ಅವೈಜ್ಞಾನಿಕ ರೋಡ್ ಹಂಪ್ಸ್‌ಗಳ ಕಿರಿಕಿರಿ
•ವಾಹನ ಸವಾರರಿಗೆ ನಿತ್ಯಯಾತನೆ •ಅಪಘಾತ ನಿಯಂತ್ರಿಸುವ ಹಂಪ್ಸ್‌ಗಳಿಂದಲೇ ಅಪಘಾತ ಸೃಷ್ಟಿ
Team Udayavani, Jun 26, 2019, 10:54 AM IST
ಹಾವೇರಿ: ಒಂದೆಡೆ ಆಳೆತ್ತರ ಮೇಲೇಳುವ ರಸ್ತೆಯ ಧೂಳು, ಇನ್ನೊಂದೆಡೆ ಹೊಂಡಗಳ ನಡುವೆ ರಸ್ತೆಯ ಹುಡುಕಾಟ. ಇಷ್ಟರ ಮಧ್ಯೆ ಮಾರು ಮಾರಿಗೆ ಬರುವ ರೋಡ್ ಹಂಪ್ಸ್‌ಗಳ ಕಾಟ. ಇದು ನಗರದಲ್ಲಿ ಸಂಚರಿಸುವ ವಾಹನ ಸವಾರರ ಪರದಾಟ.
ಜನವಸತಿ ಸ್ಥಳಗಳಲ್ಲಿ ಅತಿಯಾದ ವೇಗದಿಂದ ಉಂಟಾಗುವ ಅಪಘಾತ ತಡೆಯಲು ರೋಡ್ ಹಂಪ್ಸ್ ನಿರ್ಮಿಸುವುದು ಸಹಜ. ಆದರೆ, ನಗರದ ವಿವಿಧ ರಸ್ತೆಗಳಲ್ಲಿ ಎಲ್ಲಿಬೇಕೆಂದರಲ್ಲಿ ಅವೈಜ್ಞಾನಿಕವಾಗಿ ರೋಡ್ ಹಂಪ್ಸ್‌ಗಳನ್ನು ಹಾಕಿರುವುದು ವಿಪರ್ಯಾಸ. ಈ ರೋಡ್ ಹಂಪ್ಸ್‌ಗಳಿಂದ ವಾಹನಗಳ ಸವಾರರಿಗೆ ನಿತ್ಯ ಕಿರಿಕಿರಿಯಾಗಿದೆ.
ಶಾಲಾ ಕಾಲೇಜು ಪ್ರದೇಶ, ಆಸ್ಪತ್ರೆ, ಜನದಟ್ಟನೆ ಇರುವ ಪ್ರದೇಶದಲ್ಲಿ ಹಾಗೂ ರಸ್ತೆಕ್ರಾಸ್ ಬಳಿ ಅಪಘಾತ ಸುರಕ್ಷಾ ದೃಷ್ಟಿಯಿಂದ ವೈಜ್ಞಾನಿಕವಾದ ರೋಡ್ ಹಂಪ್ಸ್ ನಿರ್ಮಿಸಲಾಗುತ್ತದೆ. ಆದರೆ, ನಗರದಲ್ಲಿ ಅಷ್ಟಾಗಿ ಜನವಸತಿ ಇರುವ ಹಾಗೂ ವಾಹನ ದಟ್ಟನೆ ಇರದ ಸ್ಥಳಗಳಲ್ಲಿಯೂ ಬೇಕಾಬಿಟ್ಟಿಯಾಗಿ ನಿರ್ಮಿಸಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಕೆಲವೆಡೆಗಳಲ್ಲಿ ಅವಶ್ಯವಿಲ್ಲದೇ ಇದ್ದರೂ ರೋಡ್ ಹಂಪ್ಸ್‌ಗಳನ್ನು ಹಾಕಲಾಗಿದೆ. ಇದರಿಂದಲೇ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತಿವೆ.
ಅಪಘಾತ ತಪ್ಪಿಸಲು ಇರಬೇಕಾದ ಹಂಪ್ಸ್‌ಗಳ ಅಪಘಾತಕ್ಕೆ ಕಾರಣವಾದರೆ ಹೇಗೆ ಎನ್ನುವ ಪ್ರಶ್ನೆ ನಗರದ ವಾಹನ ಸವಾರರದ್ದಾಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಅವೈಜ್ಞಾನಿಕ ರೋಡ್ ಹಂಪ್ಸ್‌ಗಳನ್ನು ನಿರ್ಮಿಸಿದ್ದು, ವಾಹನ ಚಾಲಕರು ಜಾಗೃತರಾಗಿರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ನಗರದ ಮಹಾತ್ಮಾ ಗಾಂಧಿ ರಸ್ತೆ, ವಿದ್ಯಾನಗರ, ರಾಜ್ಯ ಹೆದ್ದಾರಿ, ದೇವಗಿರಿ ರಸ್ತೆ, ಜೆಪಿ ರಸ್ತೆ, ರೈಲು ನಿಲ್ದಾಣ ರಸ್ತೆ, ಇಜಾರಿಲಕ್ಮಾಪುರ, ಗುತ್ತಲ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದೊಂದರಲ್ಲೂ 5 ರಿಂದ 6 ರೋಡ್ ಹಂಪ್ಸ್ ನಿರ್ಮಿಸಲಾಗಿದೆ. ಕೆಲವು ಭಾಗದಲ್ಲಿ ರೋಡ್ ಹಂಪ್ಸ್‌ನ ನಿಯಮ ಗಾಳಿಗೆ ತೂರಿ ನಿರ್ಮಿಸಲಾಗಿದೆ.
