ಶಿಕ್ಷಕನಿಂದ ನಿತ್ಯ ಯೋಗ ಯಾಗ

•ನಾಲ್ಕು ದಶಕಗಳಿಂದ ಯೋಗ ಪ್ರಚಾರ•50,000ಕ್ಕೂ ಹೆಚ್ಚು ಜನರಿಗೆ ಯೋಗ ತರಬೇತಿ

Team Udayavani, Jun 21, 2019, 8:47 AM IST

haveri-tdy-1..

ಹಾವೇರಿ: ‘ಸರ್ವರೋಗಗಳಿಗೂ ಯೋಗವೇ ಮದ್ದು. ನೀವೆಲ್ಲ ಯೋಗವನ್ನು ಮುದ್ದು ಮಾಡಿ ಕಲಿಯಿರಿ. ಯೋಗ ನಿಮ್ಮ ಆರೋಗ್ಯಕ್ಕೆ ತರಲಿದೆ ಸುಯೋಗ. ಯೋಗ ಮಾಡಿ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ.’ -ಹೀಗೆ ಹತ್ತು ಹಲವು ರೀತಿಯಲ್ಲಿ ಯೋಗದ ಮಹತ್ವವನ್ನು ನಾಲ್ಕು ದಶಕಗಳಿಂದ ನಿರಂತರವಾಗಿ ಜನರಿಗೆ ತಿಳಿಸುತ್ತ ಯೋಗವನ್ನೇ ತಮ್ಮ ಜೀವನದ ಸಂಗಾತಿಯನ್ನಾಗಿಸಿಕೊಂಡ ಈ ಅಪರೂಪದ ಯೋಗಪಟುವಿನ ಹೆಸರು ರಾಮನಗೌಡ ಶಿವನಗೌಡ ಪಾಟೀಲ.

ಇವರು ಯೋಗ ಶಿಬಿರಗಳ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಆಶಾ ಕಾರ್ಯಕರ್ತರಿಗೆ, ಪೊಲೀಸರಿಗೆ, ಕುಸ್ತಿಪಟುಗಳಿಗೆ, ಎನ್‌ಸಿಸಿ ಕೆಡೆಟ್‌ಗಳಗೆ, ಸರ್ಕಾರಿ ನೌಕರರಿಗೆ ಅಷ್ಟೇ ಅಲ್ಲ ಸಹಜ ಹೆರಿಗೆಗಾಗಿ ಗರ್ಭಿಣಿಯರಿಗೂ ವಿಶೇಷ ಯೋಗ ತರಬೇತಿ ನೀಡಿದ್ದಾರೆ. 40ವರ್ಷಗಳಿಂದ ಯೋಗ ತರಬೇತಿ ನೀಡುತ್ತ, ಯೋಗದ ಬಗ್ಗೆ ಜನರಲ್ಲಿ ಜಾಗೃತಿ, ಮಹತ್ವ ತಿಳಿಸುತ್ತ ಬಂದ ಪಾಟೀಲರು, ಈ ವರೆಗೆ 50,000ಕ್ಕೂ ಅಧಿಕ ಜನರಿಗೆ ಯೋಗ ತರಬೇತಿ ನೀಡಿದ್ದಾರೆ.

ಬೆಳಗಾವಿ, ಉತ್ತರಕನ್ನಡ, ಗದಗ, ಹುಬ್ಬಳ್ಳಿ, ಧಾರವಾಡ ಹೀಗೆ ಉತ್ತರ ಕರ್ನಾಟಕದಾದ್ಯಂತ ಅತಿಹೆಚ್ಚು ಶಿಬಿರಗಳಲ್ಲಿ ನಡೆಸಿ ತರಬೇತಿ ನೀಡಿದ್ದಾರೆ. ಬೆಳಗಾವಿ ವಿಭಾಗ ಮಟ್ಟದ ಶಿಬಿರದಲ್ಲಿ ಇವರು ಶಿಕ್ಷಕರಿಗೆ ಯೋಗಾಭ್ಯಾಸ ಮಾಡಿಸಿ ಶಿಕ್ಷಕರಿಗೇ ‘ಯೋಗಗುರು’ ಎನಿಸಿದ್ದಾರೆ.

