ಮಾದರಿ ಆಸ್ಪತ್ರೆಗೂ ಸಿಬ್ಬಂದಿ ಕೊರತೆ
ಬಡವರ ಅಪೋಲೋ ಎಂದೇ ಸರುವಾಸಿಯಾದ ಆಸ್ಪತ್ರೆಮಹಿಳಾ ವೈದ್ಯರಿಲ್ಲದೇ ಗರ್ಭಿಣಿಯರ ಪರದಾಟ
Team Udayavani, Mar 11, 2020, 3:41 PM IST
ಬ್ಯಾಡಗಿ: ಪಟ್ಟಣದಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ಅಪೋಲೋಗಿಂತಲೂ ಯಾವುದರಲ್ಲೂ ಕಡಿಮೆ ಇಲ್ಲ ಎನ್ನವುಂತ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಯಂತ್ರಗಳು ಸೇರಿದಂತೆ ಹಲವು ಸೌಕರ್ಯಗಳೇನೋ ಇದೆ. ಆದರೆ, ಅವುಗಳನ್ನು ಬಳಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ತಂತ್ರಜ್ಞರು, ಸಿಬ್ಬಂದಿ ಹಾಗೂ ಎಲ್ಲಕ್ಕೂ ಮೇಲಾದ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಪರಿಣಾಮ ಎಲ್ಲವೂ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ.
ಆಸ್ಪತ್ರೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವ ವೈದ್ಯರು ಸೇರಿದಂತೆ ಅಲ್ಲಿನ ಸಿಬ್ಬಂದಿಗಳಿಗೆ ಸೂಕ್ತ ವಸತಿ ವ್ಯವಸ್ಥೆ (ಕ್ವಾರ್ಟರ್) ಸೇರಿದಂತೆ ತೀವ್ರ ನಿಗಾ ಘಟಕಕ್ಕೆ (ಐಸಿಯು) ವೈದ್ಯಕೀಯ ಸಿಬ್ಬಂದಿ, ಅತ್ಯಾಧುನಿಕ ಶವಪರೀಕ್ಷಾ ಕೇಂದ್ರ, ಮೇಲ್ಮಟ್ಟದ ಜಲಾಗಾರದಂತ ಸಣ್ಣಪುಟ್ಟ ಸಮಸ್ಯೆಗಳೇ ಕಿರಿಕಿರಿಯುಂಟು ಮಾಡುತ್ತಿವೆ.
ಸಾರ್ವಜನಿಕರಿಗೆ ಉಚಿತವಾಗಿ ಅದರಲ್ಲೂ ಬಡ ಕುಟುಂಬದ ಹಿನ್ನೆಲೆಯುಳ್ಳವರಿಗೆ ಸೂಕ್ತ ವೈದ್ಯಕೀಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರವೇ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುವ ಮೂಲಕ ರಾಜ್ಯದೆಲ್ಲೆಡೆ ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಿದೆ. ಪಟ್ಟಣದಲ್ಲಿರುವ ಇಂತಹುದೇ ಸರ್ಕಾರಿ ಆಸ್ಪತ್ರೆಯೊಂದು ವೈದ್ಯಕೀಯ ಸೇವೆ ನೀಡಲು ಸಿದ್ಧವಿದ್ದರೂ ಅಗತ್ಯವಿರುವ ಮೂಲಸೌಕರ್ಯಗಳಿಗಾಗಿ ಎದುರು ನೋಡುವಂತಾಗಿರುವುದು ದುರದೃಷ್ಟಕರ ಸಂಗತಿ.
