Byadgi APMC ರೈತಾಕ್ರೋಶ… ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ ಪರಿಶೀಲನೆ
Team Udayavani, Mar 13, 2024, 1:24 PM IST
ಹಾವೇರಿ: ಬ್ಯಾಡಗಿಯ ಎಪಿಎಂಸಿಯ ಆಡಳಿತ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಬ್ಯಾಡಗಿಯ ಎಪಿಎಂಸಿಯ ಆಡಳಿತ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ಈ ಘಟನೆ ಆಗಬಾಗರದಿತ್ತು, ಆಗಿದೆ ರೈತರು ಸ್ವಾಭಾವಿಕವಾಗಿ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕಲ್ಲ ಅಂತ ಪ್ರತಿಭಟನೆ ಮಾಡುತ್ತಾರೆ ಆದರೆ ಈ ರೀತಿ ಮಾಡಬಾರದಿತ್ತು ರೈತರು ಏನು ಬೆಳೆದರೂ, ದೇಶದಲ್ಲಿ ಸೂಕ್ತವಾದ ಬೆಲೆ ಸಿಗುತ್ತಿಲ್ಲ ಅನ್ನೋ ನೋವು ಇದೆ, ದೆಹಲಿಯಲ್ಲಿ ಕೂಡಾ ಎಂಎಸ್ ಪಿ (MSP) ಜಾರಿ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.
ಸಾಂಪ್ರದಾಯಿಕವಾಗಿ ಡಬ್ಬಿ ಮೆಣಸಿನಕಾಯಿ, ಕಡ್ಡಿ ಮೆಣಸಿನಕಾಯಿ ಬೆಳೆಯುತ್ತಿದ್ದೇವೆ, ಅದರೆ ಕೆಲವು ರೈತರು ಸಿಜಂಟಾ ಕಂಪನಿ ಮೆಣಸಿನಕಾಯಿ ಬೆಳೆದಿದ್ದಾರೆ ಅದರ ಬೆಲೆ ಕಡಿಮೆ ಇದೆ, ರೈತರು ಪೂರ್ವಾಗ್ರಹ ಪೀಡಿತರಾಗಿ ಮಾಡಿರಬಹುದು ಎಂದರು.
ರೈತರು ನಮ್ಮ ಕರ್ನಾಟಕದವರು ಇರಲಿ, ಮಹಾರಾಷ್ಟ್ರ, ಆಂಧ್ರ ಯಾರೇ ಇರಲಿ ರೈತರು ರೈತರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಬಾರದು ಅದರಲ್ಲಿ ಕೆಲವು ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ ಆದರೆ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಹೇಳಿದರು.
ವಾರಕ್ಕೆ ಎರಡು ಸಲ ಮಾರುಕಟ್ಟೆ ನಡೆಯುತ್ತಿತ್ತು ಆದರೆ ಅದನ್ನ ಒಂದು ಸಲ ನಡೆಸಲು ತೀರ್ಮಾನ ಮಾಡಿದ್ದು ಆಕ್ರೋಶಕ್ಕೆ ಕಾರಣ ಇರಬಹುದು ಎಂದು ಹೇಳಿದ ಸಚಿವರು
ಬ್ಯಾಡಗಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೆಣಸಿನಕಾಯಿ ಶೇಖರಣೆ ಆಗಿದೆ. ಅದನ್ನ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ, ತಕ್ಷಣವೇ ಹಾನಿಯನ್ನು ಇಲಾಖೆಯಿಂದ ಭರಣ ಮಾಡಿ, ಬ್ಯಾಡಗಿ ಗತವೈಭವ ಮರುನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿ ಈಗಾಗಲೇ 80 ಜನರನ್ನ ಅರೆಸ್ಟ್ ಮಾಡಲಾಗಿದೆ, ಗಲಾಟೆಯಲ್ಲಿ ಅಂದಾಜು ನಾಲ್ಕೂವರೆ ಕೋಟಿ ಹಾನಿಯಾಗಿದೆ, ಯಾರು ತಪ್ಪಿತಸ್ಥರು ಇದ್ದರೂ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಜೊತೆಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬ್ಯಾಡಗಿ ಮಾರುಕಟ್ಟೆ ದೇಶ, ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿದೆ, ಮಾರುಕಟ್ಟೆಯ ಜಾಗದ ಕೊರತೆಯ ಬಗ್ಗೆ ಚರ್ಚೆ ಮಾಡಲಾಗಿದೆ, ಮೆಣಸಿನಕಾಯಿ ಬೆಳೆಯನ್ನು MSP ಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಜೊತೆಗೆ ಬ್ಯಾಡಗಿಗೆ 1 ಕೋಲ್ಡ್ ಸ್ಟೋರೇಜ್ ಮಂಜೂರು ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: Viral Video: ಆಸ್ಪತ್ರೆ ಆವರಣದಲ್ಲಿ ಬೆತ್ತಲಾಗಿ ಸುತ್ತಾಡಿದ ಸರಕಾರಿ ಆಸ್ಪತ್ರೆ ವೈದ್ಯ…
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.