ಫಾಸ್ಟಾಗ್‌ಗೆ ಜಿಲ್ಲೆಯ ಟೋಲ್ ಸಜ್ಜು
Team Udayavani, Nov 24, 2019, 1:06 PM IST
ಹಾವೇರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗದುರಹಿತ ಶುಲ್ಕ ಪಾವತಿಗಾಗಿ “ಫಾಸ್ಟಾಗ್’ ಎಂಬ ಇ-ಟೋಲ್ ವ್ಯವಸ್ಥೆಯನ್ನು ಡಿಸೆಂಬರ್ 1ರಿಂದ ಕಡ್ಡಾಯಗೊಳಿಸಿದ್ದು, ಈ ವ್ಯವಸ್ಥೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿರುವ ಎರಡು ಟೋಲ್ ಕೇಂದ್ರಗಳು ಸಜ್ಜಾಗಿವೆ.
ಜಿಲ್ಲೆಯಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ. 4 ಹಾದು ಹೋಗಿದ್ದು, ಶಿಗ್ಗಾವಿ ತಾಲೂಕು ಬಂಕಾಪುರ ಹಾಗೂ ರಾಣಿಬೆನ್ನೂರು ತಾಲೂಕು ಚಳಗೇರಿಗಳಲ್ಲಿ ಟೋಲ್ ಕೇಂದ್ರಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂರು ವರ್ಷಗಳ ಹಿಂದೆಯೇ ಮೊದಲ ಹಂತವಾಗಿ
ದೇಶದ 275 ಟೋಲ್ ಕೇಂದ್ರಗಳಲ್ಲಿ, ರಾಜ್ಯದ 31 ಕೇಂದ್ರಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳಿಸಿತ್ತು. ಇದರಲ್ಲಿ ಜಿಲ್ಲೆಯ ಈ ಎರಡೂ ಟೋಲ್ ಕೇಂದ್ರಗಳೂ ಸೇರಿದ್ದವು. ಆದರೆ, ಈ ವ್ಯವಸ್ಥೆ ಕಡ್ಡಾಯ ಮಾಡದೆ ಇರುವುದರಿಂದ ಕೆಲವೇ ಕೆಲವುವಾಣಿಜ್ಯ ವಾಹನಗಳ ಮಾಲೀಕರು ಮಾತ್ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಹೀಗಾಗಿ ಈ ವ್ಯವಸ್ಥೆ ಇದ್ದೂ ಇಲ್ಲದಂತಿತ್ತು. ಜನರು ಸರದಿಯಲ್ಲಿ ನಿಂತು ಹಣ ಕೊಟ್ಟು ರಸೀದಿ ಪಡೆದುಕೊಂಡೇ ಮುಂದೆ ಸಾಗುತ್ತಿದ್ದರು. ಈಗ “ಫಾಸ್ಟಾಗ್’ ಕಡ್ಡಾಯಗೊಳಿಸುತ್ತಿರುವುದರಿಂದ ಈ ವ್ಯವಸ್ಥೆಯಲ್ಲಿ ಅತಿಹೆಚ್ಚು ಜನರು ಅಳವಡಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಇದರಿಂದ ಟೋಲ್ ಗಳಲ್ಲಿ ಸರದಿ ಸಾಲಿನ ತಲೆಬಿಸಿ ಇಲ್ಲದೇ ವಾಹನಗಳು ಸರಾಗವಾಗಿ ಸಂಚರಿಸಲಿವೆ.