ಇದ್ದೂ ಇಲ್ಲದಂತಾಗಿರುವ ಐಸಿಯು: ಸ್ಥಳೀಯ ಆಸ್ಪತ್ರೆಯಲ್ಲಿ ನಾಲ್ಕು ಹಾಸಿಗೆಗಳ ತೀವ್ರ ನಿಗಾ ಘಟಕವೊಂದು (ಐಸಿಯು) ಕಾರ್ಯಾರಂಭ ಮಾಡಿರುವುದೇನೋ ಸರಿ, ಆದರೆ, ಅದಕ್ಕೆ ಅಗತ್ಯವಿರುವ ತಜ್ಞ ವೈದ್ಯರು ಸ್ಟಾಫ್‌ನರ್ಸ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳಿಲ್ಲ. ಹೀಗಾಗಿ ಲಕ್ಷಗಟ್ಟಲೇ ವ್ಯಯಿಸಿ ಅಳವಡಿಸಿರುವಂತಹ ಐಸಿಯು ಘಟಕ ಸ್ಥಗಿತಗೊಂಡಿದ್ದು, ಬಡವರಿಗೆ ಇದರ ಸೌಲಭ್ಯ ತಲುಪದಂತಾಗಿದೆ.
400 ಮೀರುವ ಹೊರರೋಗಿಗಳು: ಪ್ರತಿನಿತ್ಯ ಎನ್ನಿಲ್ಲವೆಂದರೂ ಸುಮಾರು 400ಕ್ಕೂ ಅಧಿಕ ಸಂಖ್ಯೆಯಲ್ಲಿ ಹೊರರೋಗಿಗಳು ಸ್ಥಳೀಯ ಆಸ್ಪತ್ರೆಗೆ ವಿವಿಧ ರೀತಿಯ ಚಿಕಿತ್ಸೆಗೆ ಬ್ಯಾಡಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಅವರೆಲ್ಲರಿಗೂ ಸೂಕ್ತವಾದ ಚಿಕಿತ್ಸೆ ಸೇರಿದಂತೆ ಅಗತ್ಯವಾದ ಔಷಧಗಳನ್ನು ನೀಡಲು ಸಾಧ್ಯವಾಗದಿರುವುದು ದುರದೃಷ್ಟಕರ ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರದ ಮಟ್ಟದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ.
ವಾಸಕ್ಕೆ ಯೋಗ್ಯವಲ್ಲದ ವಸತಿ ಗೃಹ: ಈಗಾಗಲೇ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸುಮಾರು 50 ವರ್ಷಕ್ಕೂ ಅಧಿಕ ಹಳೆಯದೆನ್ನಬಹುದಾದ ವಸತಿಗೃಹಗಳಿವೆ. ಅವೆಲ್ಲವೂ ಶಿಥಿಲಾವಸ್ಥೆ ತಲುಪಿದ್ದು, ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಹೀಗಾಗಿ ಒಟ್ಟು 11 ಜನ ವೈದ್ಯರ ನಡುವೆ ಕೇವಲ ಇಬ್ಬರು ಡಾಕ್ಟರ್ ಗಳಿಗೆ ವಸತಿ ಸೌಕರ್ಯ ಲಭ್ಯವಾಗಿದೆ. 30ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೇವಲ 8 ವಸತಿ ಗೃಹಗಳು ಲಭ್ಯವಾಗಿವೆ. ಇಲ್ಲಿನ ವೈದ್ಯರು ದುಬಾರಿ ಹಣಕೊಟ್ಟು ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವಂತಾಗಿದೆ.
ನೀರಿನ ಕೊರತೆ: ಸ್ಥಳೀಯ ಆಸ್ಪತ್ರೆಗೆ ನಿತ್ಯವೂ ಸುಮಾರು 50ಸಾವಿರಕ್ಕೂ ಅ ಧಿಕ ಲೀ.ನೀರಿನ ಅವಶ್ಯಕತೆಯಿದೆ. ಆದರೆ, ಎಲ್ಲವೂ ಸೇರಿ ಈಗಿರುವ ಸಂಗ್ರಹಣಾ ಸಾಮರ್ಥ್ಯ ಕೇವಲ 8 ಸಾವಿರ ಲೀ. ಇದರಿಂದ ನೀರಿನ ಸಂಗ್ರಹಣೆ ಸಾಧ್ಯ ವಾಗದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿದೆ. ಹೀಗಾಗಿ ಕನಿಷ್ಟ ಎನಿಲ್ಲವೆಂದರೂ 1 ಲಕ್ಷ ಲೀ.ನೀರಿನ ಸಾಮರ್ಥ್ಯದ ಮೇಲ್ಮಟ್ಟದ ಜಲಗಾರವೊಂದು ಅವಶ್ಯಕತೆಯಿದೆ.
