೈತರೊಂದಿಗೆ ಇತರ ಬೆಳೆಗಳ ಬಗ್ಗೆ ಚರ್ಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.