ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತ ಮಠಾಧೀಶರು
ವಿಪಕ್ಷಗಳಿಂದ ಇಲ್ಲ ಸಲ್ಲದ ಆರೋಪ; ಪೇ ಸಿಎಂ ಅಭಿಯಾನದಿಂದ ವೈಯಕ್ತಿಕ ಟೀಕೆ
Team Udayavani, Sep 30, 2022, 10:00 PM IST
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ, ಅವರ ಬಗ್ಗೆ ಇಲ್ಲಸಲ್ಲದ ವೈಯಕ್ತಿಕ ಆರೋಪ ಮಾಡಿ ವ್ಯಕ್ತಿತ್ವಕ್ಕೆ ಚ್ಯುತಿ ತರುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಮಠಾ ಧೀಶರ ಒಕ್ಕೂಟದ ವಿವಿಧ ಮಠಾಧೀಶರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಕಿಆಲೂರು ಕಬ್ಬಿಣಕಂಥಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಶ್ರೀಗಳು, ಬಸವರಾಜ ಬೊಮ್ಮಾಯಿ ದಕ್ಷ , ಪ್ರಾಮಾಣಿಕ ಆಡಳಿತ ನೀಡುತ್ತಿದ್ದು, ಅವರನ್ನು ಜಿಲ್ಲಾ ಮಠಾಧಿಧೀಶರ ಒಕ್ಕೂಟ ಬೆಂಬಲಿಸುತ್ತಿದೆ. ಸಿಎಂ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ, ಆಡಳಿತಕ್ಕೆ ಅಡ್ಡಗಾಲು ಹಾಕುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಪೇಸಿಎಂ ಅಭಿಯಾನ ಸೇರಿ ವಿವಿಧ ರೀತಿಯಲ್ಲಿ ವೈಯಕ್ತಿಕ ಆರೋಪ ಮಾಡುತ್ತಿರುವುದು ಸರಿಯಲ್ಲ. ಎಲ್ಲ ಪಕÒಗಳು ಆಡಳಿತಾರೂಢ ಸರ್ಕಾರಕ್ಕೆ ಸಾಥ್ ನೀಡಿ ಅಭಿವೃದ್ಧಿಗೆ ಕೈಜೋಡಿಸಬೇಕು. ಅದನ್ನು ಬಿಟ್ಟು ಆರೋಪ-ಪ್ರತ್ಯಾರೋಪದಲ್ಲಿ ಕಾಲಹರಣ ಮಾಡುವುದು ಸರಿಯಾದ ನಡೆಯಲ್ಲ ಎಂದರು.
ಆಡಳಿತ ಪಕ್ಷದ ವಿರುದ್ಧ ರಾಜಕೀಯ ಟೀಕೆ, ಆರೋಪ ಸಹಜ. ಆದರೆ, ವೈಯಕ್ತಿಕ ಟೀಕೆ ಮಾಡಬಾರದು. ಸಿಎಂ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ. ಕೃಷಿಕರು, ಕಾರ್ಮಿಕರು, ರೈತರ ಸಮಸ್ಯೆ, ಬೆಳೆ ಹಾನಿ, ಅತಿವೃಷ್ಟಿ, ನಿರುದ್ಯೋಗ ಮುಂತಾದ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದು, ಅಭಿವೃದ್ಧಿಯತ್ತ ಗಮನ ನೀಡುತ್ತಿದ್ದಾರೆ. ರಾಜ್ಯದ ಘನತೆ, ಕನ್ನಡದ ಏಕತೆ, ಜನಪರ ಕಾಳಜಿ, ಸಾಮಾನ್ಯರಿಗೆ ಸ್ಪಂದನೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರಿಗೆ ಎಲ್ಲ ಪಕÒಗಳು ಸಹಕರಿಸಬೇಕು. ರಾಮ ರಾಜ್ಯದ ಕನಸು ಸಾಕಾರವಾಗಬೇಕು. ಗ್ರಾಮ, ಪಟ್ಟಣಗಳು ಸುಧಾರಿಸಬೇಕು ಎಂಬ ಆಶಯದಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾ ಮಠಾಧಿಧೀಶರ ಒಕ್ಕೂಟ ಬೆಂಬಲಿಸುತ್ತದೆ ಎಂದರು.
ಹೋತನಹಳ್ಳಿ ಸಿದ್ಧಾರೂಢ ಸ್ವಾಮೀಜಿ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಗಂಜಿಗಟ್ಟಿ ವೈಜನಾಥ ಶಿವಾಚಾರ್ಯ ಸ್ವಾಮೀಜಿ, ತಿಳವಳ್ಳಿ ನಿರಂಜನ ಸ್ವಾಮೀಜಿ, ಬ್ಯಾಡಗಿ ಮಲ್ಲಿಕಾರ್ಜುನ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮಹಾಂತ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.