ಸೇವಾದಳದಲ್ಲಿ ಯೋಗದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ರಾಜ್ಯದಾದ್ಯಂತ ನೂರಾರು ಶಿಬಿರಗಳನ್ನು ಮಾಡಿ ಯೋಗದ ಕುರಿತು ಜಾಗೃತಿ ಮೂಡಿಸಿ ತರಬೇತಿ ನೀಡಿದ್ದಾರೆ. ಅಷ್ಟೇಅಲ್ಲದೆ ನಿಯತಕಾಲಿಕೆಗಳು, ಪುಸ್ತಕಗಳ ಮೂಲಕವೂ ಯೋಗದ ಮಹತ್ವದ ಬಗ್ಗೆ ತಿಳಿಸುವ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಪ್ರತಿ ತರಬೇತಿಯಲ್ಲಿ ದೇಹದ ಯಾವ ತೊಂದರೆ ನಿವಾರಣೆಗೆ ಯಾವ ಯೋಗ ಸೂಕ್ತ ಎಂಬ ಮಾಹಿತಿಯನ್ನೂ ನೀಡುವುದು ಇವರ ವಿಶೇಷತೆಗಳಲ್ಲೊಂದಾಗಿದೆ.

ಎಲ್ಲ ಆಸನಗಳೂ ಕರಗತ: ಆರ್‌.ಎಸ್‌. ಪಾಟೀಲ ಅವರು 70ಕ್ಕೂ ಹೆಚ್ಚು ಆಸನಗಳನ್ನು ಸುಲಲಿತವಾಗಿ ಮಾಡಬಲ್ಲವರಾಗಿದ್ದಾರೆ. ಸೂತ್ರನೀತಿ, ಜಲನೀತಿ, ವಮನದಾತುನಂಥ ನಿಸರ್ಗ ಚಿಕಿತ್ಸೆಯ ಮಾಹಿತಿ ಇವರಲ್ಲಿದೆ. ಕಠಿಣ ಎನಿಸುವಂಥ ತ್ರಿವಿಕ್ರಮಾಸಾನ, ದೂರ್ವಾಸಾನ, ಮಯೂರಾಸನ, ನಟರಾಜಾಸನಗಳು ಸಹ ಇವರಿಗೆ ಬಾಳೆಹಣ್ಣು ಸುಲಿದಷ್ಟೇ ಸುಲಭ.

ದೇಹದ ಯಾವ ತೊಂದರೆ ನಿವಾರಣೆಗೆ ಯಾವ ಆಸನ ಸೂಕ್ತ ಎಂಬ ಮಾಹಿತಿ ಇವರ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದಿದೆ. ಇವರ ಬಳಿ ಏನಾದರೂ ತೊಂದರೆ ಎಂದು ಹೋದರೆ, ದೇಹದ ಸಮಸ್ಯೆ ಕೇಳುತ್ತಿದ್ದಂತೆ ಇಂಥ ಆಸನ ಮಾಡಿ ಎಂದು ಇದ್ದ ಸ್ಥಳದಲ್ಲಿಯೇ ಮಾಡಿ ತೋರಿಸುವ ಚಾಕಚಕ್ಯತೆ ಇವತ್ತಿನ 68ರ ಇಳಿ ವಯಸ್ಸಿನಲ್ಲಿಯೂ ಮಾಸಿಲ್ಲ.

