ಸೇವಾ ತೆರಿಗೆ ಪಾವತಿ ವಿಳಂಬ; ನೋಟಿಸ್ ನೀಡಲು ನಗರಸಭೆ ತೀರ್ಮಾನ
ಧಾರ್ಮಿಕ ಕಾರ್ಯದ ಉಪಯೋಗಕ್ಕೆ ಮಂಜೂರು ಮಾಡುವ ಕುರಿತು ಚರ್ಚೆ ನಡೆಯಿತು
Team Udayavani, Feb 9, 2022, 6:19 PM IST
ಹಾವೇರಿ: 2017-18ರಿಂದ 2020-21ನೇ ಸಾಲಿನ ವರೆಗೆ ಮಳಿಗೆ ಬಾಡಿಗೆಗೆ ಸಂಬಂಧಿಸಿದಂತೆ ಜಿಎಸ್‌ಟಿ (ಸೇವಾ ತೆರಿಗೆ) ಈವರೆಗೂ ಪಾವತಿಸಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಿ, ಅವರ ಕಡೆಯಿಂದಲೇ ತುಂಬಿಸಲು ವಕೀಲರ ಮೂಲಕ ನೋಟಿಸ್ ನೀಡಲು ಸ್ಥಳೀಯ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. 2017-18ರಿಂದ 2020-21ನೇ ಸಾಲಿನ ವರೆಗೆ ಸೇವಾ ತೆರಿಗೆ ಪಾವತಿಸಲು ರಿಟರ್ನ್ ಫೈಲ್ ಮಾಡಿಲ್ಲ. ಸರ್ಕಾರದ ಆದೇಶದ ಪ್ರಕಾರ ಲೇಟ್ ಫೀ ಹಾಗೂ ದಂಡ ಸಮೇತ ಸರ್ಕಾರಕ್ಕೆ ಭರಣೆ ಮಾಡುವ ಸಂಬಂಧ ನಡೆದ ಚರ್ಚೆ ವೇಳೆ ಪ್ರತಿಕ್ರಿಯಿಸಿದ ಶಾಸಕ ನೆಹರು ಓಲೇಕಾರ, ಸೇವಾ ತೆರಿಗೆ ಪಾವತಿಯಲ್ಲಿ ವಿಳಂಬ ಮಾಡಿದವರನ್ನೇ ಹೊಣೆಗಾರರನ್ನಾಗಿ ಮಾಡಿ, ಸಂಬಂಧಿ ಸಿದ ಅ ಧಿಕಾರಿ, ಸಿಬ್ಬಂದಿ ಗಳೇ ತುಂಬಬೇಕು ಎಂದು ವಕೀಲರ ಮೂಲಕ ನೋಟಿಸ್ ಕೊಡಿಸಬೇಕು. ಅಗತ್ಯ ಬಿದ್ದರೆ ಪ್ರಕರಣ ದಾಖಲಿಸ ಬೇಕೆಂದು ಸೂಚಿಸಿದರು.
ವಿವಿಧ ಕಾಮಗಾರಿಗಳಿಗಾಗಿ ಟೆಂಡರ್ ಕರೆದಿದ್ದ ಜಾಹೀರಾತು ಪ್ರಕಟಣೆಯ ಪೇಪರ್ ಬಿಲ್ ಬಾಕಿ ಉಳಿದುಕೊಂಡಿದೆ. 2011ರಿಂದ ಸುಮಾರು 30 ಲಕ್ಷದಷ್ಟು ಬಿಲ್ ಪಾವತಿಸಬೇಕಿದೆ. ಈ ಕೂಡಲೇ ಎಲ್ಲ ಕಡತಗಳನ್ನು ಪರಿಶೀಲಿಸಿ ಬಾಕಿ ಇರುವ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಸಂಜೀವಕುಮಾರ ಸೂಚಿಸಿದರು.
ಹಜರತ್ ಮೆಹಬೂಬ ಸುಬ್‌ಹಾನಿ ದರ್ಗಾ ಮುಂದೆ ಇರುವ ಸರ್ಕಾರಿ ಜಾಗೆಯನ್ನು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಕಮಿಟಿ ಮತ್ತು ಹಜರತ್ ಮೆಹಬೂಬ ದರ್ಗಾ ಕಾರ್ಯಕಾರಿ ಸಮಿತಿಯವರಿಗೆ ಧಾರ್ಮಿಕ ಕಾರ್ಯದ ಉಪಯೋಗಕ್ಕೆ ಮಂಜೂರು ಮಾಡುವ ಕುರಿತು ಚರ್ಚೆ ನಡೆಯಿತು. ಆಗ ಕೆಲ ಸದಸ್ಯರು ಈ ಪ್ರಕರಣ ನ್ಯಾಯಾಲಯದ ಲ್ಲಿದ್ದು, ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಆಗ ಕೆಲವರು ಇದು ನ್ಯಾಯಾಲಯದಲ್ಲಿ ಇಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ನೆಹರು ಓಲೇಕಾರ, ಎರಡೂ ಕಡೆಯ ಕಮಿಟಿಯವರಿಗೆ ನೋಟಿಸ್ ಕೊಟ್ಟು ಅವರನ್ನು ಕರೆಸಿ ನ್ಯಾಯಾಲಯದಲ್ಲಿ ವ್ಯಾಜ್ಯದ ಬಗ್ಗೆ ಚರ್ಚಿಸಿ ವ್ಯಾಜ್ಯ ಹೂಡಿಲ್ಲದರ ಬಗ್ಗೆ ಖಾತ್ರಿಪಡಿಸಿಕೊಂಡು ಮಂಜೂರು ಮಾಡುವಂತೆ ಸೂಚಿಸಿದರು.
ಹಾವೇರಿ ವ್ಯಾಪ್ತಿಗೆ ಒಳಪಡದೇ ಇರುವ ಆಸ್ತಿಗೆ ಕಂದಾಯ ತುಂಬಿಸಿಕೊಳ್ಳ ಲಾಗಿದ್ದು, ಅದನ್ನು ಈಗ ಮರಳಿ ತುಂಬಿ ರುವ ಆಸ್ತಿ ಮಾಲಿಕರಿಗೆ ಭರಣೆ ಮಾಡ ಬೇಕಿದೆ ಎಂಬ ವಿಷಯದ ಕುರಿತು ಚರ್ಚೆ ವೇಳೆ ತಪ್ಪಾಗಿ ಆಸ್ತಿ ಕಂದಾಯ ಭರಣೆ ಮಾಡಿಸಿಕೊಂಡಿರುವ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು, ವಾಡ್ ನಂ. 31ನೇ ಲದ್ವಾ ಲೇಔಟ್‌ನ್ನು ಶ್ರೀ ಹಾದಿ ಬಸವಣ್ಣ ನಗರ ಎಂದು ಮರು ನಾಮಕರಣ ಹಾಗೂ ವಾರ್ಡ್ ನಂ. 26 ಹಳೆ ಪಿ.ಬಿ. ರಸ್ತೆಯಲ್ಲಿ ಶಿವಲಿಂಗೇಶ್ವರ ಸರ್ಕಲ್ ಎಂದು ನಾಮಕರಣ ಮಾಡುವ ಕುರಿತು ತೀರ್ಮಾನಿಸಲಾಯಿತು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಜಾಹೀದಾಬಾನು ಅಬ್ದುಲ್ ರಜಾಕ ಜಮಾದಾರ, ಸದಸ್ಯರು ಇದ್ದರು. ಪೌರಾಯುಕ್ತ ಪಿ.ಎನ್. ಚಲವಾದಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.