ಹತ್ತಿ ಕಣಜ ಖ್ಯಾತಿ ಸದ್ಯ ಕಣ್ಮರೆ!

Team Udayavani, Jul 5, 2019, 8:46 AM IST

hv-tdy-1..

ಹಾವೇರಿ: 2012ರಲ್ಲಿ ಕನಕ ಬಿತ್ತನೆ ಬೀಜಕ್ಕಾಗಿ ನೂಕುನುಗ್ಗಲು ಉಂಟಾಗಿತ್ತು. (ಸಂಗ್ರಹ ಚಿತ್ರ)

ಹಾವೇರಿ: ಅತೀ ಹೆಚ್ಚು ಹತ್ತಿ ಬೆಳೆದು ರಾಜ್ಯದಲ್ಲಿ ‘ಹತ್ತಿ ಕಣಜ’ ಎಂದೇ ಖ್ಯಾತಿ ಹೊಂದಿದ ಜಿಲ್ಲೆಯಲ್ಲಿ ಈ ವರ್ಷ ಮಳೆಯ ಅಭಾವ ಹಾಗೂ ವಿಳಂಬದಿಂದ ಹತ್ತಿ ಬೆಳೆ ಬಿತ್ತನೆ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

2005ರಿಂದ 2014ರವರೆಗೆ ಜಿಲ್ಲೆಯಲ್ಲಿ ಬಿಟಿ ಹತ್ತಿ ಬೆಳೆ ಹೆಚ್ಚಿನ ಕ್ಷೇತ್ರ ವ್ಯಾಪಿಸಿತ್ತು. ಮುಂಗಾರು ಬಿತ್ತನೆ ಸಮಯದಲ್ಲಿ ಬಿಟಿ ಹತ್ತಿ ಬೀಜ ಹಾಗೂ ರಸಗೊಬ್ಬರಕ್ಕೆ ರೈತರು ಪರದಾಡಿದ್ದರು. ಬಿಟಿ ಹತ್ತಿ ಬೀಜ ಪಡೆಯಲು ನೂಕುನುಗ್ಗಲು ಉಂಟಾಗಿ ಲಾಠಿ ಏಟು, ರಸಗೊಬ್ಬರಕ್ಕಾಗಿ ಗೋಲಿಬಾರ್‌ ನಡೆದು ರೈತರು ಪೊಲೀಸರ ಗುಂಡೇಟಿಗೆ ಬಲಿಯಾದದ್ದೂ ಇದೆ. ಇಷ್ಟಾಗಿದ್ದರೂ ಬಿಟಿ ಹತ್ತಿಯ ಮೇಲಿನ ವ್ಯಾಮೋಹ ಮಾತ್ರ ರೈತರಿಗೆ ಕಡಿಮೆಯಾಗಿರಲಿಲ್ಲ. ಕೆಲ ರೈತರಂತೂ ಆಹಾರ ಬೆಳೆಗಳ ಕೃಷಿಯನ್ನೇ ಕೈಬಿಟ್ಟು ಬಿಟಿ ಹತ್ತಿ ಬೆನ್ನು ಹತ್ತಿದ್ದರು.

ರೋಗ ನಿರೋಧಕತೆಗೆ ಹೆಸರಾದ ಬಿಟಿ ತಳಿಯಿಂದ ಜಿಲ್ಲೆಯಲ್ಲಿ ಬಿಟಿ ಹತ್ತಿ ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಒಂದೂವರೆ ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶ ಅಂದರೆ ಜಿಲ್ಲೆಯ ಅರ್ಧದಷ್ಟು ಬಿತ್ತನೆ ಕ್ಷೇತ್ರ ಬಿಟಿ ಹತ್ತಿ ವ್ಯಾಪಿಸಿತ್ತು. ಇಲ್ಲಿ ಸುರಿಯುವ ಸರಾಸರಿ ಮಳೆ ಹಾಗೂ ಮಣ್ಣಿಗೆ ಹತ್ತಿ ಹೇಳಿ ಮಾಡಿಸಿದ ಬೆಳೆ ಎಂತಲೇ ನಂಬಿದ್ದ ರೈತರು, ಇಲ್ಲಿಯ ಕರಿಮಣ್ಣಿನ ಹೊಲಗಳಲ್ಲಿ ‘ಬಿಳಿ ಬಂಗಾರ’ ಮಿಂಚುವಂತೆ ಮಾಡಿದ್ದರು. ಹೀಗಾಗಿ ಹಾವೇರಿ ರಾಜ್ಯದಲ್ಲಿ ‘ಹತ್ತಿ ಕಣಜ’ ಎಂಬ ಖ್ಯಾತಿಯನ್ನೂ ಪಡೆದಿತ್ತು.

