ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಚಾಲನೆ
Team Udayavani, Dec 30, 2020, 4:05 PM IST
ಬಂಕಾಪುರ: ನಿರ್ಭಯತೆಯೇ ಜೀವನದರಹಸ್ಯ. ಮುಕ್ತಿ ಎಂದರೆ ಭಯದ ವಿನಾಶ.ನಿಮ್ಮನ್ನು ನೀವು ಜಯಸಿದರೆ ಆಗ ಜಗತ್ತೇನಿಮ್ಮದಾಗುತ್ತದೆ. ಸತ್ಯ, ನಿಷ್ಠೆ, ಪಾವಿತ್ರತೆ,ನಿಸ್ವಾರ್ಥ ಗುಣವುಳ್ಳವರನ್ನು ಯಾವ ಶಕ್ತಿಯೂ ನಿಗ್ರಹಿಸಲಾರದು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.
ಬಾಡ ಗ್ರಾಮದ ಕನಕ ಕಲಾಭವನದಲ್ಲಿ ನಡೆದ ಜಿಲ್ಲಾ ಯುವಜನೋತ್ಸವದಲ್ಲಿಮಾತನಾಡಿದರು. ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಯುವಜನೋತ್ಸವನಡೆಸಲಾಗುತ್ತಿದೆ. ಅದರ ಅಂಗವಾಗಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ಇತರ ಜನಪದ ಕಲೆಗಳನ್ನುಆಯೋಜಿಸಿ ಅದರ ಪ್ರತಿಭೆಗಳನ್ನುಗ್ರಾಮ ಮಟ್ಟದಿಂದ ರಾಜ್ಯ, ರಾಷ್ಟ್ರಮಟ್ಟದವರೆಗೆ ಅನಾವರಣಗೊಳಿಸುವುದೇಯುವಜನೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಮಾತನಾಡಿ, ಪ್ರಜ್ಞಾವಂತ ಯುವಕಲಾ ಪ್ರತಿಭೆಗಳನ್ನು ಗುರುತಿಸುವಉದ್ದೇಶದಿಂದ ಈ ಯುವಜನೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಯುವಕರುಹೆಚ್ಚಾಗಿ ಇದರಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆತೋರಿಸುವ ಜತೆಗೆ ರಾಜ್ಯ, ರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಪಡೆಯಬೇಕು ಎಂದು ಹೇಳಿದರು.
ಜಿಪಂ ಸದಸ್ಯೆ ಶೋಭಾ ಗಂಜಿಗಟ್ಟಿ, ನಿವೃತ್ತ ಉಪನ್ಯಾಸಕ ಎಸ್.ಎಂ. ಕೋರಿಶೆಟ್ಟರ ತೀರ್ಪುಗಾರರಾದ ಕೆ.ಸಿ. ನಾಗರಜ್ಜಿ, ಕೃಷ್ಣಮೂರ್ತಿ ಗುಂಗೇರಿ,ಕೃಷ್ಣಮೂರ್ತಿ ತಾಳಿಗಟ್ಟಿ, ಬಸವರಾಜ ಶಿಗ್ಗಾವಿ, ರಾಜು ಗಂಜಿಗಟ್ಟಿ ಉಪಸ್ಥಿತರಿದ್ದರು.
ಕಾಟಾಚಾರದ ಕಾರ್ಯಕ್ರಮ : ಅದ್ಧೂರಿಯಾಗಿ ನಡೆಯಬೇಕಾಗಿದ್ದ, ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಕಾಟಾಚಾರದ ಕಾರ್ಯಕ್ರಮವಾಗಿ ಮಾಡಿದಂತಿತ್ತು. ಪ್ರಚಾರದಕೊರತೆಯಿಂದಾಗಿ ಹೇಳಿಕೊಳ್ಳುವಂತಹ ಕಲಾವಿದರುಭಾಗವಹಿಸದೇ ಇರುವುದರಿಂದ ಕಾರ್ಯಕ್ರಮ ಸಪ್ಪೆಯನಿಸಿತು. ಬೆಳಿಗ್ಗೆ 11 ಗಂಟೆಗೆ ನಡೆಯಬೇಕಾದಸಮಾರಂಭ ಅತಿಥಿಗಳು ಬರದ ಕಾರಣ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ, ಸದಸ್ಯೆ ಶೋಭಾ ಇವರಿಬ್ಬರ ಸಮ್ಮುಖದಲ್ಲಿ ಮಧ್ಯಾಹ್ನ 12.45ಕ್ಕೆ ಆರಂಭವಾಯಿತು.ವೇದಿಕೆ ಬಣಗುಡುತ್ತಿತ್ತು. ಸಭೆಯಲ್ಲಿ ಖಾಲಿ ಖುರ್ಜಿಗಳ ಪ್ರದರ್ಶನವಾಯಿತು. ಸಭಾಭವನದಲ್ಲಿ ಪ್ರತಿಧ್ವನಿಯಿಂದಾಗಿಅಥಿತಿಗಳು ಏನು ಹೇಳುತ್ತಿದ್ದಾರೆ ಎಂಬುದು ಪ್ರೇಕ್ಷಕರಿಗೆ ತಿಳಿಯದಂತಾಗಿತ್ತು. ಸ್ಥಳೀಯ ರಾಜ್ಯ, ರಾಷ್ಟ್ರ ಮಟ್ಟದಕಲಾವಿದರಿಗೆ ಆಮಂತ್ರಣ ನೀಡದೇ ಇರುವುದು ವಿಷಾದದ ಸಂಗತಿಯಾಗಿತ್ತು. ಸಂಯೋಜಕರುಲಗುಬಗೆಯಿಂದ ಕಾರ್ಯಕ್ರಮ ಪ್ರದರ್ಶನ ಮಾಡಿ ಮುಗಿಸುವ ಆತುರದಲ್ಲಿದ್ದುದು ಕಂಡು ಬಂದಿತು. ಒಟ್ಟಾರೆಕಲಾವಿದರಿಲ್ಲದ ಯುವ ಸಬಲೀಕರಣ ಕಾರ್ಯಕ್ರಮ ಲೆಕ್ಕಕ್ಕುಂಟು-ಆಟಕ್ಕಿಲ್ಲ ಎನ್ನುವಂತಾಗಿತ್ತು.
ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ 18 ಸ್ಪರ್ಧೆಗಳು ಪ್ರದರ್ಶವಾಗಬೇಕಾಗಿತ್ತು. ಆದರೆ ಅದರಲ್ಲಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿನಡೆಯುವ ಆಶುಭಾಷಣ, ಏಕಾಂತ ನಾಟಕ ರದ್ದು ಪಡಿಸಲಾಗಿದ್ದು, ಉಳಿದ 16 ಸ್ಪರ್ಧೆಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. –ತಿಪ್ಪೇಸ್ವಾಮಿ, ಯುವ ಸಬಲೀಕರಣ ಸಹಾಯಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.