ಸಿದ್ದರಾಮಯ್ಯ ಆಟ, ಕಾಂಗ್ರೆಸ್ ಗೆ ಗೂಟ : ಬಿಸಿ ಪಾಟೀಲ್
Team Udayavani, Nov 28, 2019, 2:44 PM IST
ಹಾವೇರಿ: ಕುರಿ ಕೋಳಿ ಎಮ್ಮೆ ಥರ ಶಾಸಕರು ಮಾರಾಟ ಆದರು ಅಂತಾ ಹೇಳುತ್ತಾ ಇದ್ದೀರಾ ಸಿದ್ದರಾಮಯ್ಯನವರೆ ನಾನು ನಿಮಗೆ ಕೇಳುತ್ತಿನಿ ಕಾಂಗ್ರೆಸ್ ಪಕ್ಷಕ್ಕೆ ಹೋದ್ರಿ ಅಲ್ವಾ ಎಷ್ಟು ಕೋಟಿಗೆ ಮಾರಿಕೊಂಡ್ರಿ ಸಿದ್ದರಾಮಯ್ಯನವರೆ? ಎಂದು ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್ , ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನೆಡೆಸಿದರು.
ಹಿರೆಕೇರೂರಿನ ತಮ್ಮ ಸ್ವಗ್ರಹದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನೀವೂ ಮಾರಿಕೊಂಡಿದ್ದಕ್ಕೆ ತಾನೆ . ನಿಮಗೆ ಈ ಸಂಸ್ಕೃತಿ ಗೊತ್ತಿರೊದು. ಇಂಥಾ ಕೀಳುಮಟ್ಟದ ರಾಜಕಾರಣ ಮಾಡುತ್ತಾ ಇದಿರಾ ನಿಮಗೇನು ದಿನ ದುಡ್ಡು ಬಂದಿತ್ತಾಕಾಂಗ್ರೆಸ್ ಪಕ್ಷ ಸೇರುವ ಉದ್ದೇಶದಿಂದಲೇ ಜೆಡಿಎಸ್ ಪಕ್ಷ ಬಿಟ್ರಿ ಅವಾಗ ದೇವೆಗೌಡರ ಬೆನ್ನಿಗೆ ಚೂರಿ ಹಾಕಿದ್ದವರು ನೀವೇ ಎಂದು ವಾಗ್ದಾಳಿ ನಡೆಸಿದರು.
ಗೌರವಯುತವಾಗಿ ನಾನು ಮಾಡಿದ್ದು ಪೋಲಿಸ್ ಕೆಲಸ ರಿಟೈಯರ್ಡ್ ಪೋಲಿಸ್ ಆಫೀಸರ್ ಕೆಂಪಯ್ಯ ಇಟ್ಟುಕೊಂಡು ಅಂಗಡಿ ಒಪನ್ ಮಾಡಿದ್ರಿ ಅವರನ್ನು ಮುಂದೆ ಇಟ್ಟುಕೊಂಡು ಏನೇನಲ್ಲಾ ಮಾಡಿಲ್ಲಾ? ನಿಮ್ಮ ಆಡಳಿತದಲ್ಲೆ ಪೋಲಿಸರು ಆತ್ಮಹತ್ಯೆ ಮಾಡಿಕೊಂಡರು ಈ ಕೂಡಲೇ ಪೋಲಿಸ್ ಇಲಾಖೆಗೆ ನೀವು ಕ್ಷಮೆ ಕೇಳಬೇಕು ಪೋಲಿಸ್ ಬಗ್ಗೆ ಮಾತಾಡಿದರಲ್ಲಾ ನೀವೂ ನಿಮಗೆ ನಾಚೀಕೆ ಆಗಬೇಕು ಹಗುರವಾಗಿ ಮಾತಾಡಿದ್ದೀರಾ ನೀವೂ. ಪೋಲಿಸ್ ಇಲಾಖೆ ನಿಮ್ಮ ವಿರುದ್ದ ತಿರುಗಿ ಬೀಳುತ್ತದೆ ಎಂದರು.
ಸಿದ್ದರಾಮಯ್ಯ ಆಟ, ಕಾಂಗ್ರೆಸ್ ಗೆ ಗೂಟ,ಸಿದ್ದರಾಮಯ್ಯ ಅವರನ್ನು ನಂಬಿಕೊಂಡವ ಕೆಟ್ಟ ಮಾತು ಮಾತಲ್ಲೂ ಸಿದ್ದರಾಮಯ್ಯವರ ಮೇಲೆ ಕೋಪ ಹೊರಹಾಕಿದ ಬಿಸಿ ಪಾಟೀಲ್ ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಕಾಂಗ್ರೆಸ್ ಮುಕ್ತ ಹಿರೆಕೇರೂರು ಆಗುತ್ತದೆ. ಸ್ಪೀಕರ್ ನಾಲಾಯಕ್ ಅಂದರೆ ನೀವೂ ಲಾಯಕ್ ಸಿದ್ದರಾಮಯ್ಯನವರೆ. ಜಾರ್ಜ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸದರೆ ಸಿದ್ದರಾಮಯ್ಯರ ಹುಂಡಿ ಎಲ್ಲೇಲ್ಲಿದೆ ಅಂತಾ ಗೊತ್ತಾಗದೆ ಅವಾಗ ಯಾರು ನಾಲಾಯಕ್ ಅಂತಾ ಗೊತ್ತಾಗುತ್ತದೆ
ಖಂಡಿತಾ ಸಿದ್ದರಾಮಯ್ಯ ಮತ್ತು ದಿನೇಶ ಗುಂಡುರಾವ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ನಾನೇ ಸಿದ್ದರಾಮಯ್ಯನವರನ್ನ ನಂಬಿದ್ದೆ,ಆದರೆ ಅವರೇ ನನ್ನ ಎದೆಗೆ ಚೂರಿ ಹಾಕಿದ್ದು ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yellapura: ಬಸ್- ಬೈಕ್ ಡಿಕ್ಕಿ; ಟಯರ್ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.