ಕಡಿಮೆ ನಿರ್ವಹಣೆ ವೆಚ್ಚ, ಉತ್ತಮ ಬೆಲೆ ಕಾರಣದಿಂದ ಬಿಟಿ ಹತ್ತಿ ಬಿತ್ತನೆ ಬೀಜವನ್ನು ರೈತರು ಪ್ರತಿ ವರ್ಷ ಮುಗಿ ಬಿದ್ದು, ಖರೀದಿಸುತ್ತಿದ್ದರು. ಸಾವಿರಾರು ಕಂಪನಿಗಳು ಜಿಲ್ಲೆಯನ್ನು ಹತ್ತಿ ಬಿತ್ತನೆ ಬೀಜದ ಮಾರಾಟ ಕೇಂದ್ರವಾಗಿಸಿಕೊಂಡಿದ್ದವು. ಅಷ್ಟೆಅಲ್ಲ ಕನಕ ಹತ್ತಿ ಬೀಜ ತಯಾರಿಸುವ ಮಹಿಕೋ ಕಂಪನಿ ಜಿಲ್ಲೆಯ ರಾಣಿಬೆನ್ನೂರಿನಲ್ಲೇ ತನ್ನ ಘಟಕ ಆರಂಭಿಸಿತ್ತು. ಅದು ಸಹ ಈಗ ಜಿಲ್ಲೆಯಿಂದ ಕಾಲ್ಕಿತ್ತಿದೆ.

ಪ್ರತಿವರ್ಷ ಬಿಟಿ ಹತ್ತಿ ಬೀಜಕ್ಕಾಗಿ ಆಗುವ ನೂಕುನುಗ್ಗಲು ತಡೆಯಲು ಕೃಷಿ ಇಲಾಖೆಯಿಂದ ಕೂಪನ್‌ ಮಾಡಿ, ಬಿಗಿ ಪೊಲೀಸ್‌ ಭದ್ರತೆಯಲ್ಲಿ ಹತ್ತಿ ಬಿತ್ತನೆ ಬೀಜ ಕೊಡುವ ವ್ಯವಸ್ಥೆ ಸಹ ಮಾಡಲಾಗಿತ್ತು. ಇನ್ನು 2008ರಲ್ಲಿ ಸಮರ್ಪಕ ಬಿತ್ತನೆ ಬೀಜಕ್ಕಾಗಿ ಆಗ್ರಹಿಸಿ ರೈತರು ನಡೆಸಿದ ಉಗ್ರ ಹೋರಾಟದ ವೇಳೆಯಲ್ಲಿಯೇ ಗೋಲಿಬಾರ್‌ ನಡೆದು ಇಬ್ಬರು ರೈತರ ಸಾವು ಸಹ ಸಂಭವಿಸಿತ್ತು.

