ಆರೂಢ ಪರಂಪರೆ ಮಠಗಳ ಕೊಡುಗೆ ಅಪಾರ
•ಅಜ್ಞಾನದಿಂದ ಸುಜ್ಞಾನದೆಡೆ ಕೊಂಡೊಯ್ದ ಸಿದ್ಧಾರೂಢರು•ಮುಪ್ಪಿನಾರ್ಯ ಶ್ರೀಗಳ ಪುಣ್ಯಾರಾಧನೆ
Team Udayavani, Jul 6, 2019, 11:13 AM IST
ರಾಣಿಬೆನ್ನೂರ: ಐರಣಿ ಹೊಳೆಮಠದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ ಪುಣ್ಯಾರಾಧನೆ ಧರ್ಮಸಭೆಯನ್ನು ಪೌರಾಡಳಿತ ಸಚಿವ ಆರ್.ಶಂಕರ್ ಉದ್ಘಾಟಿಸಿದರು.
ರಾಣಿಬೆನ್ನೂರ: ಹಳ್ಳಗಳೆಲ್ಲ ನದಿ ಸೇರುವಂತೆ, ನದಿಗಳು ಸಾಗರದಲ್ಲಿ ಸಂಗಮವಾಗುವಂತೆ ಎಲ್ಲ ಮಠಗಳು ಭಕ್ತರನ್ನು ಅಜ್ಞಾನದಿಂದ ಸುಜ್ಞಾನದಡೆ ಕೊಂಡೊಯ್ಯುತ್ತವೆ. ಅದರಲ್ಲೂ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು ಅಗ್ರಗಣ್ಯರು ಎಂದು ಪೌರಾಡಳಿತ ಸಚಿವ ಆರ್.ಶಂಕರ್ ಹೇಳಿದರು.
ಶುಕ್ರವಾರ ತಾಲೂಕಿನ ಐರಣಿ ಹೊಳೆಮಠದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ 35ನೇ ಪುಣ್ಯಾರಾಧನೆ ಹಾಗೂ ಶ್ರೀ ಮಠದ ಬಸವರಾಜ ದೇಶಿಕೇಂದ್ರ ಸ್ವಾಮಿಗಳವರ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆರೂಢ ಪರಂಪರೆಯ ಮಠಗಳು ಜಾತಿಯ ಸೋಂಕಿಲ್ಲದೆ ನಾಡಿನ ಸರ್ವಧರ್ಮ ಸಮಾಜದ ಜನರು ಮುಕ್ತಿಯ ಮಾರ್ಗವನ್ನು ತಲುಪುವ ಸುಲಭ ಉಪಾಯ ತಿಳಿಸಿದವರು. ಧಾರ್ಮಿಕ ಪರಂಪರೆ ಉಳಿಸಿ ಬೆಳಸುವಲ್ಲಿ ಶ್ರಮಿಸುತ್ತಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ರೂಪದಿಂದ ಜನ್ಮ ತಾಳಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಡಗಿರುವ ಅಜ್ಞಾನ ಹೊಡೆದೋಡಿಸಿ, ಸುಜ್ಞಾನದೆಡೆ ಕೊಂಡೊಯ್ಯುವ ಇಂತಹ ಸತ್ಸಂಗಗಳಲ್ಲಿ ಭಾಗಿಗಳಾಗಿ ಮುಕ್ತಿ ದಾರಿ ಪಡೆಯಿರಿ ಎಂದು ನುಡಿದರು.
ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಶಿಷ್ಯರಾದ ಮುಪ್ಪಿನಾರ್ಯರು ಈ ಕ್ಷೇತ್ರವನ್ನು ಪುಣ್ಯಮಯವನ್ನಾಗಿಸಿದ್ದಾರೆ. ತನ್ನನ್ನು ತಾನು ಅರಿತು ಬಾಳಲು ಸತ್ಸಂಗದ ಮೂಲಕ ತಿಳಿಸಿದವರು ಮುಪ್ಪಿನಾರ್ಯರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದವರ ಬದುಕು ಹಸನವಾಗುವುದು ಎಂದರು.
ಗುರುಗಳ ಸಮ್ಮುಖದಲ್ಲಿ ನಡೆದ ಇಂಥ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀವು ಧನ್ಯರು. ನವದಂಪತಿಗಳು ಸಂಸ್ಕಾರಯುತವಾಗಿ ಬಾಳಬೇಕು. ಗುರುಹಿರಿಯರಿಗೆ ಗೌರವ ಕೊಡುವ ಮೂಲಕ ನಿಮ್ಮ ಬದುಕು ಇತರರಿಗೆ ಮಾದರಿಯಾಗಲಿ ಎಂದು ಶ್ರೀಗಳು ನವದಂಪತಿಗಳಿಗೆ ಕಿವಿ ಮಾತು ಹೇಳಿದರು.
ಹದಡಿ ಚಂದ್ರಗಿರಿ ಮಠದ ಮುರಳಿಧರ ಸ್ವಾಮೀಜಿ ಮಾತನಾಡಿ, ಪ್ರಪಂಚದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲು ಅದೈತ ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಆದಿಗುರು ಶಂಕರಾಚಾರ್ಯರಿಗೆ ಸಲ್ಲುತ್ತದೆ. ಅಹಂ ಬ್ರಹ್ಮಾಸಿಂ ಎಂಬುದು ನನ್ನಲ್ಲಿಯೇ ಪರಶಿವನಿದ್ದಾನೆ ಎಂದು ತೋರಿಸಿ ಕೊಟ್ಟವರು. ತದನಂತರ ಅದೈತ ತತ್ವ ಎತ್ತಿ ಹಿಡಿದವರು ಸಿದ್ಧಾರೂಢರು. ಅದರ ಸಂರಕ್ಷಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ದಾವಣಗೆರೆಯ ಜಡಿಸಿದ್ಧೇಶ್ವರ ಆಶ್ರಮದ ಶಿವಾನಂದ ಸ್ವಾಮೀಜಿ, ಕುಳ್ಳೂರಿನ ಸಿದ್ಧಾರೂಢ ಮಠದ ಬಸವಾನಂದ ಭಾರತಿ ಸ್ವಾಮೀಜಿ, ತೆಲಗಿಯ ಶಂಭುಲಿಂಗಾಶ್ರಮದ ಪೂರ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಾಮೂಹಿಕ ವಿವಾಹ ಸಮಾರಂಭದಲ್ಲಿ 12 ಜೋಡಿ ನವದಂಪತಿ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.
ನವವಿವಾಹಿತರಿಗೆ ಶ್ರೀ ಮಠದ ವತಿಯಿಂದ ಸಸಿಗಳನ್ನು ವಿತರಿಸಲಾಯಿತು. ನ್ಯಾಯವಾದಿ ಎಸ್.ಎಸ್. ರಾಮಲಿಂಗಣ್ಣನವರ, ಬಸವರಾಜ ಪಾಟೀಲ, ಧನಲಕ್ಷಿ ್ಮ ಶಂಕರ, ಕಲಾವಿದ ರಾಮಣ್ಣ ಇದ್ದರು. ಬಾಬಣ್ಣ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.