ಅಕ್ಕಿಆಲೂರು: ದೇಶದ ಸಾಹಿತ್ಯ ಲೋಕಕ್ಕೆ ಕನ್ನಡದ ಕೊಡುಗೆ ಅನನ್ಯ
Team Udayavani, Feb 6, 2024, 5:23 PM IST
ಉದಯವಾಣಿ ಸಮಾಚಾರ
ಅಕ್ಕಿಆಲೂರು: ವಿಶ್ವಮಾನ್ಯವಾಗಿರುವ ಭಾರತ ದೇಶದಲ್ಲಿಂದು ನಡೆದಿರುವ ಸಾಕಷ್ಟು ಪೂರಕ ಬದಲಾವಣೆಗಳಿಗೆ ನಾವೆಲ್ಲರೂ
ಸಾಕ್ಷಿಯಾಗುತ್ತಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ದೇಶದ ಸಾರಸ್ವತ ಲೋಕಕ್ಕೆ ಕರುನಾಡಿನ ಕೊಡುಗೆ ಅಪಾರವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಮುಖ್ಯಸ್ಥ ಡಾ| ಎ.ಸಿ. ವಾಲಿ ಹೇಳಿದರು.
ಪಟ್ಟಣದಲ್ಲಿ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದಿಂದ ಆಯೋಜಿಸಿದ್ದ 32ನೇ ಕನ್ನಡ ನುಡಿ ಸಂಭ್ರಮದ
ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾರನ್ನು ಕೇವಲವಾಗಿ ಕಾಣಬಾರದು. ಎಲ್ಲರಲ್ಲೂ ಅಸಾಮಾನ್ಯ
ಸಾಮರ್ಥವಿರುತ್ತದೆ. ಅದನ್ನು ಗುರುತಿಸುವ ಪ್ರಯತ್ನ ನಮ್ಮದಾಗಬೇಕು.
ಸಮಾಜದಲ್ಲಿ ಮಾನವೀಯತೆ ಮತ್ತು ಧರ್ಮದ ಗುಣಗಳು ಹೆಚ್ಚಾಗುತ್ತಿದೆ. ಕನ್ನಡ ಕಟ್ಟಲು ಸರ್ಕಾರದ ಮೇಲೆ ನಾವು ಅವಲಂಬಿತರಾಗದೇ, ಸ್ವಯಂ ಪ್ರೇರಣೆಯಿಂದ ನಾಡಾಭಿಮಾನ ರಾಷ್ಟ್ರೀಯ ಮನೋಧರ್ಮ, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿ ಮತ್ತು ಪ್ರಾಚೀನತೆಗೆ ಕನ್ನಡ ಬಹುದೊಡ್ಡ ಕೊಡುಗೆ ನೀಡಿದೆ. ಅದನ್ನು ನಾವೇ ಉಳಿಸಿಕೊಳ್ಳಬೇಕು. ನಮ್ಮ ಮೂಲಸನಾತನ ಸಂಸ್ಕೃತಿ, ಆಚರಣೆಗಳಿಗೆ ಹಿನ್ನಡೆಯಾಗದಂತೆ ನಾವು ಜಾಗೃತರಾಗಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬೇಕೆಂದರೂ ಸಿಗದ ನಮ್ಮ ಶ್ರೇಷ್ಠ ಆಚಾರ-ವಿಚಾರಗಳನ್ನು ನಾವೆ ಗೌರವಿಸಬೇಕು ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಸತೀಶ ಕುಲಕರ್ಣಿ ಮಾತನಾಡಿ, ಯುವ ಸಾಹಿತಿಗಳಿಗೆ ವಿನೂತನ ಆಲೋಚನೆಗಳಿರಬೇಕು. ವೈಚಾರಿಕತೆ ಮತ್ತು ನೈತಿಕತೆ ಆಧಾರದ ಮೇಲೆ ಸಾಹಿತ್ಯಗಳು ರಚನೆಯಾಗಿ ಸಮುದಾಯದ ಬೆಳಕಾಗಿ ಪ್ರಜ್ವಲಿಸುವಂತಾಗಬೇಕು. ಗಡಿಭಾಗಗಳಲ್ಲಿ ಇಂದಿಗೂ ನಡೆದಿರುವ ಭಾಷೆ, ನೆಲ-ಜಲದ ಕುರಿತ ವೈರುಧ್ಯ ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ. ಜನಪದ ಸಂಸ್ಕೃತಿಗೆ ಘಾಸಿಯಾದಾಗ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯವಾದಿ ಸಂದೀಪ ಪಾಟೀಲ ಮಾತನಾಡಿ, ಕನ್ನಡ ಭಾಷೆ ಬೆಳೆಯುವುದು ಜೈಕಾರ
ಹಾಕುವುದರಿಂದಲ್ಲ ಬದಲಿಗೆ ಓದುವುದು, ಬರೆಯುವುದು ಮತ್ತು ಮಾತನಾಡುವುದರ ಮೇಲೆ ಕನ್ನಡದ ಅಸ್ತಿತ್ವ ಅಡಗಿದೆ. ರಾಷ್ಟ್ರೀಯ ಮನೋಧರ್ಮ, ನಾಡಾಭಿಮಾನ ಅಳವಡಿಸಿಕೊಂಡರೆ ಶಿಕ್ಷಣವಿಲ್ಲದಿದ್ದರು ಜಗತ್ತು ಆಳುವ ನೈತಿಕ ಆತ್ಮವಿಶ್ವಾಸ ನಮ್ಮಲ್ಲಿ ಕರಗತವಾಗುತ್ತದೆ ಎಂದರು.
ವಿರಕ್ತಮಠದ ಶಿವಬಸವ ಶ್ರೀಗಳು ಮಾತನಾಡಿದರು. ನಂತರ ಪ್ರಶಾಂತ ದೈವಜ್ಞ ವಿರಚಿತ ಬಾಬಣ್ಣನ ಚುಟುಕುಗಳು ಕೃತಿ
ಬಿಡುಗಡೆಗೊಂಡಿತು. ಹಾವೇರಿ ಪೃಥ್ವಿ ನೃತ್ಯ ಲೋಕ ತಂಡದಿಂದ, ಕಾಲೇಜು ವಿಭಾಗದಿಂದ ನಡೆದ ನೃತ್ಯ ಸಂಭ್ರಮ ಮನಸೂರೆಗೊಂಡಿತು. ಶಿವಮೊಗ್ಗದ ಅನುಷಾ ಮೇಲೋಡಿಸ್, ಸರಿಗಮಪ ಖ್ಯಾತಿಯ ಮಹನ್ಯಾ ಪಾಟೀಲ ಗೀತ ಸಂಭ್ರಮ ನಡೆಸಿಕೊಟ್ಟರು. ತಹಶೀಲ್ದಾರ್ ರವಿ ಕೊರವರ, ವಿ.ವಿ. ಸಾಲಿಮಠ, ಶರತ್ ಸಣ್ಣವೀರಪ್ಪನವರ, ರಾಜಶೇಖರ ಮಳಗಿ, ಷಣ್ಮುಖಪ್ಪ ಮುಚ್ಚಂಡಿ ಸೇರಿದಂತೆ ಪ್ರಮುಖರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಾವೇರಿ: ಸಿದ್ದು ಅದೃಷ್ಟದ ಸಿಎಂ, ಬಿಎಸ್‌ವೈ ಹೋರಾಟ ಮಾಡಿ ಅಧಿಕಾರಕ್ಕೆ ಬಂದವರು-ವಿಜಯೇಂದ್ರ
Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ
MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.