ಸಕಲ ವ್ಯವಸ್ಥೆ: “ಫಾಸ್ಟಾಗ್’ ಇ-ಟೋಲ್ ವ್ಯವಸ್ಥೆಗಾಗಿ ಈ ಎರಡೂ ಟೋಲ್ ಕೇಂದ್ರಗಳಲ್ಲಿ ಎರಡೂ ಕಡೆ ಈಗಾಗಲೇ ಮಾರ್ಗ ಮೀಸಲಿಟ್ಟಿದ್ದು, ಕ್ಯಾಮೆರಾ, ಸೆನ್ಸಾರ್, ಸರ್ವರ್ ಹಾಗೂ ಇ- ಟೋಲ್ ಕಾರ್ಡ್ ಸೇವಾ ಕೇಂದ್ರ ತೆರೆದಿವೆ. ಈ ವ್ಯವಸ್ಥೆಯನ್ನು ಡಿ. 1ರಿಂದ ಕಡ್ಡಾಯಗೊಳಿಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಉಚಿತವಾಗಿ “ಫಾಸ್ಟಾಗ್’ ನೀಡಲು ನಿರ್ಧರಿಸಿದೆ. ಜತೆಗೆ ಈ “ಫಾಸ್ಟಾಗ್’ ವ್ಯವಸ್ಥೆ ಅಳವಡಿಸಿಕೊಂಡವರಿಗೆ ರಿಯಾಯಿತಿಯೂ ಇರುವುದರಿಂದ ಈ ವ್ಯವಸ್ಥೆಯನ್ನು ಹೆಚ್ಚಿನ ವಾಹನ ಮಾಲೀಕರು ಅಳವಡಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ.
“ಫಾಸ್ಟಾಗ್’ ಇ-ಟೋಲ್ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ಹೆದ್ದಾರಿಯ ಟೋಲ್‌ಗಳಲ್ಲಿ ಸುಂಕ ಪಾವತಿಸಲು ಚಾಲಕರು ನಗದು ಹಣ ಇಟ್ಟುಕೊಳ್ಳುವ ಅಗತ್ಯತೆ ಇಲ್ಲ. ಜತೆಗೆ ಟೋಲ್ ಕೇಂದ್ರಗಳಲ್ಲಿ ಸುಂಕ ಕಟ್ಟಲು ಸಾಲುಗಟ್ಟಿ ನಿಲ್ಲುವ ಪ್ರಮೇಯವೂ ಇಲ್ಲ. ಹೆದ್ದಾರಿಯಲ್ಲಿ ವಾಹನಗಳು ಸರಾಗವಾಗಿ ಸಾಗುವ ಮೂಲಕ ಸಮಯ ಉಳಿತಾಯಕ್ಕೆಈ ವ್ಯವಸ್ಥೆ ಅನುಕೂಲವಾಗಲಿದೆ. ಇದು “ಫಾಸ್ಟಾಗ್’ ಉದ್ದೇಶವೂ ಆಗಿದೆ. ಒಟ್ಟಾರೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎರಡೂ ಟೋಲ್ ಕೇಂದ್ರಗಳು ಫಾಸ್ಟಾಗ್ ವ್ಯವಸ್ಥೆ ಅನುಷ್ಠಾನಕ್ಕೆ ಸಜ್ಜಾಗಿದ್ದು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಯೂ ಹೊಂದಿವೆ.
ಹೊಸ ವ್ಯವಸ್ಥೆಗೆ ಸಿದ್ಧ : ಬಂಕಾಪುರ ಹಾಗೂ ಚಳಗೇರಿ ಟೋಲ್ ಕೇಂದ್ರದಲ್ಲಿ “ಫಾಸ್ಟಾಗ್’ ಇ-ಟೋಲ್‌ಗಾಗಿ ಮೂರು ವರ್ಷಗಳ ಹಿಂದೆಯೇ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕ್ಯಾಮೆರಾ, ಸೆನ್ಸಾರ್‌ಗಳೆಲ್ಲ ಇದೆ. ಕೆಲವೇ ಕೆಲವು ವಾಹನ ಮಾಲೀಕರು ಈ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಈಗ ಕಡ್ಡಾಯ ಹಾಗೂ ರಿಯಾಯಿತಿ ಎರಡೂ ಇರುವುದರಿಂದ ಈ ಎಲ್ಲರೂ ಈ ವ್ಯವಸ್ಥೆ ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ. –ಅನಿಲ ಜೆ., ಟೋಲ್ ಕೇಂದ್ರ ನಿರ್ವಹಣೆ ಅಧಿಕಾರಿ.
