ಬ್ಯಾಡಗಿ: ಪುರಸಭೆ ಸಾಮಾನ್ಯ ಸಭೆ ರದ್ದು
Team Udayavani, Jun 30, 2021, 2:56 PM IST
ಬ್ಯಾಡಗಿ: ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಅವರ ಅಸಹಕಾರ ಧೋರಣೆ ವಿರೋಧಿ ಸಿ ಬಿಜೆಪಿ,ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಸದಸ್ಯರು ಸಭೆಗೆ ಗೈರು ಹಾಜರಾಗುವ ಮೂಲಕ ಮಂಗಳವಾರ ನಿಗದಿಯಾಗಿದ್ದ ಸಾಮಾನ್ಯ ಸಭೆ ರದ್ದಾಯಿತು.
ಅಧ್ಯಕ್ಷೆ ಕವಿತಾ ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಭೆ ದಿನಾಂಕ ಸೇರಿದಂತೆ ಅಝೆಂಡಾ ಸಿದ್ಧಪಡಿಸಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ. ಪೂರ್ವ ನಿಗದಿಯಂತೆ ಬೆಳಗ್ಗೆ 11ಕ್ಕೆಅಧ್ಯಕ್ಷೆ ಕವಿತಾ ಸಭೆಗೆ ಆಗಮಿಸಿದರಾದರೂ 11.30 ಆದರೂ ಯಾವುದೇ ಸದಸ್ಯರು ಪಾಲ್ಗೊಳಲಿಲ್ಲ. ಕೆಳಗಿಳಿಸಲು ತೆರೆಮರೆ ಹುನ್ನಾರ: ಪುರಸಭೆಯಲ್ಲಿ ಪ್ರಸಕ್ತ ಬಿಜೆಪಿ 13, ಕಾಂಗ್ರೆಸ್ 6 ಹಾಗೂ 4 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದರಿಂದ 7ನೇ ವಾರ್ಡ್‌ನಿಂದ ಪಕ್ಷೇತರರಾಗಿ ಆಯ್ಕೆಯಾಗಿದ್ದ ಕವಿತಾ ಅವರನ್ನು ಬಿಜೆಪಿ ಹೈಕಮಾಂಡ್‌ಅಧ್ಯಕ್ಷೆಯನ್ನಾಗಿ ಮಾಡಿದೆ. ಇತ್ತೀಚೆಗೆ ಅಧ್ಯಕ್ಷೆ ನಡವಳಿಕೆ ಸದಸ್ಯರಿಗೆ ಇರಿಸುಮುರಿಸು ಉಂಟು ಮಾಡಿದ್ದು, ಬಿಜೆಪಿ ಹಿಡಿತದಿಂದ ಆಡಳಿತ ತಪ್ಪುತ್ತಿರುವ ಬೆನ್ನಲ್ಲೇ, ಅಧ್ಯಕ್ಷ ಸ್ಥಾನದಿಂದ ಕೆಳಗಿಸುವ ಕಸರತ್ತು ತೆರೆಮರೆಯಲ್ಲಿ ಆರಂಭವಾಗಿತ್ತು. ಅವರಿಂದ ರಾಜೀನಾಮೆ ಪಡೆಯುವಂತೆ ಬಿಜೆಪಿ ಸದಸ್ಯರು ಹೈಕಮಾಂಡ್‌ಗೆ ಲಿಖಿತ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ, ಇದೀಗ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್-ಪಕ್ಷೇತರ ಸದಸ್ಯರ ಗೈರು: ಬಿಜೆಪಿ ಸದಸ್ಯರಲ್ಲಿನ ಭಿನ್ನಾಭಿಪ್ರಾಯ ಒತ್ತಟ್ಟಿಗಿರಲಿ, ಕಾಂಗ್ರೆಸ್ ಪಕ್ಷದ 6 ಮತ್ತು ಪಕ್ಷೇತರ ಮೂವರು ಸದಸ್ಯರೂ ಸಹ ಸಭೆಯಿಂದಹೊರಗುಳಿಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಸದಸ್ಯರ ನಡೆ ನಿಗೂಢವಾಗಿದ್ದು, ಅವರೊಂದಿಗೆಪಕ್ಷೇತರರು ಸಹ ಗೈರಾಗಿ ಆಶ್ಚರ್ಯ ಮೂಡಿಸಿದ್ದಾರೆ.ಮುಖ್ಯಾ ಧಿಕಾರಿ ಮನವಿಗೆ ಸ್ಪಂದಿಸದ ಸದಸ್ಯರು:ಇವೆಲ್ಲದರ ಮಧ್ಯೆ ಮುಖ್ಯಾ ಧಿಕಾರಿ ವಿ.ಎಂ. ಪೂಜಾರಸಮನ್ವಯ ಸೃಷ್ಟಿಸಲು ಸದಸ್ಯರ ಮನವೊಲಿಸುವಪಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ.ಇದರಿಂದ ಕೈಚೆಲ್ಲಿ ಕುಳಿತ ಮುಖ್ಯಾಧಿಕಾರಿಗಳು ಸಭೆರದ್ದುಪಡಿಸುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದ್ದಾಗಿ ತಿಳಿದು ಬಂದಿದೆ.
ಶಾಸಕರ ವಿಫಲ ಪ್ರಯತ್ನ: ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಪುರಸಭೆಗೆ ಆಗಮಿಸಿದರು. ಅಧ್ಯಕ್ಷರು ಹಾಗೂ ಸದಸ್ಯರ ಮಧ್ಯೆ ಏರ್ಪಟ್ಟಿರುವಭಿನ್ನಾಭಿಪ್ರಾಯ ಸರಿಪಡಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ
ಸದಸ್ಯರ ನಡುವೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಆದರೆ, ಭಿನ್ನಾಭಿಪ್ರಾಯವಿಲ್ಲ. ಅಧ್ಯಕ್ಷರು ಮತ್ತುಸದಸ್ಯರ ನಡುವೆ ಸಮನ್ವಯ ಸಾ ಧಿಸುವ ಕುರಿತುಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದೆ.ಶೀಘ್ರದಲ್ಲೇ ಮತ್ತೂಮ್ಮೆ ಸಭೆ ಕರೆದು ಚರ್ಚೆ ನಡೆಸುವೆ.– ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕರು
ಸರ್ವ ಸದಸ್ಯರ ಅಭಿಪ್ರಾಯ ಪಡೆದು ಒಮ್ಮತದ ನಿರ್ಣಯದಂತೆ ಅಧ್ಯಕ್ಷರಿಗೆ ಗೌರವದಿಂದ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅವರ ಸರ್ವಾಧಿಕಾರಿ ಧೋರಣೆ ಮುಂದುವರಿದಿದ್ದು,ಪಶಸ್ತಿ ಪಡೆದ ಪುರಸಭೆಗೆ ಅಗೌರವದಿಂದ ನಡೆದುಕೊಂಡಿದ್ದಾರೆ. ಇನ್ನೇನಿದ್ದರೂ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು. ಬಾಲಚಂದ್ರಗೌಡ ಪಾಟೀಲ, -ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.