ಆ್ಯಪ್‌ನಲ್ಲಿ ಶೀಘ್ರ ಬೆಳೆ ವಿವರ ದಾಖಲಿಸಿ: ಭಾಗವಾನ್
Team Udayavani, Sep 5, 2020, 4:40 PM IST
ಸಾಂದರ್ಭಿಕ ಚಿತ್ರ
ಹಿರೇಕೆರೂರ: ನನ್ನ ಬೆಳೆ ನನ್ನ ಹಕ್ಕು ಘೋಷಣೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರೇ ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ರೈತ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ದಾಖಲಿಸುವ ಪ್ರಕ್ರಿಯೆ ತಾಲೂಕಿನಲ್ಲಿ ಪ್ರಗತಿ ಹಂತದಲ್ಲಿದೆ. ಉಳಿದ ಎಲ್ಲ ರೈತರು ಸಹ ಸೆ.10ರ ಒಳಗಾಗಿ ಕೂಡಲೇ ತಮ್ಮ ಬೆಳೆ ವಿವರ ದಾಖಲಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಆರ್.ಎಚ್.ಭಾಗವಾನ್ ಮನವಿ ಮಾಡಿದರು.
ತಾಲೂಕಿನ ಆಲದಗೇರಿ ಗ್ರಾಮದ ಸರ್ವೇ ನಂ. 232ರ ಜಮೀನಿನಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿ, ರೈತ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸ್ವತಃ ಬೆಳೆ ವಿವರ ದಾಖಲಿಸಿ ಮಾತನಾಡಿದರು.ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಈ ಕಾರ್ಯ ಅತ್ಯಂತ ಉಪಯುಕ್ತವಾಗಿದೆ. ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳ ದಾಖಲೆ ಪಹಣಿಯಲ್ಲಿ ತಪ್ಪಾಗಿದ್ದರೆ ರೈತರು ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಳೆಸಾಲ, ಸಹಾಯಧನ ಸೇರಿ ಸರ್ಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಸ್ವತಃ ರೈತರೇ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ತಮ್ಮ ಬೆಳೆಗಳ ವಿವರ ದಾಖಲಿಸುವ ವ್ಯವಸ್ಥೆ ಮಾಡಿದೆ ಎಂದರು.
ರೈತರು ತಮ್ಮ ಮೊಬೈಲ್ ಮೂಲಕ ಬೆಳೆಗಳ ವಿವರಣೆ ದಾಖಲಿಸುವುದರಿಂದ ಯಾರಿಗೂ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಹಿತಿ ದಾಖಲಾಗುವುದಿಲ್ಲ ಮತ್ತು ರೈತರು ಸೌಲಭ್ಯದಿಂದ ವಂಚಿತರಾಗುವುದು ತಪ್ಪುತ್ತದೆ. ಸರ್ಕಾರದ ಸೌಲಭ್ಯದಿಂದ ವಂಚಿತರಾಗುವುದಿಲ್ಲ ಎಂದು ತಿಳಿಸಿದರು. ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಪ್ಲೇಸ್ಟೊರ್ ಮೂಲಕ ರೈತರ ಬೆಳೆ ಸಮೀಕ್ಷೆ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ರೈತರ ಹೆಸರು, ಮೊಬೈಲ್ ಸಂಖ್ಯೆ, ಸರ್ವೇ ನಂಬರ್, ಕ್ಷೇತ್ರ, ಬೆಳೆ ವಿವರ ದಾಖಲಿಸಿ ಬೆಳೆಯ ಛಾಯಾಚಿತ್ರ ಅಪ್‌ಲೋಡ್ ಮಾಡಬೇಕು. ಬೆಳೆ ದೃಢೀಕರಣ ಮಾಡಿಕೊಳ್ಳಬೇಕು. ಮುಖ್ಯವಾಗಿ ಈಗಾಗಲೇ ಕಟಾವು ಮಾಡುತ್ತಿರುವ ಹೆಸರು, ಉದ್ದು, ಅಲಸಂದಿ ಮತ್ತು ಕಟಾವು ಹಂತದಲ್ಲಿರುವ ಶೇಂಗಾ ಇತರೇ ಬೆಳೆಗಳನ್ನು ಕಟಾವು ಪೂರ್ವದಲ್ಲಿಯೇ ದಾಖಲಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಈ ವೇಳೆ ಕೃಷಿ, ಕಂದಾಯ, ಗ್ರಾಪಂ ನೌಕರರು ಸೇರಿದಂತೆ ಮಾಹಿತಿ ಇರುವ ಯಾರದಾದರೂ ಸಹಾಯ ಪಡೆಬಹುದುಕೊಂಡು ರೈತ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಬೆಳೆ ವಿವಿರ ದಾಖಲಿಸಬಹುದು ಎಂದು ಹೇಳಿದರು.
ಈ ವೇಳೆ ಕಂದಾಯ ಇಲಾಖೆಯ ನಾಗರಾಜ ಕಟ್ಟಿಮನಿ, ಶಿವಕುಮಾರ ಬಣಕಾರ, ರೈತರಾದ ದಾನಪ್ಪ ಗೌಳಿ, ಪಿ.ಆರ್. ರಮೇಶ ಮೇದೂರು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.