ಬಸ್ ಸಂಚಾರದಲ್ಲಿ ಮತ್ತೆ ಇಳಿಮುಖ
ಹಿರೇಕೆರೂರ ಮಾರ್ಗದಲ್ಲಿ ಬಸ್‌ಗೆ ಕಲ್ಲೇಟು-ಚಾಲಕನಿಗೆ ಗಾಯ !ಜಿಲ್ಲೆಯಲ್ಲಿ ಕೇವಲ 86 ಬಸ್‌ಗಳ ಸಂಚಾರ
Team Udayavani, Apr 20, 2021, 8:19 PM IST
ಹಾವೇರಿ: ಸಾರಿಗೆ ನೌಕರರ ಮುಷ್ಕರದ 13ನೇ ದಿನವಾದ ಸೋಮವಾರ ಬಸ್‌ಗಳ ಸಂಚಾರದಲ್ಲಿ ಮತ್ತೆ ಇಳಿಮುಖವಾಗಿದೆ. ರವಿವಾರ ಕರ್ತವ್ಯಕ್ಕೆ ಹಾಜರಾಗಿದ್ದವರು ಸೋಮವಾರ ಗೈರಾಗಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ 86 ಬಸ್ ರಸ್ತೆಗಿಳಿದಿದ್ದವು. ರವಿವಾರ 140 ಬಸ್ ಸಂಚರಿಸಿದ್ದರಿಂದ ಮುಷ್ಕರದ ನಡುವೆಯೂ ಪ್ರಯಾಣಿಕರಿಗೆ ಅನುಕೂಲವಾಗಿತ್ತು. 280ಕ್ಕೂ ಹೆಚ್ಚು ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು. ಆದರೆ, ಅವರಲ್ಲಿ ಅನೇಕರು ಸೋಮವಾರ ಮತ್ತೆ ಕರ್ತವ್ಯಕ್ಕೆ ಹಾಜರಾಗಿಲ್ಲ. ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರು ಕರ್ತವ್ಯಕ್ಕೆ ಹಾಜರಾದವರ ಮನವೊಲಿಸಿ ಮತ್ತೆ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಒಂದೆರಡು ದಿನ ಕೆಲಸಕ್ಕೆ ಹಾಜರಾಗಬೇಡಿ, ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ ಕೆಲಸಕ್ಕೆ ಹೋಗುವವರನ್ನು ತಡೆದಿದ್ದಾರೆ. ಇದಕ್ಕೆ ಒಪ್ಪಿ ಅನೇಕರು ಕೆಲಸಕ್ಕೆ ಹಾಜರಾಗಿಲ್ಲ. 86 ಬಸ್ ಸಂಚಾರ: ಜಿಲ್ಲೆಯ 6 ಡಿಪೋಗಳಿಂದ ಸೋಮವಾರ 86 ಬಸ್ ಸಂಚರಿಸಿದವು. ಹಾವೇರಿಯಿಂದ-14, ಹಿರೇಕೆರೂರು-28, ರಾಣಿಬೆನ್ನೂರು-10, ಹಾನಗಲ್ಲ-8, ಬ್ಯಾಡಗಿ-10, ಸವಣೂರು ಡಿಪೋದಿಂದ 8 ಬಸ್‌ಗಳು ಸಂಚರಿಸಿದವು. ರವಿವಾರ ಎಲ್ಲ ಡಿಪೋಗಳಿಂದಲೂ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಿದ್ದವು.
ರಸ್ತೆಗಿಳಿದ ಬಸ್‌ಗಳ ಸಂಖ್ಯೆ ಕಡಿಮೆಯಾದ್ದರಿಂದ ಸೋಮವಾರ ಖಾಸಗಿ ವಾಹನಗಳು ಮತ್ತೆ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ಮಾಡಿದವು. ಬಸ್ ನಿಲ್ದಾಣದಲ್ಲಿ ನಿಂತು ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸಿದವು. ಟೆಂಪೋ, ಟ್ರ್ಯಾಕ್ಸ್, ಟಂಟಂ ವಾಹನಗಳ ಮೂಲಕ ಸಾರ್ವಜನಿಕರು ಸಂಚರಿಸುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.