ಏಕಾಗ್ರತೆ-ಸೂಕ್ಷ್ಮ ಸಂವೇದನೆ ಯಶಸ್ಸಿನ ಮೆಟ್ಟಿಲು
Team Udayavani, May 5, 2019, 3:06 PM IST
ರಾಣಿಬೆನ್ನೂರ: ಮಕ್ಕಳು ತಾವು ಕೈಗೊಂಡ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಏಕಾಗ್ರತೆ, ಸೂಕ್ಷ ್ಮ ಸಂವೇದನಾ ಶೀಲತೆ, ತಾಳ್ಮೆಯಂತಹ ಗುಣಗಳು ಇರಬೇಕಾಗುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ರಾಘವೇಂದ್ರಾಚಾರಿ ನವರತ್ನ ಹೇಳಿದರು.
ಇಲ್ಲಿನ ವಾಗೀಶ ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ರಾಜ್ಯ ರಂಗ ಕುಸುಮ ಕಲಾಕೇಂದ್ರದ ಆಶ್ರಯದಲ್ಲಿ ನಡೆದ ರಂಗ ತರಬೇತಿ ಹಾಗೂ ರಂಗ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದೃಢ ದೇಹ, ಸಹೃದಯತೆಯ ಗುಣಗಳನ್ನು ರಂಗಭೂಮಿ ಚಟುವಟಿಕೆಗಳು ನೀಡುತ್ತವೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ಕಲಾವಿದರಾಗಿದ್ದು, ನಿತ್ಯ ನಿರಂತರ ಒಂದಿಲ್ಲೊಂದು ಪಾತ್ರ ನಿರ್ವಹಿಸುತ್ತಲೇ ಇರುತ್ತೇವೆ. ಅದಕ್ಕೆ ಗುರುತಿಸುವಿಕೆ ಸೂಕ್ಷ ್ಮ ಮನಸ್ಥಿತಿ ಬೇಕು. ಅಂತಹ ಮನಸ್ಥಿತಿಯನ್ನು ರಂಗ ತರಬೇತಿ ನೀಡುತ್ತದೆ. ರಂಗ ತರಬೇತಿಯಲ್ಲಿ ಕಲಿತ ವಿದ್ಯಾರಂಗದ ಕಲೆಯನ್ನು ಉಳಿಸಿಬೆಳೆಸಿಕೊಂಡು ಹೋಗಬೇಕು ಎಂದರು. ಪ್ರೊ| ಸಾಯಿಲತಾ ಮಡಿವಾಳರ ಮತ್ತು ಶಿಬಿರದ ನಿರ್ದೇಶಕ ವೆಂಕಟೇಶ ಈಡಿಗರ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಎ.ಬಿ.ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಹುಣಸಿಕಟ್ಟಿ, ಮಂಜುನಾಥ ಕೊರವರ, ಆಂಜನೇಯ ಡಿ.ಕೆ., ಪ್ರಭಾಕರ ಶಿಗ್ಲಿ, ಸೀತಾರಾಮ ಕಣೇಕಲ್ಲ, ಚಂದ್ರಶೇಖರ ಮಡಿವಾಳರ, ಸುಮಂಗಲ, ಮೇಘನಾ ವೆಂಕಟೇಶ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.