ಯೋಗ ಕಲಿಸಿ ಹಣ ಮಾಡುವ ಹಂಬಲ ಇವರಲಿಲ್ಲ. ಯಾರು ಕರೆದರೂ ಸಮಯ ಹೊಂದಿಸಿಕೊಂಡು ತರಬೇತಿ ನೀಡುತ್ತಾರೆ. ಮನೆಗೆ ಬಂದು ದೈಹಿಕ ತೊಂದರೆ ಹೇಳಿಕೊಂಡವರಿಗೆ ಉಚಿತವಾಗಿ ಮಾರ್ಗದರ್ಶನ ಮಾಡುತ್ತಾರೆ. ವೃತ್ತಿಯಿಂದ ಸಹಶಿಕ್ಷಕರಾಗಿದ್ದು ಪ್ರವೃತ್ತಿಯಲ್ಲಿ ಇವರು ಉತ್ತಮ ಯೋಗಪಟು. ಯೋಗವೇ ಇವರ ಹವ್ಯಾಸವಾಗಿದೆ.

ಸ್ವಚಿಕಿತ್ಸೆಗಾಗಿ ಕಲಿತ ಯೋಗ: ರಾಣಿಬೆನ್ನೂರು ತಾಲೂಕು ಉಕ್ಕುಂದದಲ್ಲಿ ಜನಿಸಿದ ಆರ್‌.ಎಸ್‌. ಪಾಟೀಲರು, ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ಅವರಿವರ ಆಶ್ರಯದಲ್ಲಿ ಬೆಳೆದರು. ಈ ಸಂದರ್ಭದಲ್ಲಿ ಅವರಿಗೆ ಅಸ್ತಮಾ ರೋಗ ಅಂಟಿಕೊಂಡು ಉಸಿರಾಟ ಸಮಸ್ಯೆ ಉಂಟಾಯಿತು. ಬಡವರಾದ ಪಾಟೀಲರು, ತಮ್ಮ ಕೈಲಾದಷ್ಟು ಖರ್ಚು ಮಾಡಿ ವೈದ್ಯರಿಗೆ ತೋರಿಸಿದರೂ ಅದಕ್ಕೆ ಶಾಶ್ವತ ಪರಿಹಾರ ಸಿಗಲ್ಲಿಲ್ಲ.

ಆಗ ಪಾಟೀಲರು ತಾವು ಕೇಳಿ ತಿಳಿದ ಯೋಗದ ಬಗ್ಗೆ ಹೆಚ್ಚು ಆಸಕ್ತಿ ತೋರಿ ಪುಸ್ತಕಗಳ ಹುಡುಕಾಟ ನಡೆಸಿ ಅದರಲ್ಲಿನ ಅಂಶಗಳನ್ನು ಸ್ವತಃ ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡರು. ಮುಂದೆ ಇವರಿಗೆ ಪುಸ್ತಕಗಳೇ ಯೋಗ ಗುರುವಾದವು. ಸ್ವತಃ ತಮಗೆ ತಗುಲಿದ ಕಾಯಿಲೆಗೆ ಯೋಗದ ಮೂಲಕ ಮದ್ದು ಹುಡುಕಿಕೊಂಡ ಪಾಟೀಲರಿಗೆ, ಯೋಗ ಅವರ ಆರೋಗ್ಯಕರ ದೇಹಕ್ಕೆ, ಜೀವನಕ್ಕೂ ಸ್ಫೂರ್ತಿಯಾಗಿ ನಿಂತುಕೊಂಡಿತು.