ಏನಿದು ಫಾಸ್ಟಾಗ್?: “ಫಾಸ್ಟಾಗ್’ ಎಂದರೆ ಇದು ಇ- ಟೋಲ್ ವ್ಯವಸ್ಥೆಗೆ ಇಟ್ಟ ಹೆಸರು. ರೇಡಿಯೋ ತರಂಗಾಂತರಗಳನ್ನು ಗುರುತಿಸಬಲ್ಲ ಪಟ್ಟಿಯೊಂದು ವಾಹನಗಳಿಗೆ ಅಳವಡಿಸಲಾಗುತ್ತದೆ. ಈ ಪಟ್ಟಿಯನ್ನೇ “ಫಾಸ್ಟಾಗ್’ ಕಾರ್ಡ್ ಎನ್ನಲಾಗುತ್ತದೆ. ನಾಲ್ಕು ಚಕ್ರ ಅಥವಾ ಅದಕ್ಕೂ ಮೀರಿದ ವಾಹನಗಳ ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ಮೊಬೈಲ್‌ನ ಪ್ರಿಪೇಯ್ಡ ಸಿಮ್‌ನಂತೆ ಇದೊಂದು ಪೂರ್ವ ಹಣ ಪಾವತಿಯ ವ್ಯವಸ್ಥೆಯಾಗಿದೆ. ವಾಹನ ಟೋಲ್ ಕೇಂದ್ರದಲ್ಲಿರುವ “ಫಾಸ್ಟಾಗ್’ ಮಾರ್ಗದಲ್ಲಿ ಸಂಚರಿಸಿದಾಗ ಅಲ್ಲಿ ಅಳವಡಿಸಿರುವ ಯಂತ್ರ “ಫಾಸ್ಟಾಗ್’ ಕಾರ್ಡ್‌ನಲ್ಲಿರುವ ಮಾಹಿತಿ ಗ್ರಹಿಸಿ, “ಫಾಸ್ಟಾಗ್’ಗೆ ಸಂಯೋಜಿತ ಖಾತೆಯಿಂದ ಶುಲ್ಕದ ಹಣ ಕಡಿತಗೊಂಡು ಮೊಬೈಲ್‌ಗೆ ಸಂದೇಶ ಬರುತ್ತದೆ. “ಫಾಸ್ಟಾಗ್’ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದರಿಂದ ಖಾತೆಯಿಂದಲೇ ಹಣ ಸಂದಾಯವಾಗುತ್ತದೆ. ಇಲ್ಲವೇ ಇತರ ಪೇಮೆಂಟ್ ವ್ಯವಸ್ಥೆ ಮೂಲಕ ರಿಚಾರ್ಜ್ ಮಾಡಬಹುದಾಗಿದೆ. ವಾಹನಗಳ ಸಂಖ್ಯೆಯ ಆಧಾರದಲ್ಲಿ ಹಣ ರಿಚಾರ್ಜ್ ಮಾಡಬಹುದಾಗಿದೆ. ಇ-ಟೋಲ್‌ಗೆ ಹಣ ಸಂದಾಯ ಮಾಡಲು ಖಾತೆಯಲ್ಲಿ ಹಣ ಕಡಿಮೆಯಾದರೆ ಬಳಕೆದಾರರಿಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ಈ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಿಯಾಯಿತಿಯನ್ನೂ ಕಲ್ಪಿಸಲಾಗಿದೆ. “ಫಾಸ್ಟ್‌ಟ್ಯಾಗ್’ ಮಾರ್ಗದಲ್ಲಿ ಈ ಫಾಸ್ಟ್‌ಟ್ಯಾಗ್ ಕಾರ್ಡ್ ಇಲ್ಲದ ಮಾರ್ಗ ಬಂದರೆ ಸ್ವಲ್ಪ ದೂರ ಬಂದ ತಕ್ಷಣ ಸೈರನ್, ರೆಡ್ ಸಿಗ್ನಲ್ ಬರುತ್ತದೆ. ಜತೆಗೆ ಅಲ್ಲಿರುವ ಒಬ್ಬ ನಿರ್ವಾಹಕ ಸಹ ಆಗ ಆ ವಾಹನ ಪಕ್ಕದ ಶುಲ್ಕ ಪಾವತಿ ಮಾರ್ಗಕ್ಕೆ ತಿರುಗಿಸಿಕೊಳ್ಳುವಂತೆ ಸೂಚನೆ ನೀಡುತ್ತಾನೆ.
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.