ಬೀದಿ ನಾಟಕದಿಂದ ಅಭಿವೃದ್ಧಿ ಯೋಜನೆಗಳ ಜಾಗೃತಿ
Team Udayavani, Sep 11, 2019, 10:56 AM IST
ಹಾವೇರಿ: ಜಿಲ್ಲೆಯ ವಿವಿಧೆಡೆ ಸರ್ಕಾರಿ ಯೋಜನೆ ಜಾಗೃತಿ ಕುರಿತ ಬೀದಿನಾಟಕ ಪ್ರದರ್ಶನಗೊಂಡಿತು.
ಹಾವೇರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತಂತೆ ಬೀದಿ ನಾಟಕ ಹಾಗೂ ಜಾನಪದ ಸಂಗೀತಗಳ ಮೂಲಕ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಗ್ರಾಮ ಸಂಪರ್ಕ ಕಾರ್ಯಕ್ರಮ ಜಿಲ್ಲೆಯ ವಿವಿಧೆಡೆ ನಡೆಯಿತು.
ಬ್ಯಾಡಗಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಮಲ್ಲಿಕಾರ್ಜುನ ಜಾನಪದ ಕಲಾತಂಡ ಬೀದಿನಾಟಕ ಹಾಗೂ ವೀರಭದ್ರೇಶ್ವರ ಸಂಗೀತ ಕಲಾತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅತ್ತಿಕಟ್ಟಿ, ಸೂಡಂಬಿ, ಘಾಳಪೂಜಿ, ದುಮ್ಮಿನಹಾಳ, ಕುಮ್ಮೂರ, ನೆಲ್ಲಿಕೊಪ್ಪ, ಶಿಡೇನೂರ, ಶಿವಾಜಿನಗರ, ಕಾಗಿನೆಲೆ, ಇಂಗಳಗೊಂದಿ, ಕೆರವಡಿ, ಚಿನ್ನಕಟ್ಟಿ, ಮಾಸಣಗಿ, ಅಂಗಾರಗಟ್ಟಿ, ಗುಂಡೇನಹಳ್ಳಿ, ಕದಮನಹಳ್ಳಿ, ಬಿಸಲಹಳ್ಳಿ, ಬೆಳಕೇರಿ, ಕಲ್ಲೇದೇವರ, ಸೇವಾನಗರ ಗ್ರಾಮಗಳಲ್ಲಿ ಪ್ರದರ್ಶನ ನಡೆಯಿತು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ, ಕೃಷಿಹೊಂಡ ನಿರ್ಮಾಣ, ಮೀನುಗಾರರ ಸಾಲಮನ್ನಾ, ನೇಕಾರರ ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳ ವಿವರ, ಆ ಯೋಜನೆಗಳ ಪ್ರಯೋಜನ, ಸಾರ್ವಜನಿಕರು ಈ ಯೋಜನೆಗಳ ಪಡೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮ, ಸಂಪರ್ಕಿಸಬೇಕಾದ ಇಲಾಖೆ, ಯೋಜನೆಗಳ ಫಲಾನುಭವಿಗಳ ಯಶೋಗಾಥೆಗಳ ಕುರಿತಂತೆ ಅತ್ಯಂತ ಪರಿಣಾಮಕಾರಿ ಹಾಡು, ಸಂಗೀತ, ನೃತ್ಯ ಹಾಗೂ ಅಭಿನಯಗಳ ಮೂಲಕ ಮನಮುಟ್ಟುವಂತೆ ಅಭಿನಯಿಸಿದರು. ಕೆರವಡಿ ಗ್ರಾಮದ ಮಾಲತೇಶ ಹಾಗೂ ಮಾಸಣಗಿ ಗ್ರಾಮದ ರೈತ ಬಸವರಾಜ ಮಾತನಾಡಿ, ಸರ್ಕಾರ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಹಲವು ಯೋಜನೆಗಳು ಜಾರಿ ಮಾಡಿದ್ದರೂ ಅವುಗಳನ್ನು ಪಡೆಯಲು ಯಾರನ್ನು ಸಂಪರ್ಕಿಸಬೇಕು, ಯಾವ ಯೋಜನೆಗಳಿವೆ ಎಂಬುದು ತಿಳಿದಿರಲಿಲ್ಲ. ಬೀದಿನಾಟಕ ಮತ್ತು ಸಂಗೀತದ ಮೂಲಕ ನಮಗೆ ತಿಳಿವಳಿಕೆ ಬಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.