ನಿರಾತಂಕವಾಗಿ ನಡೆದ ಮತ ಎಣಿಕೆ
Team Udayavani, Dec 31, 2020, 3:19 PM IST
ಬ್ಯಾಡಗಿ: ಮತಪತ್ರಗಳಲ್ಲಿ ನೋಟ್ ಪ್ರತ್ಯಕ್ಷ್ಯವಾಗಿದ್ದು ಸೇರಿದಂತೆ ಮೂರು ಮತಗಳೊಂದಿಗೆ ಅತ್ತೆಯನ್ನು ಹಿಂದಿಕ್ಕಿದ ಸೊಸೆ ಹೀಗೆ ಇನ್ನಿತರ ಕುತೂಹಲಕಾರಿ ಅಂಶಗಳೊಂದಿಗೆ ಗ್ರಾಪಂ ಚುನಾವಣೆ ಮತ ಎಣಿಕೆ ಕಾರ್ಯ ಪಟ್ಟಣದ ಸೇಂಟ್ ಜಾನ್ ವಿಯೆನ್ನಾ ಸ್ಕೂಲ್ ಆವರಣದಲ್ಲಿ ಬಿಗಿ ಭದ್ರತೆ ನಡುವೆ ನಿರಾತಂಕವಾಗಿ ಸಂಪನ್ನಗೊಂಡಿತು.
ತಹಶೀಲ್ದಾರ್ ರವಿ ಕೊರವರ ನೇತೃತ್ವದಲ್ಲಿ ನಡೆದ ಮತ ಎಣಿಕೆ ಕಾರ್ಯವು ನಿಗದಿತ ಅವಧಿಗೆ ಪ್ರಾರಂಭವಾಗಿತಾದರೂ ಸಂಜೆ ಯವರೆಗೂ ಕೇವಲ ಚಿಕ್ಕಬಾಸೂರ, ಮಾಸಣಗಿ, ಕಲ್ಲೇದೇವರ, ಶಿಡೇನೂರ, ಬನ್ನಿಹಟ್ಟಿ, ಹಿರೇಅಣಜಿ ಸೇರಿದಂತೆ ಒಟ್ಟು 6 ಗ್ರಾಮ ಪಂಚಾಯತ್‌ಗಳ ವಿಜೇತರ ಫಲಿತಾಂಶವಷ್ಟೇ ಪ್ರಕಟಗೊಳ್ಳಲು ಸಾಧ್ಯವಾಯಿತು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ವಿಜಯೋತ್ಸವ ಆಚರಿಸಿದರು. ಮೆರವಣಿಗೆ ನಿಷೇಧಿಸಿದ್ದರೂ ಒಬ್ಬರಿಗೊಬ್ಬರೂ ಬಣ್ಣ ಎರಚಿ, ಸಿಹಿ ಹಂಚಿ, ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ಇದನ್ನೂ ಓದಿ:ಅಫಜಲಪುರ: ಸಂಭ್ರಮದ ನಡುವೆ ಸೂತಕ
ಮತ ಪೆಟ್ಟಿಗೆಯಲ್ಲಿ ನೋಟು ಪ್ರತ್ಯಕ್ಷ್ಯ
ತಾಲೂಕಿನ ಶಿಡೇನೂರ ಗ್ರಾಪಂ ಹಲವಾರು ಕುತೂಹಲಕಾರಿಅಂಶಗಳಿಗೆ ಸಾಕ್ಷಿಯಾಯಿತು. ವಾರ್ಡ್ ಸಂಖ್ಯೆ 2ರಲ್ಲಿ ಎರಡು ಮತಪತ್ರಗಳಲ್ಲಿ 10 ಹಾಗೂ 20 ರೂ.ಗಳನ್ನಿಟ್ಟು ಮತದಾನ ಮಾಡಿದ್ದು ಬೆಳಕಿಗೆ ಬಂದಿದೆ. ಮತಪತ್ರಕ್ಕೆ ಪಿನ್ ಹಾಕಿ ನೋಟ್‌ಗಳನ್ನು ಅಂಟಿಸಲಾಗಿತ್ತು. ಬಳಿಕ ಪರಿಶೀಲಿಸಿದಚುನಾವಣಾಧಿಕಾರಿಗಳು ಎರಡೂ ಮತಗಳನ್ನು ತಿರಸ್ಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.