ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ
Team Udayavani, Apr 9, 2020, 1:53 PM IST
ಬ್ಯಾಡಗಿ: ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬ್ಯಾಡಗಿ: ತಾಲೂಕಿನಲ್ಲಿರುವ ನಿರಾಶ್ರಿತರು, ನಿರ್ಗತಿಕರು ಹಾಗೂ ವಲಸಿಗ ಕಾರ್ಮಿಕರ ಬಗ್ಗೆ ಮಾಹಿತಿ ಇಲ್ಲದ ಅಧಿ ಕಾರಿಗಳ ಕಾರ್ಯವೈಖರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬೇಸರ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸಭೆಯಲ್ಲಿಯೇ ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಪುರಸಭೆ ಮುಖ್ಯಾ ಧಿಕಾರಿಯನ್ನೊಳಗೊಂಡ ತಂಡ ರಚಿಸಲಾಗಿದೆ. ಇದರಲ್ಲಿ ಬ್ಯಾಡಗಿ ಪಟ್ಟಣ ಸೇರಿದಂತೆ ನಿರಾಶ್ರಿತರು, ನಿರ್ಗತಿಕರು ಹಾಗೂ ವಲಸಿಗ ಕಾರ್ಮಿಕರನ್ನು ಗುರ್ತಿಸುವ ಕುರಿತು ಸೂಚಿಸಲಾಗಿತ್ತು. ಹೀಗಿದ್ದಾಗ್ಯೂ ನಿರಾಶ್ರಿತರ ಬಗ್ಗೆ ಮಾಹಿತಿ ತಮ್ಮ ಬಳಿಯಿಲ್ಲ. ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳು ಪ್ರತಿ ಕುಟುಂಬಕ್ಕೂ 25 ಸಾವಿರ ರೂ. ಮೌಲ್ಯದ ಕಿಟ್ ನೀಡುವುದಾಗಿ ಘೋಷಿಸಿದ್ದು ತಾಲೂಕಿನಲ್ಲಿ ಯಾರಿಗೆ ನೀಡಬೇಕೆಂಬುದು ಅರ್ಥವಾಗುತ್ತಿಲ್ಲ ಎಂದರು.
ಕೋಳಿ ಮಾಂಸ ಮಾರಾಟಕ್ಕೆ ಅವಕಾಶ: ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆಯಿಂದಲೂ, ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್ ಕಚೇರಿಯಿಂದಲೂ ಅನುಮತಿ ಪಡೆದುಕೊಂಡರವಷ್ಟೇ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು. ಪಟ್ಟಣದ ಸಂತೆ ಮೈದಾನದಲ್ಲಿ ಅ ಧಿಕೃತ ಮಾರಾಟ ಕೇಂದ್ರದಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಶಾಸಕರು ತಿಳಿಸಿದರು.
ತಹಶೀಲ್ದಾರ್ ಶರಣಮ್ಮ ಕಾರಿ, ಟಿಇಒ ಅಬಿದ್ ಗದ್ಯಾಳ, ಸಮಾಜ ಕಲ್ಯಾಣಾಧಿಕಾರಿ ಪುಂಡಲೀಕ ಮಾನವರ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಗೀತಾ ಕುಂದಾಪುರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Union Budget 2025: ತೆರಿಗೆ ವಿನಾಯ್ತಿ, ಉದ್ಯೋಗದ ಮೇಲೆ ಎಐ ಪರಿಣಾಮ- ಪರಿಹಾರದ ನಿರೀಕ್ಷೆ…
Cricket Australia: ಆರ್ ಸಿಬಿ ಮಾಜಿ ಕೋಚ್ ಈಗ ಆಸ್ಟ್ರೇಲಿಯಾ ತಂಡದ ವೇಗದ ಬೌಲಿಂಗ್ ಕೋಚ್
Bengaluru Crime: ಪತ್ನಿ ಮನೆ ಬಳಿ ಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
Sandalwood: ʼರಾಯಲ್ʼ ಎಂಟ್ರಿಯಲ್ಲಿ ʼವಿರಾಟʼ ದರ್ಶನ್; ತೆರೆಗೆ ಬಂತು ರಾಯಲ್
Gudibanda: ಧರಣಿ ನಿರತ ವ್ಯಕ್ತಿಗೆ ಹೃದಯಾಘಾತ, ಸಾವು