ಧರಣಿ ಸ್ಥಳಕ್ಕೆ ಡಿಸಿ ಭೇಟಿ, ರೈತರಿಂದ ಮನವಿ
•ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಧರಣಿ
Team Udayavani, Jul 20, 2019, 11:54 AM IST
ಸವಣೂರು: ಉಪವಿಭಾಗಾಧಿಕಾರಿಗಳ ಕಚೇರಿ ಎದುರು ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿದರು.
ಸವಣೂರು: ರೈತರ ನಿರಂತರ ಶಾಂತಿಯುತ ಧರಣಿ ಸ್ಥಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಭೇಟಿ ನೀಡಿ, ರೈತ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ಸ್ವೀಕರಿಸಿದರು.
ಸವಣೂರು, ಶಿಗ್ಗಾವಿ ಹಾಗೂ ಹಾನಗಲ್ಲ ತಾಲೂಕುಗಳ ಕೆರೆಗಳ ಅಭಿವೃದ್ಧಿ, ಜಲಾಶಯ ನಿರ್ಮಾಣ, ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸವಣೂರು ಉಪ ವಿಭಾಗಾಧಿಕಾರಿ ಕಾರ್ಯಾಲಯದ ಎದುರಿಗೆ ನರಗುಂದ ಮಾದರಿಯಲ್ಲಿ ನಡೆಸುತ್ತಿರುವ ನಿರಂತರ ಶಾಂತಿಯುತ ಧರಣಿ ಶುಕ್ರವಾರ 23ನೇ ದಿನಕ್ಕೆ ಮುಂದುವರಿಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ರೈತರೊಂದಿಗೆ ಚರ್ಚಿಸಿ, ರೈತರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಕುರಿತು ಸರ್ಕಾರದ ಗಮನಕ್ಕೆ ತಂದು ಅಂತರ್ಜಲದ ಹೆಚ್ಚಳ ಹಾಗೂ ಡ್ಯಾಂ ನಿರ್ಮಾಣ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಧರಣಿ ನೇತೃತ್ವ ವಹಿಸಿರುವ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಬಾರ್ಕಿ ಮಾತನಾಡಿ, ಸವಣೂರು ತಾಲೂಕು ಮನ್ನಂಗಿ, ಕುಣಿಮೆಳ್ಳಿಹಳ್ಳಿ ಮಧ್ಯದಲ್ಲಿ ಬಾಜಿರಾಯನ ಹಳ್ಳಕ್ಕೆ ಪೂರ್ವ, ಪಶ್ಚಿಮ ಮುಖವಾಗಿ ಅಡ್ಡಲಾಗಿ ‘ಯು’ ಆಕಾರದಲ್ಲಿ 2000 ಎಕರೆ ಪ್ರದೇಶದಲ್ಲಿ ಜಲಾಶಯ ನಿರ್ಮಿಸಿ, ಜಲಾಶಯಕ್ಕೆ ಹಲಸೂರ ವರದಾ ಬ್ಯಾರೇಜ್‌ನಿಂದ ಸುರಂಗ ಮಾರ್ಗ ಮೂಲಕ ನೀರು ಸಂಗ್ರಹಿಸುವ ಮೂಲಕ ಜಲಾಶಯದಿಂದ ಸವಣೂರು, ಶಿಗ್ಗಾವಿ ಏತ ನೀರಾವರಿಗೆ ಸಹಕಾರಿ ಯಾಗಲಿದೆ ಎಂಬ ಬೇಡಿಕೆ ಸೇರಿದಂತೆ 18 ವಿವಿಧ ಬೇಡಿಕೆ ವಿವರಿಸಿದರು.
ಉಪ ವಿಭಾಗಾಧಿಕಾರಿ ಬೋಯಾರ್ ಹರ್ಷಲ್ ನಾರಾಯಣರಾವ್, ತಹಸೀಲ್ದಾರ್ ವಿ.ಡಿ.ಸಜ್ಜನ್, ರೈತ ಸಂಘದ ಪದಾಧಿಕಾರಿಗಳಾದ ರಾಮಣ್ಣ ಅಗಸರ, ಬಾಬನಸಾಬ್ ರಾಯಚೂರ, ಪಾಂಡಪ್ಪ ತಿಪ್ಪಕ್ಕನವರ, ಶಿವಾಜಿ ಮಾದಾಪೂರ, ಹೊನ್ನಪ್ಪ ಮರೆಮ್ಮನವರ, ನಾಗೇಶ ದೊಡ್ಡಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.