ಬ್ಯಾಡಗಿ ಮೆಣಸಿನಕಾಯಿ: ದಾಖಲೆ ಪ್ರಮಾಣದಲ್ಲಿ ಆವಕ
Team Udayavani, Mar 31, 2023, 6:35 AM IST
ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 1.84 ಲಕ್ಷ ಮೆಣಸಿನಕಾಯಿ ಚೀಲಗಳು ಆವಕಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾಖಲೆ ಆವಕ ಎನಿಸಿದೆ.
ಕಳೆದ ಮೂರು ವಾರಗಳಿಂದ ಪ್ರತಿ ವಾರ ಒಂದೂವರೆ ಲಕ್ಷಕ್ಕೂ ಅಧಿ ಕ ಚೀಲಗಳಷ್ಟು ಆವಕವಾಗುತ್ತಿದ್ದು, ಚೀಲಗಳ ಸಂಖ್ಯೆಯಲ್ಲಿ 10ರಿಂದ 15 ಸಾವಿರ ಏರಿಕೆಯಾಗುತ್ತಾ ಸಾಗಿದೆ. ಸತತ ಎರಡು ವರ್ಷ 2 ಕೋಟಿ ವಹಿವಾಟು ನಡೆಸಿದ ಕೀರ್ತಿಗೆ ಭಾಜನವಾಗಿದ್ದ ಮಾರುಕಟ್ಟೆ ಹಾಗೂ ವರ್ಷದಿಂದ ವರ್ಷಕ್ಕೆ ಮೆಣಸಿನ ಕಾಯಿಗೆ ದೊರೆಯುತ್ತಿರುವ ದಾಖಲೆ ಮಟ್ಟದ ದರಗಳಿಂದ ಪ್ರಸ್ತ ವರ್ಷ 2 ಸಾವಿರ ಕೋಟಿ ರೂ. ವಹಿವಾಟು ದಾಟುವ ಸಾಧ್ಯತೆಗಳಿವೆ. ಕಳೆದ 3 ವಾರದಲ್ಲಿ ಮಾರುಕಟ್ಟೆಗೆ ಆವಕದಲ್ಲಿ ಸತತವಾಗಿ ಏರಿಕೆ ಕಂಡು ಬರುತ್ತಿದೆ. ಕಳೆದ ಸೋಮವಾರ ಮಾರುಕಟ್ಟೆಗೆ 1.78 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಇಲ್ಲಿಯವರೆಗಿನ ದಾಖಲೆ ಆವಕವೆನಿಸಿತ್ತು, ಮಾರ್ಚ್ ಅಂತ್ಯದ ವೇಳೆಗೆ 1.84 ಲಕ್ಷ ಮೆಣಸಿನಕಾಯಿ ಅತ್ಯಧಿಕವೆನಿಸಿದೆ.
ಗುರುವಾರದ ಮಾರುಕಟ್ಟೆ ದರ
ಎಪಿಎಂಸಿಯಲ್ಲಿ ಕಡ್ಡಿ ಮೆಣಸಿನ ಕಾಯಿ ತಳಿ ಕನಿಷ್ಠ 2,709, ಗರಿಷ್ಠ 67,711, ಸರಾಸರಿ 32,299, ಡಬ್ಬಿ ತಳಿ ಕನಿಷ್ಠ 4,009, ಗರಿಷ್ಠ 71,711, ಸರಾಸರಿ 39,000, ಗುಂಟೂರು ಕನಿಷ್ಠ 1,589, ಗರಿಷ್ಠ 22,389, ಸರಾಸರಿ 17,569 ರೂ.ಗೆ ಮಾರಾಟವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.