ಹೆರಿಗೆಗಾಗಿ ನಿತ್ಯವೂ ಗ್ರಾಮೀಣದ ಪ್ರದೇಶದಿಂದ ಮಹಿಳಾ ರೋಗಿಗಳು ದಾಖಲಾಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಮಾತ್ರ ಮಹಿಳಾ ವೈದ್ಯರಿಲ್ಲದೇ ಗರ್ಭಿಣಿಯರು ನಲಗುವಂತಾಗಿದೆ. ಮೊದಲಿದ್ದ ವೈದ್ಯೆಯೊಬ್ಬರು ವರ್ಗಾವಣೆಗೊಂಡು ಬೇರೆಡೆ ತೆರಳಿದ್ದರಿಂದ ಸದ್ಯ ಖಾಲಿಯಿರುವ ಹುದ್ದೆ ಇಂದಿಗೂ ಭರ್ತಿಯಾಗಿಲ್ಲ.
ಯಾವುದೇ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲವೆನ್ನುವಂತೆ ರಾಜ್ಯದಲ್ಲಿಯೇ ಉತ್ತಮ ಹೆಸರು ಪಡೆದಿರುವ ಈ ಆಸ್ಪತ್ರೆ ಸುತ್ತಮುತ್ತಲಿನ ತಾಲೂಕಿನಲ್ಲಿ ಹೆಸರುವಾಸಿ. ಬಡವರು, ಶ್ರೀಮಂತರೆನ್ನದೇ ಬರುವ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಒಳರೋಗಿಗಳ ಜೊತೆ ತಂಗುವವರಿಗೆ ಊಟಕ್ಕಾಗಿ ಅಡುಗೆ ಕೋಣೆ ಹಾಗೂ ಡೈನಿಂಗ್ ಹಾಲ್ ಅವಶ್ಯವಿದೆ.
ಶವಪರೀಕ್ಷಾ ಕೇಂದ್ರಕ್ಕೆ ಸಮಸ್ಯೆ
ತಾಲೂಕಿನಲ್ಲಿ ಪ್ರಮುಖ ಆಸ್ಪತ್ರೆಯಾದ್ದರಿಂದ ಪ್ರತಿದಿನ ದುರಂತ ಸಾವನ್ನಪ್ಪಿದವರ ಶವಪರೀಕ್ಷೆಗೆ ಸುಸಜ್ಜಿತ ಶವಾಗಾರವಿಲ್ಲ, ಈಗಿರುವುದರಲ್ಲಿ ಕೇವಲ ಒಂದು ಶವಪರೀಕ್ಷೆ ಮಾಡಲಷ್ಟೇ ಶಕ್ತವಾಗುತ್ತಿದ್ದು, ಎರಡ್ಮೂರು ಜನ ಸಾವನ್ನಪ್ಪಿದ ಪ್ರಕರಣದ ಸಂದರ್ಭದಲ್ಲಿ ಏಕ ಕಾಲದಲ್ಲಿ ಶವಪರೀಕ್ಷೆ ಕಷ್ಟಸಾಧ್ಯ ಹೀಗಾಗಿ ಸುಸಜ್ಜಿತವಾದ ಶವಪರೀಕ್ಷಾ ಕೇಂದ್ರದ ಅಗತ್ಯವಿದೆ.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ರಾಜ್ಯದಲ್ಲಿಯೇ ಉತ್ತಮ ಹೆಸರು ಪಡೆದಿದೆ. ಅದರ ಖ್ಯಾತಿಗೆ ತಕ್ಕಂತೆ ವೈದ್ಯಕೀಯ ಸೇವೆ ಸಿಗುತ್ತಿದೆ. ಸೂಕ್ತ ಸಿಬ್ಬಂದಿ ನೇಮಕ ಹಾಗೂ ಐಸಿಯು ಪ್ರಾರಂಭಿಸುವ ಕೆಲಸವಾಗಬೇಕು.
ಗಂಗಣ್ಣ ಏಲಿ,
ರೈತ ಮುಖಂಡ
ಶಿವಾನಂದ ಮಲ್ಲನಗೌಡರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.