ಪ್ರತಿವರ್ಷ ಕುಸಿತ: 2014ರಲ್ಲಿ ಕಳಪೆ ಬೀಜ, ಕೀಟಬಾಧೆ ಸೇರಿದಂತೆ ಅನೇಕ ಕಾರಣಗಳಿಂದ ಬಿಟಿಹತ್ತಿಯು ಸಮರ್ಪಕವಾಗಿ ಇಳುವರಿಯೇ ಬರಲಿಲ್ಲ. ಕೆಲ ರೈತರ ಜಮೀನಿನಲ್ಲಂತೂ ಆಳೆತ್ತರಕ್ಕೆ ಹತ್ತಿಗಿಡಗಳು ಬೆಳೆದರೂ ಹೂ, ಕಾಯಿ ಬಿಡಲಿಲ್ಲ. ಇದರಿಂದ ರೈತರು ಬೀದಿಗಿಳಿದು ಹೋರಾಟ ನಡೆಸುವಂತಾಯಿತು. ಪರಿಣಾಮ ಸರ್ಕಾರ ಮಧ್ಯ ಪ್ರವೇಶಿಸಿ ಬಿಟಿ ಹತ್ತಿ ಬೆಳೆಹಾನಿಗೆ ಬಿಡಿಗಾಸಿನ ಪರಿಹಾರ ನೀಡಿತು. ಇದರಿಂದ ರೈತರು ಬಿಟಿಹತ್ತಿ ಬೆಳೆದು ಕೈಸುಟ್ಟು ಕೊಂಡರು.

2015ರಲ್ಲಿ ಬರ ಆವರಿಸಿದ್ದರಿಂದ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರಿತವಾಗಿರುವ ಬಿಟಿ ಹತ್ತಿ ಸಮರ್ಪಕವಾಗಿ ಬೆಳೆಯಲಿಲ್ಲ. ಇದರಿಂದಲೂ ರೈತರು ಹಾನಿ ಅನುಭವಿಸಿದರು. ಅದರ ಜತೆಗೆ ಪದೇ ಪದೇ ಬಿಟಿ ಹತ್ತಿಯನ್ನೇ ಬಿತ್ತನೆ ಮಾಡಿದ್ದು, ಬೆಳೆ ಬದಲಾವಣೆ ಇಲ್ಲದೇ ಇರುವುದರಿಂದಲೂ ಇಳುವರಿ ಮೇಲೆ ಪರಿಣಾಮ ಬೀರಿದೆ.

ಜಿಲ್ಲೆಯ ರೈತರನ್ನು ಅತಿಯಾಗಿ ಆಕರ್ಷಿಸಿದ್ದ ಹತ್ತಿ ಈಗ ರೈತರ ಹೊಲದಿಂದ ಕಣ್ಮರೆಯಾಗುತ್ತಿದೆ. ಮಳೆ ಅಭಾವ, ನಿರಂತರ ರೋಗಬಾಧೆ, ಕೀಟಬಾಧೆ, ಇಳುವರಿ ಕುಂಠಿತ, ಬೆಲೆಕುಸಿತ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ರೈತರು ಹತ್ತಿಯಿಂದ ಹಿಂದೆ ಸರಿಯುತ್ತ ಬಂದಿದ್ದು ಕಳೆದ ವರ್ಷ 76 ಸಾವಿರ ಹೆಕ್ಟೇರ್‌ಗೆ ಬಂದು ನಿಂತಿದೆ. ಅಂದರೆ ಈವರೆಗೆ ಹತ್ತಿ ಕ್ಷೇತ್ರ ಅರ್ಧದಷ್ಟು ಕ್ಷೇತ್ರ ಕಡಿಮೆಯಾದಂತಾಗಿದೆ. ಈ ವರ್ಷ ಮಳೆ ಒಂದು ತಿಂಗಳು ತಡವಾಗಿ ಬಂದಿದೆ. ತಡವಾಗಿ ಬಂದ ಮಳೆ ಹತ್ತಿಗೆ ಸೂಕ್ತವಲ್ಲದೇ ಇರುವುದರಿಂದ ಹತ್ತಿ ಬಿತ್ತನೆ ಕ್ಷೇತ್ರ ಇನ್ನೂ ಗಣನೀಯವಾಗಿ ಕಡಿಮೆಯಾಗಿ ಸರಾಸರಿ 30ರಿಂದ 50 ಹೆಕ್ಟೇರ್‌ಗೆ ಇಳಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ತಜ್ಞರು.

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.