ಸ್ಮಶಾನದ ಗುಂಡಿಗೆ ಇಳಿದು ಶವದ ಗಂಟಲಿನಿಂದಲೇ ಮಾದರಿ ಸಂಗ್ರಹಿಸಿದ ಗಟ್ಟಿಗಿತ್ತಿ

Team Udayavani, May 12, 2020, 7:36 PM IST

ಸ್ಮಶಾನದ ಗುಂಡಿಗೆ ಇಳಿದು ಶವದ ಗಂಟಲಿನಿಂದಲೇ ಮಾದರಿ ಸಂಗ್ರಹಿಸಿದ ಗಟ್ಟಿಗಿತ್ತಿ

ಹಾವೇರಿ: ಹೌದು, ಇದು ನಂಬಲು ಕಷ್ಟವಾದರೂ ನಂಬಲೇ ಬೇಕಾದ ಸುದ್ದಿ! ಕೋವಿಡ್ ಯೋಧೆ, ಲ್ಯಾಬ್ ಟೆಕ್ನಿಷಿಯನ್ ಒಬ್ಬರು ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯನ್ನು ಹೂಳಲು ಸಿದ್ಧಗೊಳಿಸಿದ್ದ ಸ್ಮಶಾನದ ಗುಂಡಿಗೇ ಇಳಿದು ಆ ಹೆಣದ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ತಾನೆಂಥಹ ಗಟ್ಟಿಗಿತ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಈ ರೀತಿಯ ಅಪರೂಪದ ಘಟನೆ ನಡೆದಿರುವುದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹಿಋಮುಗದೂರ ಗ್ರಾಮದಲ್ಲಿ. ಮತ್ತು ಶೋಭಾ ಎಂಬ ಹೆಣ್ಣುಮಗಳೇ, ಈ ರೀತಿಯಾಗಿ ಶವದ ಗಂಟಲಿನಿಂದ ಮಾದರಿ ಸಂಗ್ರಹಿಸಿದ ಗಟ್ಟಿಗಿತ್ತಿ ಮಹಿಳಾ ಲ್ಯಾಬ್ ಟೆಕ್ನೀಶಿಯನ್ ಆಗಿದ್ದಾರೆ.

ಅಷ್ಟಕ್ಕೂ ಶೋಭಾ ಅವರು ಶೂಶ್ರೂಷಕಿಯೂ ಅಲ್ಲ. ಆರೋಗ್ಯ ಕಾರ್ಯಕರ್ತೆಯೂ ಅಲ್ಲ. ಸವಣೂರು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಶಿಯನ್.

ಹಿರೇಮುಗದೂರು ಗ್ರಾಮದಲ್ಲಿ ಸೋಮವಾರ 70ವರ್ಷದ ವ್ಯಕ್ತಿಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಕುಟುಂಬದವರು ಮಂಗಳವಾರ ಶವವನ್ನು ಸ್ಮಶಾನಕ್ಕೆ ಒಯ್ದು, ಹೊಂಡ ತೆಗೆದು ಹೆಣವನ್ನು ಮಣ್ಣು ಮಾಡುವುದೊಂದೇ ಬಾಕಿ ಇತ್ತು.

ಈ ನಡುವೆ ವೃದ್ಧ ಮೃತಪಟ್ಟಿರುವ ಮಾಹಿತಿ ಸ್ಥಳೀಯ ಆಡಳಿತಕ್ಕೆ ಹಾಗೂ ಕೋವಿಡ್ ವೈದ್ಯರ ತಂಡಕ್ಕೆ ತಡವಾಗಿ ತಿಳಿದುಬಂತು. ಹಾಗಾಗಿ ಕೋವಿಡ್ ಯೋಧೆಯಾಗಿರುವ ಲ್ಯಾಬ್ ಟೆಕ್ನಿಷಿಯನ್ ಶೋಭಾ ಅವರು ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸಲು ನೇರವಾಗಿ ಸ್ಮಶಾನಕ್ಕೇ ಬಂದರು.

ಪಿಪಿಇ ಕಿಟ್ ಹಾಕಿಕೊಂಡು ಹಾಗೂ ಸಕಲ ಮುಂಜಾಗ್ರತಾ ಕ್ರಮಗಳೊಂದಿಗೆ ಬಂದಿದ್ದ ಶೋಭಾ ಅವರು ಯಾವುದೇ ಅಳುಕಿಲ್ಲದೆ ಧೈರ್ಯದಿಂದಲೇ ಶವವನ್ನು ಇರಿಸಲಾಗಿದ್ದ ಹೊಂಡದಲ್ಲಿ ಇಳಿದು ಶವದ ಗಂಟಲು ದ್ರವ ಸಂಗ್ರಹಿಸಿಕೊಂಡು ಹೋದರು.

ಇತ್ತೀಚೆಗೆ ಸವಣೂರಿನಲ್ಲಿ ಎರಡು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆ ಸೋಂಕಿತರಿಗೆ ತಪಾಸಣೆ ಮಾಡಿದ್ದ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿ ಇದೀಗ ಕ್ವಾರೆಂಟೈನ್ ನಲ್ಲಿದ್ದಾರೆ.

ಕೋವಿಡ್ ಪಾಸಿಟಿವ್ ಕಂಡು ಬಂದ ಪ್ರದೇಶದಲ್ಲಿ ಯಾರೇ ಮೃತಪಟ್ಟರೂ ಅವರ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲೇ ಬೇಕು. ಹೀಗಾಗಿ ಶೋಭಾ ಅವರೇ ಈ ಸಾಹಸಕ್ಕಿಳಿದು ಗಂಟಲು ಮಾದರಿ ಸಂಗ್ರಹಿಸಬೇಕಾಯಿತು.

ಟಾಪ್ ನ್ಯೂಸ್

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri: ಸಚಿವ ಜಮೀರ್‌ ಅಹ್ಮದ್‌ ಕಾರಿನ ಮೇಲೆ ಖಾದ್ರಿ ಬೆಂಬಲಿಗರ ಕಲ್ಲು ತೂರಾಟ

Haveri: ಸಚಿವ ಜಮೀರ್‌ ಅಹ್ಮದ್‌ ಕಾರಿನ ಮೇಲೆ ಖಾದ್ರಿ ಬೆಂಬಲಿಗರ ಕಲ್ಲು ತೂರಾಟ

Basavaraj Bommai: ನಮಗೆ ಕಾಂಗ್ರೆಸ್‌ ನೇರ ಎದುರಾಳಿ

Basavaraj Bommai: ನಮಗೆ ಕಾಂಗ್ರೆಸ್‌ ನೇರ ಎದುರಾಳಿ

Shiggaon; Ajjamfir Qadri said that Yasir Khan is a BJP agent

Shiggaon ‘ಕೈ’ ಭಿನ್ನಮತ; ಯಾಸಿರ್‌ ಖಾನ್‌ ಬಿಜೆಪಿ ಏಜೆಂಟ್‌ ಎಂದ ಅಜ್ಜಂಫೀರ್‌ ಖಾದ್ರಿ

Tragedy: ಹೃದಯಾಘಾತದಿಂದ ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಮೃತ್ಯು

Tragedy: ಮಗ ಮೃತಪಟ್ಟ ವಿಚಾರ ಕೇಳಿ ತಂದೆಗೂ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ

By election; ಶೀಘ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ:‌ ಎಚ್‌ ಕೆ ಪಾಟೀಲ್

By election; ಶೀಘ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ:‌ ಎಚ್‌ ಕೆ ಪಾಟೀಲ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.