ಚಿಕ್ಕಉಳ್ಳಿಗೇರಿಯ ತಂಡ ಪ್ರಥಮ
Team Udayavani, Dec 9, 2019, 3:00 PM IST
ರಾಣಿಬೆನ್ನೂರ: ಸಂಸ್ಕಾರವು ಭಾರತದಜೀವಾಳವಾಗಿದ್ದು, ಅದರಲ್ಲಿ ಕರಿಬಸವೇಶ್ವರ ಕ್ಷೇತ್ರ ಒಂದಾಗಿದೆ. ಸ್ವಾಮಿಯು ನೊಂದು–ಬೆಂದು ಬಂದವರ ಬಾಳಿಗೆ ಅಭಯ ನೀಡುತ್ತಿದ್ದು, ಇಂತಹ ಪವಿತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಭಜನಾ ಸ್ಪರ್ಧಾ ಕಾರ್ಯಕ್ರಮವು ನಾಡಿನಲ್ಲಿಯೇ ಹೆಸರುವಾಸಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ತುಮ್ಮಿನಕಟ್ಟಿ ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಗದ್ದುಗೆ ಟ್ರಸ್ಟ್ ಆಯೋಜಿಸಿದ್ದ 3ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗೆಲುವೇ ಮುಖ್ಯವಲ್ಲ. ಇಂದಿನ ಸೋಲು ಮುಂದಿನ ಗೆಲುವು ಎನ್ನುವುದನ್ನು ಅರಿತುಕೊಂಡು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಭಜನೆ ಕಲಾವಿದ ಜಿ. ಸಿದ್ಧನಗೌಡ್ರ ಮಾತನಾಡಿ, ಭಾರತೀಯ ಸಂಸ್ಕೃತಿಯ ಜನಪದ ಕಲಾ ಪರಂಪರೆಯಲ್ಲಿ ಈ ನಾಡಿನ ಗ್ರಾಮ ಸಂಸ್ಕೃತಿ ಪ್ರತಿಬಿಂಬಿಸುವ ಅತ್ಯಂತ ಭಕ್ತಿ ಭಾವ ಮತ್ತು ಏಕಾಗ್ರತೆಯಿಂದ ಭಗವಂತನನ್ನು ಒಲಿಸಿಕೊಂಡು ಮಾನವ ಜೀವನ ಸಾರ್ಥಕತೆ ಪಡಿಸಿಕೊಳ್ಳುವ ಮಹತ್ವದ ಏಕೈಕ ಕಲೆ ಭಜನೆ ಆಗಿದೆ ಎಂದು ಹೇಳಿದರು.
ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದುಗೆ ಟ್ರಸ್ಟ್‌ನ ಕಾರ್ಯದರ್ಶಿ ಎಸ್. ಸುರೇಶ ಮಾತನಾಡಿ, ಸುಕ್ಷೇತ್ರವು ತನ್ನಧಾರ್ಮಿಕ ಮತ್ತು ಆಧ್ಯಾತ್ಮಿಕ ಸೇವಾಕಾರ್ಯಗಳನ್ನು ಮಾಡುವುದರ ಜೊತೆಗೆ ಭಜನಾ ಕಲೆ ಹಾಗೂ ಕಲಾವಿದರನ್ನು ಉಳಿಸಬೇಕು–ಬೆಳೆಸಬೇಕು ಎಂಬ ಸದುದ್ದೇಶದಿಂದ ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಕಲಾವಿದರಲ್ಲಿರುವ ಅಪ್ರತಿಮ ಕಲೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ಕಲೆ–ಕಲಾವಿದರ ಮಹತ್ವವನ್ನು ಯುವ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮುಂದಾಗುತ್ತಿದ್ದೇವೆ. ಇದಕ್ಕೆ ಯುವ ಸಮುದಾಯ ಕೈಜೋಡಿಸಬೇಕು. ದೇಶದ ಕಲಾ ಸಂಸ್ಕೃತಿ ಪರಂಪರೆ ಅಳವಡಿಸಿಕೊಂಡು ನಮ್ಮತನ ಬೆಳೆಸಲು ಮುಂದಾಗಬೇಕು ಎಂದರು.
ದಾನಿಗಳಾದ ತುಮಕೂರಿನ ಶಾರದಮ್ಮ ತಿಪ್ಪಣ್ಣ, ಬಸವರಾಜಪ್ಪ, ನಿಸಾರ್ ಅಹ್ಮದ್, ಮಲ್ಲಿಕಾರ್ಜುನ ಜೆ.ಇ., ಕಾಶಿನಾಥ, ಎಚ್.ಜಿ. ಚಕ್ರಸಾಲಿ, ಸಿದ್ಧಲಿಂಗಪ್ಪ ಬಸವರಾಜಪ್ಪ, ಶಂಕ್ರಯ್ಯ ಮಠದ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಕಮಿಟಿ ಅಧ್ಯಕ್ಷ ಗದಿಗೆಪ್ಪ ಹೊಸಳ್ಳಿ, ವೀರನಗೌಡ ಹಲಗಪ್ಪನವರ, ಗದಿಗಯ್ಯ ಪಾಟೀಲ, ಪ್ರಕಾಶ ಕೋಟೇರ, ಆರ್. ಇಂದುಧರ, ವಿವೇಕಾನಂದ ಪಾಟೀಲ, ನಾಗರಾಜ ದಿಲ್ಲಿವಾಲಾ ಬಸವನಗೌಡ ಪಾಟೀಲ ಇದ್ದರು.
ಜನಪದ ಕಲಾವಿದರಾದ ಕೆ.ಸಿ. ನಾಗರಜ್ಜಿ, ಗುಡ್ಡರಾಜ ಹಲಗೇರಿ, ಕೆ.ಎಸ್. ನಾಗರಾಜ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. 35ಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷರ ಭಜನಾ ತಂಡಗಳು ಪಾಲ್ಗೊಂಡಿದ್ದವು. ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿಯ ಶ್ರೀಸಂಗಮೇಶ್ವರ ಭಜನಾ ಸಂಘ ಪ್ರಥಮ, ನವಲಗುಂದ ತಾಲೂಕಿನ ಶಲವಡಿ ಗ್ರಾಮದ ಶ್ರೀ ಗುರು ಶಾಂತೇಶ್ವರ ಭಜನಾ ಮಂಡಳಿ ದ್ವಿತೀಯ, ಹರಿಹರ ತಾಲೂಕಿನ ಎಳೆಹೊಳೆ ಗ್ರಾಮದ ಜೈಭೀಮ ಭಜನಾ ಸಂಘ ತೃತೀಯ ಸ್ಥಾನ ಪಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.