ಅವೈಜ್ಞಾನಿಕ ಹಂಪ್ಸ್‌ಗಳು: ಹಲವು ಕಡೆಗಳಲ್ಲಿ ರೋಡ್ ಹಂಪ್ಸ್‌ಗಳನ್ನು ಬೇಕಾಬಿಟ್ಟಿಯಾಗಿ ನಿರ್ಮಿಸಿದ್ದಾರೆ. ಗುಡ್ಡ ನಿರ್ಮಿಸಿದಂತೆ ಹಂಪ್ಸ್ ಹಾಕಲಾಗಿದ್ದು, ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವಾಗ ವಾಹನದ ಕೆಳಭಾಗಕ್ಕೆ ಹಂಪ್ಸ್‌ಗಳು ತಾಗುತ್ತಿವೆ. ಇದರಿಂದಾಗಿ ಎಷ್ಟೋ ವಾಹನಗಳು ಕೆಟ್ಟು ನಿಂತು ವಾಹನ ಸವಾರರು ತೊಂದರೆ ಅನುಭವಿಸಿರುವ ಉದಾಹರಣೆಗಳೂ ಇವೆ.
ಬೈಕ್ ಹಿಂದೆ ಕುಳಿತವರಂತೂ ಪ್ರಾಣ ಬಿಗಿಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಂಪ್ಸ್‌ಗಳಿಂದಾಗಿಯೇ ಬೈಕ್‌ನ ಹಿಂದೆ ಕುಳಿತವರು ಬಿದ್ದು ಗಾಯಗೊಂಡ ಘಟನೆಗಳು ನಿತ್ಯ ನಗರದಲ್ಲಿ ನಡೆಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ.
ಸ್ಥಳೀಯರ ಬೇಡಿಕೆ: ರಸ್ತೆಗಳಿಗೆ ಇಷ್ಟೊಂದು ಹಂಪ್ಸ್‌ಗಳನ್ನು ಹಾಕಲು ಸ್ಥಳೀಯ ವಾಸಿಗಳ ಬೇಡಿಕೆಯೇ ಕಾರಣ ಎನ್ನಲಾಗುತ್ತಿದೆ. ನಿಯಮದ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ಇರುವಲ್ಲಿ ಮಾತ್ರ ಹಂಪ್ಸ್‌ಗಳನ್ನು ಪೊಲೀಸ್ ಇಲಾಖೆ ಪರವಾನಗಿಯೊಂದಿಗೆ ಹಾಕಬೇಕು. ಆದರೆ, ಸ್ಥಳೀಯ ನಿವಾಸಿಗಳು ರಸ್ತೆ ಮಾಡುವ ಗುತ್ತಿಗೆದಾರರ ಮೇಲೆ, ಆ ಭಾಗದ ಜನಪ್ರತಿನಿಧಿ ಮೇಲೆ ಒತ್ತಡ ತಂದು ಹಂಪ್ಸ್ ಹಾಕಿಸಿಕೊಳ್ಳುತ್ತಾರೆ. ಒಂದು ವೇಳೆ ರಸ್ತೆ ಮಾಡುವ ಗುತ್ತಿಗೆದಾರರು ಮಾಡದಿದ್ದರೆ ತಾವೇ ಸ್ವತಃ ಹಂಪ್ಸ್ ಸಿದ್ಧಪಡಿಸಿಕೊಳ್ಳುತ್ತಾರೆ. ಹೀಗಾಗಿ ನಗರದ ರಸ್ತೆಗಳಲ್ಲಿ ಹಂಪ್ಸ್‌ಗಳದ್ದೇ ಕಾರುಬಾರಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನಗರಸಭೆ ಅಕಾರಿ.
ಅಪಘಾತ ತಡೆಗಾಗಿ ರೋಡ್ ಹಂಪ್ಸ್ ಹಾಕಲಾಗುತ್ತದೆ. ಆದರೆ, ನಗರದಲ್ಲಿ ಅವೈಜ್ಞಾನಿಕ ಮತ್ತು ಮಿತಿಮೀರಿದ ರೋಡ್ ಹಂಪ್ಸ್‌ಗಳಿಂದಾಗಿ ಅಪಘಾತಗಳು ಹೆಚ್ಚುತ್ತಿರುವುದು ಖೇದಕರ ಸಂಗತಿ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಅನಗತ್ಯ ಸ್ಥಳದಲ್ಲಿರುವ ಹಂಪ್ಸ್‌ಗಳನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು.
•ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.