ಹಾವೇರಿ ಹುಕ್ಕೇರಿಮಠದ ಮಾಧ್ಯಮಿಕ ಶಾಲೆಯಲ್ಲಿ ಸಮಾಜವಿಜ್ಞಾನದ ಸಹಶಿಕ್ಷಕರಾಗಿದ್ದ ಇವರು ಈಗಲೂ ‘ಯೋಗ ಗುರು’ ಎಂದೇ ಚಿರಪರಿಚಿತರಾಗಿದ್ದಾರೆ. ನಾಲ್ಕು ದಶಕದಿಂದ ಯೋಗದ ಬಗ್ಗೆ ಸಾಮಾಜಿಕ ಜಾಗೃತಿ, ತರಬೇತಿ ನೀಡುತ್ತ ಬಂದಿರುವ ಇವರು, ತಮ್ಮ ಸಹಶಿಕ್ಷಕ ವೃತ್ತಿಯ ನಿವೃತ್ತಿಯ ಬಳಿಕವೂ ಮೊರಾರ್ಜಿ ಶಾಲೆಯಲ್ಲಿ ಯೋಗ ಶಿಕ್ಷಕರಾಗಿ ತಮ್ಮ ಯೋಗ ಸೇವೆ ನಿರಂತರವಾಗಿಟ್ಟುಕೊಂಡಿದ್ದಾರೆ. ತನ್ಮೂಲಕ ಯೋಗದ ಮಹತ್ವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ 5ನೇ ಯೋಗ ದಿನ ಆಚರಣೆ ಅಂಗವಾಗಿ ಜಿಲ್ಲಾಡಳಿತ ಜೂ. 21ರಂದು ನಗರದ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಾಗೂ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾಡಳಿತ, ಜಿಲ್ಲಾ ಆಯುಷ್‌ ಇಲಾಖೆ ಹಾಗೂ ವಿವಿಧ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಅಂದಾಜು 1500 ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡಲು ಅನುಕೂಲವಾಗುವಂತೆ ಕ್ರೀಡಾಂಗಣ ಸ್ವಚ್ಛಗೊಳಿಸಲಾಗಿದ್ದು ಇದೇ ಸ್ಥಳದಲ್ಲಿ ಸಭಾ ಕಾರ್ಯಕ್ರಮ ನಡೆಸಲು ವೇದಿಕೆ ಸಹ ನಿರ್ಮಿಸಲಾಗಿದೆ.

ಜೂ. 21ರಂದು ಬೆಳಗ್ಗೆ 6:30ಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶಗೊಳ್ಳಬೇಕು. ವಿಶ್ವದಾದ್ಯಂತ ಏಕಕಾಲದಲ್ಲಿ ಬೆಳಗ್ಗೆ 7ಗಂಟೆಯಿಂದ 7:40ರ ವರೆಗೆ ನಡೆಯುವ ಯೋಗಾಭ್ಯಾಸ ಕಾಲಕ್ಕೆ ಇಲ್ಲಿಯೂ ಯೋಗ ಪ್ರದರ್ಶನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಲಘು ಉಪಹಾರ ವ್ಯವಸ್ಥೆ, ಕ್ರೀಡಾಂಗಣದ ಸ್ವಚ್ಛತೆ ಸೇರಿದಂತೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಆಯುಷ್‌ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಸಮನ್ವಯತೆಯಿಂದ ಮಾಡಿಕೊಂಡಿವೆ. ಯೋಗ ಪ್ರದರ್ಶನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಯೋಗ ಮ್ಯಾಟ್‌ನೊಂದಿಗೆ ಭಾಗವಹಿಸಲು ಸಂಘಟಕರು ಕೋರಿದ್ದಾರೆ.

ಕಾರ್ಯಕ್ರಮ ವಿವರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದಖಾನ್‌ ಉದ್ಘಾಟಿಸುವರು. ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಗೂ ಸಚಿವ ಆರ್‌. ಶಂಕರ್‌ ಭಾಗವಹಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಎಸ್‌.ವಿ.ಸಂಕನೂರ, ಪ್ರದೀಪ ಶೆಟ್ಟರ್‌, ಶಾಸಕರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ, ವಿರುಪಾಕ್ಷಪ್ಪ ಬಳ್ಳಾರಿ, ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ ಹಾಗೂ ತಾಪಂ ಅಧ್ಯಕ್ಷ ಕರಿಯಲ್ಲಪ್ಪ ಉಂಡಿ ಭಾಗವಹಿಸುವರು.

 

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.